ಶಾಹಿ ಎಕ್ಸ್‌ಪೋರ್ಟ್ಸ್ ಘಟಕದಿಂದ ಪರಿಸರ ನಾಶ ಆರೋಪ : ಸೂಕ್ತ ಕ್ರಮಕ್ಕೆ ಆಗ್ರಹ

Machenahalli

ಶಿವಮೊಗ್ಗ: ಶಾಹಿ ಎಕ್ಸ್ ಪೋರ್ಟ್ಸ್ ಘಟಕದಿಂದ ಪರಿಸರ ನಾಶವಾಗುತ್ತಿದೆ ಎಂದು ಆರೋ ಪಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮಾಚೇನಹಳ್ಳಿ ಕೈಗಾರಿಕಾ ಸಂಘದ ಪದಾಧಿಕಾರಿಗಳು ಉದ್ಯಮಿಗಳು ಇಂದು ಪ್ರತಿಭಟನೆ ಮೂಲಕ ಡಿಸಿಗೆ ಮನವಿ ಸಲ್ಲಿಸಿದರು.
ಶಾಹಿ ಎಕ್ಸ್‌ಪೋರ್ಟ್ಸ್ ಘಟಕ ವನ್ನು ಪರಿವೀಕ್ಷಣೆ ಮಾಡಿದಾದ ಅದರಿಂದ ಆಗುತ್ತಿರುವ ಪರಿಸರ ನಾಶ ಸ್ಪಷ್ಟವಾಗಿದೆ. ಕೈಗಾರಿಕಾ ಘಟಕಗಳಿಗೆ ಅವರ ಚಿಮಣಿ ಯಿಂದ ಹೊರಬರುತ್ತಿರುವ ರಾಸಾ ಯನಿಕ ಮಿಶ್ರಿತ ವಿಷಪೂರಿತ ದೂಳು ಹಾಗೂ ದುರ್ವಾಸನೆ ಯಿಂದ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಶಾಹಿ ಎಕ್ಸ್ ಪೋರ್ಟ್ಸ್ ಘಟಕವನ್ನು ಮುಚ್ಚಲು ಯೋಗ್ಯವಾದದು ಎಂದು ನಿರ್ಧ ರಿಸಿ ಮುಚ್ಚುವ ಆದೇಶವನ್ನು ಈಗಾ ಗಲೇ ನೀಡಿzರೆ. ಇದರಿಂದ ಆಗುವ ಸಮಸ್ಯೆ ಗಳ ಬಗ್ಗೆ ಜಿಧಿಕಾರಿಗಳಾದ ತಮ್ಮ ಗಮನಕ್ಕೂ ಬಂದಿದೆ. ಕೆರೆ ಕಟ್ಟೆಗಳು, ಕೈಗಾರಿಕಾ ಘಟಕಗಳು ಹೀಗೆ ಹಲವು ರೀತಿ ಯಲ್ಲಿ ದುಷ್ಟರಿಣಾಮ ಉಂಟಾಗು ತ್ತಿದೆ. ಅಂತರ್ಜ ಲ ಕಲುಷಿತವಾ ಗುತ್ತಿದೆ. ಆದ್ದರಿಂದ ಈ ಘಟಕ ವನ್ನು ತಕ್ಷಣ ಮುಚ್ಚಲು ಆದೇಶ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಂ.ಎ. ರಮೇಶ್ ಹೆಗಡೆ, ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿ ನಾಥ್, ವಸಂತ್ ಕುಮಾರ್, ಎಸ್.ಪಿ. ಚಂದ್ರು, ಪ್ರವೀಣ್ ಹಾಗೂ ಪದಾಧಿಕಾರಿಗಳು ಮತ್ತು ನಿದಿಗೆ ಹೋಬಳಿ ಗ್ರಾಮಸ್ಥರು ಇದ್ದರು. ಪ್ರತಿಭಟನೆ ನಂತರ ಡಿಸಿ ಗಳೊಂದಿಗೆ ಸಭೆ ನಡೆಸಲಾಯಿತು.