ವಲಯ ಅರಣ್ಯ ಅಧಿಕಾರಿಗಳಿಂದ ಕಿರಿಕಿರಿ ಪತಿಯ ಪರವಾಗಿ ಪತ್ನಿ ಆರೋಪ…

ಶಿವಮೊಗ್ಗ: ಅರಣ್ಯ ಇಲಾಖೆ ಡಿ ದರ್ಜೆಯ ಕ್ಷೇಮಾಭಿವೃದ್ಧಿ ಅರ ಣ್ಯ ವೀಕ್ಷಕರಾದ ಡಿ. ಶಿವಾನಂದ ಹಿರೇಕೊರಲಹಳ್ಳಿ ಕುಂಸಿ ಶಾಖೆ ಯಲ್ಲಿ ಗಸ್ತು ಕಾರ್ಯ ನಿರ್ವಹಿ ಸುತ್ತಿದ್ದು, ಆಯನೂರು ವಲಯ ಅರಣ್ಯಾಧಿಕಾರಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ದೈಹಿಕ ಹ ನಡೆಸಿzರೆ ಎಂದು ಶಿವಾನಂದ ಅವರ ಪತ್ನಿ ಛಾಯಾ ಅವರು ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದರು.
ವಲಯ ಅರಣ್ಯಾಧಿಕಾರಿ ಅವರು ಏ.೨೫ ರಂದು ಬೆಳಿಗ್ಗೆ ಶಿವಾನಂದ ಅವರನ್ನು ಮನೆಗೆ ಕರೆಯಿಸಿ ಅವರ ಬಳಿ ಇರುವ ಮೊಬೈಲ್ ತೆಗೆದುಕೊಂಡು ಅದರಲ್ಲಿರುವ ಮರ ಕಡಿತ ಮಾಡುವ ಛಾಯಾಚಿತ್ರಗಳನ್ನು ಡಿಲೀಟ್ ಮಾಡಿ ಮೊಬೈಲ್ ಅನ್ನು ನೆಲಕ್ಕೆ ಬಡಿದು ಪ್ರಾಣ ಬೆದರಿಕೆ ಹಾಕಿzರೆ. ಅಲ್ಲದೆ ಗಸ್ತು ಕರ್ತವ್ಯ ನಡೆಸುವ ಜಗವನ್ನು ಕೂಡ ಬದಲಾಯಿಸಿzರೆ. ನನ್ನ ಪತಿ ಕಳೆದ ೩೭ ವರ್ಷಗಳಿಂದ ಪ್ರಾಮಾಣಿಕ ವಾಗಿ ಯಾವುದೇ ಆಪಾದನೆ ಇಲ್ಲದೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಈ ಅಧಿಕಾರಿ ಬಂದ ನಂತರ ವಿನಾಕಾರಣ ಇವರ ಮೇಲೆ ಸೇಡಿನ ಕ್ರಮ ತೆಗೆದು ಕೊಂಡಿದ್ದಲ್ಲದೆ ದೈಹಿಕ ಮಾನಸಿಕ ಹಿಂಸೆ ನೀಡುತ್ತಿzರೆ. ಇದರಿಂದ ನಮ್ಮ ಇಡೀ ಕುಟುಂಬ ಮನ ನೊಂದಿದ್ದು, ನನ್ನ ಪತಿ ಶಿವಾನಂದ ಅವರು ಆತ್ಮಹತ್ಯೆ ಗೂಯತ್ನಿಸಿ ದ್ದರು. ಕುಟುಂಬಸ್ಥರು ಸಮಾಧಾನ ಹೇಳಿ ಕಳುಹಿಸಿzರೆ ಎಂದರು.
ದೈಹಿಕ ಹ ಮಾಡಿದ್ದಕ್ಕೆ ಸರ್ಕಾರಿ ಆಸ್ಪತ್ರೆಯ ದಾಖಲೆ ಗಳಿವೆ. ಮತ್ತು ಹ ಮಾಡಿದ್ದನ್ನು ಕಣ್ಣಾರೆ ಕಂಡ ಸಾಕ್ಷಿ ಇzರೆ. ಆದರೆ ಅವರ ಬಳಿ ಆಂಡ್ರಾಯಿಡ್ ಮೊಬೈಲ್ ಇಲ್ಲದೆ ಇರುವುದರಿಂದ ಚಿತ್ರಣ ದಾಖಲಿಸಲಾಗಿಲ್ಲ. ಈ ಬಗ್ಗೆ ಕುಂಸಿ ಠಾಣೆಗೆ ಲಿಖಿತ ದೂರು ನೀಡಿದ್ದು, ಆ ದಿನ ಗೃಹ ಸಚಿವರ ಭೇಟಿ ಇರುವುದರಿಂದ ಮುಂದಿನ ದಿನ ಬರಲು ಹೇಳಿದ್ದರು. ನಾನು ತಕ್ಷಣ ಆನ್‌ಲೈನ್ ದೂರು ದಾಖಲಿಸಿದ್ದೇನೆ. ಪೊಲೀಸರು ಸದರಿ ಆರೋಪಿಗೆ ದೂರಿನ ಬಗ್ಗೆ ಸ್ಪಷ್ಟೀಕರಣ ಕೇಳಿದಾಗ ಅವರು, ರಾಜಿಗೆ ಒಪ್ಪಿ ೧೦ಸಾವಿರ ರೂ. ನೀಡಲು ಬಂದರು. ನಮಗೆ ಅವರ ಮೇಲೆ ಯಾವುದೇ ದ್ವೇಷವಿಲ್ಲ. ಆದರೆ ಅವರಿಂದ ೧೬ಸಾವಿರ ರೂ. ಬೆಲೆಯ ಮೊಬೈಲ್ ಸಂಪೂರ್ಣ ಹಾನಿಗೊಳಗಾಗಿದೆ. ನನ್ನ ಪತಿಗೆ ಕರ್ತವ್ಯದ ಜಗ ಬದಲಾಯಿಸಿ ಮಾನಸಿಕ ಕಿರುಕುಳ ನೀಡುತ್ತಿ zರೆ. ಬೆದರಿಕೆ ಕೂಡ ಹಾಕಿzರೆ ಎಂದು ಆರೋಪಿಸಿದರು.
ಏ. ೨೫ರಿಂದ ಗೈರು ಹಾಜರಾ ಗಿzರೆ ಎಂದು ಸುಳ್ಳು ನೋಟೀಸ್ ಕೂಡ ನೀಡಿzರೆ. ಇಲಾಖೆಯಲ್ಲಿ ನನ್ನ ಪತಿಯ ಮೇಲೆ ಇದುವರೆಗೆ ಯಾವುದೇ ದೂರುಗಳಿರುವು ದಿಲ್ಲ. ಡಿಎಫ್‌ಒ ಮತ್ತು ಸಿಎಫ್ ಒ ಹಾಗೂ ಎಸ್‌ಪಿಯವರಿಗೂ ದೂರು ನೀಡಿದ್ದೇನೆ. ಡಿವೈಎಸ್‌ಪಿ ಅವರು ಕೂಡ ಈ ಬಗ್ಗೆ ಅರಣ್ಯಾಧಿಕಾರಿಯನ್ನು ಕರೆಯಿಸಿ ಮೂರು ಬಾರಿ ತಿಳಿ ಹೇಳಿzರೆ. ಅದರೂ ಅವರು ತಮ್ಮ ಹಳೆ ಚಾಳಿಯನ್ನೇ ಮುಂದುವರಿಸಿzರೆ ಎಂದು ಆರೋಪಿಸಿದ ಛಾಯಾ, ಕೂಡಲೇ ನನ್ನ ಪತಿಯ ಮೇಲೆ ಆದ ದೌರ್ಜನ್ಯಕ್ಕೆ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿzರೆ.
ಮುಂದೆ ನಮ್ಮ ಕುಟುಂಬದ ಮೇಲೆ ಏನಾದರೂ ಅನಾಹುತ ವಾದರೆ ಅದಕ್ಕೆ ಆಯನೂರು ವಲಯ ಅರಣ್ಯಾಧಿಕಾರಿ ಅವರೇ ಜವಾಬ್ದಾರಿಯಾಗುತ್ತಾರೆ. ಈ ಬಗ್ಗೆ ಹಿರಿಯ ಅರಣ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸುದ್ದಿಗೋಷ್ಟಿಯಲ್ಲಿ ಛಾಯಾ ದಂಪತಿಗಳು ಆಗ್ರಹಿಸಿzರೆ.