ಪರಿಸರ ಸಂರಕ್ಷಣೆಗೊಂದು ವಿನೂತನ ಪ್ರಯೋಗ: ಪ್ಲೇಟ್ ಬ್ಯಾಂಕ್ ಆರಂಭ

ಶಿವಮೊಗ್ಗ: ನಗರದ ಶಿವ ಮೊಗ್ಗ ರೋಟರಿ ಕ್ಲಬ್ ಹಾಗೂ ನವ್ಯಶ್ರೀ ಈಶ್ವರವನ ಚಾರಿಟೇ ಬಲ್ ಟ್ರಸ್ಟ್ ಸಹಯೋಗದಲ್ಲಿ ಶಿವಮೊಗ್ಗ ನಗರ ೧೦೦ ಅಡಿ ರಸ್ತೆ, ವಿನಾಯಕನಗರದ ನವ್ಯಶ್ರೀ ಅನ್ನ ಪೂರ್ಣದಲ್ಲಿ ಪರಿಸರ ಸಂರಕ್ಷಣೆ ಗೊಂದು ವಿನೂತನ ಪ್ರಯೋಗ ವಾಗಿ ಪ್ಲೇಟ್ ಬ್ಯಾಂಕ್ ಆರಂಭಿಸ ಲಾಯಿತು.
ಸಭೆ ಸಮಾರಂಭಗಳಿಗೆ ಉಚಿತ ವಾಗಿ ಊಟದ ಸ್ಟೀಲ್ ತಟ್ಟೆ, ಲೋಟ, ಚಮಚ, ಇತ್ಯಾದಿ ಪರಿಕರಗಳು ಯಾವುದೇ ಬಾಡಿಗೆ ಇಲ್ಲದೆ ಇಲ್ಲಿ ದೊರೆಯುತ್ತವೆ.
ಕಾರ್‍ಯಕ್ರಮ ಉದ್ಘಾಟಿಸಿ ಮಾತ ನಾಡಿದ ರೋಟರಿ ಸಹಾಯಕ ಗವರ್ನರ್ ಸುನೀತಾ ಶ್ರೀಧರ್ ಮಾತನಾಡಿ, ಪ್ರಾರಂಭದಿಂದಲೂ ರೋಟರಿ ಸಂಸ್ಥೆ ಜನಹಿತ ಕಾರ್ಯ ಕ್ರಮ ಮಾಡುತ್ತಾ ಬಂದಿದೆ. ಗ್ರಾಮಾಂತರ ಪ್ರದೇಶದಲ್ಲಿ ಶಾಲೆಗಳ ನಿರ್ಮಾಣ, ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ, ,ಪರಿಸರ ರಕ್ಷಣೆ ಸಂಬಂಧಿಸಿದ ಕಾರ್ಯ ಕ್ರಮಗಳು, ಮಹಿಳಾ ಆರೈಕೆ ಮತ್ತು ಸಬಲೀಕರಣ, ಪಲ್ಸ್ ಪೋಲಿಯೋ,ಕುಷ್ಠರೋಗ ನಿವಾ ರಣೆ ಸೇರಿದಂತೆ ಅನೇಕ ರಾಷ್ಟ್ರೀಯ ಆರೋಗ್ಯ ಕಾರ್‍ಯಕ್ರಮಗಳ ಸಹಭಾ ಗಿತ್ವ ಮಾಡುತ್ತಾ ಬಂದಿದೆ ಎಂದರು.
ನಾವು ಮಾಡಿದ ಪಾಪ ನಾವೇ ತೊಳೆದುಕೊಳ್ಳಬೇಕು ಎಂಬಂತೆ ಪರಿಸರದ ಮೇಲೆ ನಾಗರಿಕರು ಮಾಡಿರುವ ಅನಾಚಾರದಿಂದ ದುಷ್ಪರಿಣಾಮ ಉಂಟಾಗಿದ್ದು, ಇದನ್ನು ಸರಿಪಡಿಸಲು ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ನಿರ್ಮೂ ಲನೆಗೆ ಕೈ ಜೋಡಿಸಲು ಹಾಗೂ ಪ್ರಾಣಿ ಪಕ್ಷಿಗಳಿಗೆ ಮಾರಕವಾಗುವ ಪರಿಕರಗಳ ಪರ್ಯಾಯವಾಗಿ ಪ್ಲೇಟ್ ಬ್ಯಾಂಕ್ ಅನ್ನು ಆರಂಭಿಸಿ ದ್ದೇವೆ. ನಾಗರಿಕರು ಇದರ ಸದುಪ ಯೋಗ ಪಡೆಯುವಂತೆ ವಿನಂತಿಸಿ ದರು.
ರೋ. ಅಧ್ಯಕ್ಷ ಎನ್.ವಿ. ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಟರಿ ಫೌಂಡೇಷನ್ ವತಿಯಿ ಂದ ಜಿ ಮಟ್ಟದ ಗ್ರ್ಯಾಂಟ್ ನಲ್ಲಿ ಈ ವಿಶೇಷ ಕಾರ್ಯಕ್ರಮಕ್ಕೆ ೧.೨೫ ಲಕ್ಷ ನೀಡಲಾಗಿದೆ. ನಿರ್ವ ಹಣೆ ಜವಾಬ್ದಾರಿಕೂಡ ನಮ್ಮ ಮೇಲಿದೆ ಇದನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನಾಗರಿಕರಿಗೆ ಪರಿಸರದ ಮೇಲೆ ಕಾಳಜಿ ಬರುವಂತೆ ಜಗೃತಿ ಮೂಡಿಸವುದು ಕೂಡ ನಮ್ಮ ಉದ್ದೇಶ ಎಂದರು.
ಕಾರ್ಯಕ್ರಮದಲ್ಲಿ ರೋ. ಭಾವಿ ಅಧ್ಯಕ್ಷ ಸೆಂಥಿಲ್, ಪ್ರಮುಖರಾದ ಶ್ರೀಧರ್, ಭಾರ್ಗವಿ ಭಟ್, ಗೋಪಾಲಕೃಷ್ಣ ಗುಪ್ತ, ಸೂರ್ಯನಾರಾಯಣ ಮತ್ತಿತರರಿದ್ದರು.