ಜನಸಾಮಾನ್ಯರಿಗೆ ಸಮರ್ಪಕ ಮಾಹಿತಿ ನೀಡುವ ಜೊತೆಗೆ ಯೋಜನೆಗಳು ಅರ್ಹರಿಗೆ ತಲುಪಿಸಲು ಅಧಿಕಾರಿಗಳು ಕಂಕಣಬದ್ಧರಾಗಬೇಕು : ಶಾಂತನಗೌಡ

ನ್ಯಾಮತಿ: ಹಿಂದಿನ ಸರ್ಕಾರದ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ನನ್ನ ಅವಧಿಯಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಶಾಸಕ ಡಿ.ಜಿ.ಶಾಂತನಗೌಡ ಎಚ್ಚರಿಕೆ ನೀಡಿದರು.
ಅವರು ತಾಲ್ಲೂಕಿನ ತೀರ್ಥರಾ ಮೇಶ್ವರದ ಯುವ ಜನ ವಸತಿ ನಿಲಯದಲ್ಲಿ ಅವಳಿ ತಾಲ್ಲೂಕಿನ ಕಂದಾಯ ಇಲಾಖಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಅವಧಿಯಲ್ಲಿ ಕಂಡೂ ಕೇಳರಿಯದ ಭ್ರಷ್ಟಾಚಾರ, ಸ್ವಜನ -ಪಕ್ಷಪಾತ, ದುರಾಡಳಿತ, ರೈತರ ಬಗ್ಗೆ ನಿರಾ ಸಕ್ತಿ, ಕಾನೂನು ಪ್ರಕಾರ ದಾಖಲೆ ಗಳು ಸರಿಯಿದ್ದರೂ ವಿನಾ ಕಾರಣ ಕೆಲಸ ಮಾಡಿಕೊಡಲು ವಿಳಂಬ ಮಾಡಿರುವುದು ಗಮನಕ್ಕೆ ಬಂದಿ ದೆ. ಇವು ನಮ್ಮ ಕಾಂಗ್ರೆಸ್ ಸರ್ಕಾ ರದ ಅವಧಿಯಲ್ಲಿ ಮರುಕಳಿ ಸಬಾರದು ಎಂದು ಸೂಚನೆ ನೀಡಿ ದರು.ನಾನು ಸೂಚನೆ ನೀಡಿದ ಮೇಲೂ ಯಾವುದೇ ಅಧಿಕಾರಿಗಳು ತಪ್ಪು ಮಾಡಿದ್ದು ಕಂಡು ಬಂದರೆ ಅವರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಅಧಿಕಾರಿಗಳು ಜಾಗೃತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.


ತಾಲ್ಲೂಕಿನ ಮರ್ಯಾದೆ ಹರಾಜು: ಎ ಇಲಾಖೆಗಳ ಪ್ರತ್ಯೇಕವಾಗಿ ಸಭೆ ನಡೆಸಿದಾಗ ಅಧಿಕಾರಿಗಳ ತಪ್ಪುಗಳು ಸಾಲು-ಸಾಲಾಗಿ ಕಂಡು ಬಂದಿವೆ. ಅಧಿಕಾರಿಗಳ ಹಿತದೃಷ್ಟಿಯಿಂದ ಮತ್ತು ಅವಳಿ ತಾಲ್ಲೂಕಿನ ಮರ್ಯಾದೆಯನ್ನು ಕಾಪಾಡುವ ಸಲುವಾಗಿ ಸಲುವಾಗಿ ಪ್ರತೀ ಇಲಾಖೆಯ ಸಭೆ ನಡೆಸಲಾ ಗಿದ್ದು ಅಧಿಕಾರಿಗಳಿಗೆ ಇಂತಹ ತಪ್ಪುಗಳು ಮತ್ತೆ ಮರುಕಳಿಸ ಬಾರದೆಂದು ಸೂಚನೆ ನೀಡಲಾ ಗಿದೆ. ಬಹುತೇಕ ಎ ಇಲಾಖೆ ಗಳಲ್ಲೂ ರೈತರು ಸೇರಿದಂತೆ ಜನ ಸಾಮಾನ್ಯರನ್ನು ವೃಥಾ ಅಲೆದಾ ಡಿಸಿ ಹಣಕ್ಕಾಗಿ ಪೀಡಿಸಿರುವುದು ಕಂಡು ಬಂದಿದ್ದು ನೋಡಿ ಮನಸ್ಸಿಗೆ ಬೇಜರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆಣ್ಣು ಮಕ್ಕಳು ತವರು ಮನೆಗೆ ಹೋಗುವಂತೆ ರೈತರು ತಮ್ಮ ಕೆಲಸವಿzಗ ಮಾತ್ರವೇ ಕಂದಾಯ ಇಲಾಖೆಗೆ ಬರುತ್ತಾರೆ. ಇನ್ನು ಮುಂದೆ ಅಧಿಕಾರಿಗಳು ರೈತರಿಗೆ ಸಮಯಕ್ಕೆ ಸರಿಯಾಗಿ ಅವರ ಕೆಲಸ ಮಾಡಿಕೊಡಬೇಕು. ರೈತರು ಅವಶ್ಯವಿರುವ ದಾಖಲಾತಿ ಗಳನ್ನು ತರಲು ತಿಳಿಸಬೇಕು. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕಾರ್‍ಯ ನಿರ್ವಹಿಸಲೇಬೇಕು. ಮಳೆ ಹಾನಿ ಮತ್ತು ಬೆಳೆ ಹಾನಿಗೆ ಸಂಬಂಧಿಸಿದ ಅರ್ಜಿಗಳನ್ನೂ ವಿನಾ ಕಾರಣ ಪೆಂಡಿಂಗ್ ಇಡದೇ, ಭ್ರಷ್ಟಾಚಾರಕ್ಕೆ ಆಸ್ಪದ ಕೊಡದೇ ಸಮಯಕ್ಕೆ ಸರಿಯಾಗಿ ಅರ್ಜಿಗಳ ನ್ನು ವಿಲೇ ಮಾಡುವಂತೆ ಸೂಚಿಸಿ ದರು.ಸರ್ವೇ ಇಲಾಖೆಯವರ ಮೇಲೂ ಸಾಕಷ್ಟು ವಿಳಂಬ ಧೋರಣೆಯ ದೂರುಗಳು ಕೇಳಿ ಬಂದಿದ್ದು ಇನ್ನು ಮಂದೆ ಸಮಯಕ್ಕೆ ಸರಿಯಾಗಿ ಕೆಲಸ ನಿರ್ವಹಣೆ ಮಾಡಬೇಕು ಎಂದರು.
ಪ್ರಕೃತಿಯ ಮಡಿಲಲ್ಲಿ ಅಧಿಕಾರಿಗಳ ಸಭೆ: ಇತಿಹಾಸ ಪ್ರಸಿಧ್ಧ ತೀರ್ಥರಾಮೇಶ್ವರ ದೇವಸ್ಥಾನದ ಯುವ ಜನ ವಸತಿ ನಿಲಯದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದು ವಿಶೇಷ ವಾಗಿದ್ದಿತು. ಕಾರಣ ಜನ ಸಂದಣಿ ಇಲ್ಲದ ಹಚ್ಚ ಹಸಿರ ಚಾದ ರವನ್ನು ಹೊದ್ದ ಬೆಟ್ಟ-ಗುಡ್ಡಗಳು, ದಾರಿಯುದ್ದಕ್ಕೂ ಹಸಿರ ಝರಿ ಯಂತೆ ಕಾಣುವ ಹೊಲ -ಗzಗಳು ಎಂಥವರನ್ನೂ ಮಂತ್ರ ಮುಗ್ಧಗೊಳಿಸುವ ದೈವಿಕ ತಾಣವಾದ ಪವಿತ್ರ ಕ್ಷೇತ್ರ.
ಸಾಮಾನ್ಯವಾಗಿ ಶಾಸಕರಿದ್ದರೆ ತಮ್ಮ ಅಹವಾಲುಗಳನ್ನು ಹೇಳಿಕೊ ಳ್ಳಲು ಸದಾ ಜನಜಂಗುಳಿ ಇದ್ದೇ ಇರುತ್ತದೆ. ಹಾಗಾಗಿ ಪ್ರಥಮ ಸಭೆ ಯಾಗಿದ್ದರಿಂದ ಜನಸಾಮಾನ್ಯರಿ zಗ ಅಧಿಕಾರಿಗಳ ತಪ್ಪುಗಳನ್ನು ಹೇಳಿದಾಗ ಅಧಿಕಾರಿ ಗಳಿಗೂ ಮು ಜುಗರವಾಗಬಾರ ದೆಂದು ಇಲ್ಲಿ ಸಭೆ ಕರೆದು ಎ ರೀತಿಯಲ್ಲಿ ಬುದ್ಧಿ ಹೇಳಲಾಗಿದೆ ಎಂದು ಮಾ ಹಿತಿ ಲಭ್ಯವಾಗಿದೆ.
ಶೀಘ್ರವೇ ಬಗರ್ ಹುಕುಂ ಸಮಿತಿ: ಆದಷ್ಟು ಬೇಗ ಬಗರ್ ಹುಕುಂ ಸಮಿತಿ ರಚನೆ ಮಾಡಿ ಅರ್ಹರಿಗೆ ನ್ಯಾಯ ಒದಗಿಸಲಾಗು ವುದು ಎಂದು ಮಾಹಿತಿ ನೀಡಿದರು.
ಸರ್ಕಾರದಿಂದ ಎಂ.ಎಲ್.ಎ. ಗಳಿಗೂ ತರಬೇತಿ: ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾದ ೧೩೫ ಶಾಸಕರಿಗೂ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಅವರು ತರಬೇತಿ ನೀಡಿzರೆ ಎಂದು ಸಭೆಯ ಗಮ ನಕ್ಕೆ ತಂದರು. ಸರ್ಕಾರದ ಯೋಜ ನೆಗಳ ಬಗ್ಗೆ ಜನಸಾಮಾನ್ಯರಿಗೆ ಸಮರ್ಪಕ ಮಾಹಿತಿ ನೀಡುವುದರ ಜೊತೆಗೆ ಯೋಜನೆಗಳು ಅರ್ಹ ರಿಗೆ ತಲುಪಿಸಲು ಅಧಿಕಾರಿಗಳು ಕಂಕಣ ಬದ್ಧರಾಗಬೇಕೆಂದು ಕರೆ ನೀಡಿದರು.
ಅವಳಿ ತಾಲ್ಲೂಕಿನ ಅಧಿಕಾರಿ ಗಳ ಸಭೆಯಲ್ಲಿ ಉಪ ವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ಭೂ-ಮಾಪನ ಇಲಾಖೆಯ ಅಧಿಕಾರಿ ಸುರೇಶ್, ಹೊನ್ನಾಳಿ ತಹ ಶೀಲ್ದಾರ್ ತಿರುಪತಿ ಪಾಟೀಲ್, ಗ್ರೇಡ್-೨ ತಹಶೀಲ್ದಾರ್ ಸುರೇಶ್ ನಾಯ್ಕ್, ಉಪ- ತಹಶೀಲ್ದಾರ್‌ಗ ಳಾದ ಎ.ಕೆ.ಚಂದ್ರಪ್ಪ, ಮಂಜು ನಾಥ್ ಇಂಗಳಗೊಂದಿ, ರಾಜಸ್ವ ನಿರೀಕ್ಷಕ ರಾದ ದಿನೇಶ್ ಬಾಬು, ಗುರುಪ್ರಸಾದ್, ಜಯಪ್ರಕಾಶ್, ನ್ಯಾಮತಿ ತಹಶೀಲ್ದಾರ್ ಆರ್.ವಿ. ಕಟ್ಟಿ, ಗ್ರೇಡ್-೨ ತಹಶೀಲ್ದಾರ್ ಎ.ಸಿ. ನಂದ್ಯಪ್ಪ, ಕೆಂಚಮ್ಮ, ಚಂದ್ರ ಶೇಖರ್, ಸಂತೋಷ್, ಸುಧೀರ್, ಎಫ್. ಡಿ.ಎ.ಧನುಷ್ ಹಾಗೂ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ ಗ್ರಾಮ ಆಡಳಿತ ಗಾರರು ಉಪಸ್ಥಿತರಿದ್ದರು.