ಬಿವೈಆರ್ ಗೆಲುವಿಗೆ ಪಕ್ಷದಿಂದ ಸಕಲ ಸಿದ್ದತೆ…

B-L-SANTHOSH

ಶಿವಮೊಗ್ಗ :ಲೋಕಸಭಾ ಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ಆರ್ ಅವರನ್ನು ಗೆಲ್ಲಿಸಲು ಪಕ್ಷ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿ ರುವುದಾಗಿ ಬಿಜೆಪಿ ಜಿ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್ ಹೇಳಿದರು.
ನಗರದ ಬಂಟರ ಸಭಾ ಭವನ ದಲ್ಲಿ ತಮ್ಮ ಪಕ್ಷ ಆಯೋಜಿಸಿದ್ದ ಮಹಾಶಕ್ತಿ ಸಂಕಲ್ಪ ಸಭೆಯಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತ ಈ ೧೮ನೇ ಲೋಕಸಭೆಯು ಬಹಳ ಪ್ರಮುಖವಾಗಿದ್ದು ಶಿವಮೊಗ್ಗ ಕ್ಷೇತ್ರ ದಿಂದ ಪಕ್ಷದ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರನ್ನು ಗೆಲ್ಲಿಸುವು ದರ ಮೂಲಕ ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಗಳನ್ನಾಗಿ ಮಾಡುವ ಜವಾ ಬ್ದಾರಿ ಜಿಯ ಮಹಾ ಶಕ್ತಿ ಕೇಂದ್ರ, ಮಂಡಲದ ಪ್ರಮುಖರು, ಪ್ರಚಾರ ಕರು, ಸಹ ಪ್ರಚಾರಕರ ಮೇಲಿದೆ ಎಂದು ತಿಳಿಸಿದರು.
ಚುನಾವಣೆ ಗೆಲ್ಲಲು ತಮ್ಮ ಪಕ್ಷ ಎಲ್ಲ ರೀತಿಯಿಂದ ಎ ಹಂತ ಗಳಲ್ಲೂ ತಯಾರಿ ಮಾಡಿಕೊಳ್ಳು ತ್ತಿದೆ. ಗೆಲ್ಲುವ ಎ ತಂತ್ರಗಳನ್ನೂ ಅಳವಡಿಸಿಕೊಳ್ಳುವತ್ತ ಗಮನ ಹರಿಸಿದೆ. ಸಧೃಡ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಜಿಯ ಕೊಡುಗೆ ಗಮನಾರ್ಹವಾಗಿದೆ ಎಂದರು.
ಚುನಾವಣೆಗೆ ಸಂಬಂಧಿಸಿ ದಂತೆ ಜಿಯಲ್ಲಿ ಪಕ್ಷ ೨೦೦೦ ಸಭೆಗಳನ್ನು ನಡೆಸಿ ಯಶಸ್ಸನ್ನು ಕಾಣಬೇಕು ಎಂಬ ಸಂಕಲ್ಪ ಮಾಡಿದೆ. ಇಲ್ಲಿಯವರೆಗೆ ೧೦೦೦ಕ್ಕೂ ಹೆಚ್ಚು ಸಭೆಗಳನ್ನು ಆಯೋಜಿಸಿ ಯಶಸ್ಸಿನತ್ತ ಅಡಿಯಿ ಡುತ್ತಿzವೆ ಎಂದು ಮಾಹಿತಿ ನೀಡಿದರು.
ಬರುವ ದಿನಗಳಲ್ಲಿ ಆಯಾ ಪ್ರದೇಶಗಳಲ್ಲಿ ಇರುವ ಬಹು ಭಾಷಿಕರ ಮನ ಸೆಳೆಯಲು ಹೊರಗಿ ನ ರಾಜ್ಯಗಳಿಂದ ಆಯಾ ಭಾಷಿಕ ಪ್ರಮುಖರನ್ನು ಕರೆತರಲಾಗು ವುದು. ಆ ಮೂಲಕ ಪ್ರಧಾನಿ ಮೋದಿ ಹಾಗೂ ಕೇಂದ್ರ ದಲ್ಲಿನ ಬಿಜೆಪಿ ಸರ್ಕಾರ ದೇಶದ ಜನತೆಗೆ ನೀಡಿದ ಕಾರ್ಯಕ್ರಮಗಳ ಮನವರಿಕೆ ಮಾಡಿಕೊಡಲಾ ಗುವುದು. ತಮಿಳುನಾಡಿನ ಬಿಜೆಪಿ ಮಹಿಳಾ ಮೋರ್ಚಾದ ೧೦ಕ್ಕೂ ಅಧಿಕ ಪ್ರಮುಖ ಈಗಾಗಲೇ ಶಿವಮೊಗ್ಗದಲ್ಲಿ ಬೀಡುಬಿಟ್ಟಿದ್ದು ತಮಿಳು ಮತದಾರರನ್ನು ಸೆಳೆಯುತ್ತಿ zರೆ. ಇಂದು ಅಣ್ಣಾಮಲೈ ಕೂಡ ಬಹಿರಂಗ ಸಭೆ ಮೂಲಕ ನವ ಮತದಾರರನ್ನು ಸೆಳೆಯಲು ಸಭೆ ನಡೆಸುತ್ತಿzರೆ. ಏ/ ೨೬ ಮತ್ತು ೨೭ ರಂದು ಯಡಿಯೂರಪ್ಪ ಎರಡು ದಿನಗಳ ಕಾಲ ಶಿವಮೊಗ್ಗ ಜಿಯ ಪ್ರಚಾರ ಮಾಡಲಿ zರೆ. ಇನ್ನೂ ಅನೇಕ ಸ್ಟಾರ್ ಕ್ಯಾಂಪೇನರ್‌ಗಳು ಜಿಗೆ ಪ್ರಚಾರಕ್ಕೆ ಬರಲಿzರೆ ಎಂದು ವಿವರಿಸಿದರು.
ಇದಕ್ಕೂ ಮುನ್ನ ಪಕ್ಷದ ಸಂಘಟನಾ ಪ್ರಧಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಮುಖರಾದ ಆರ್.ಕೆ. ಸಿದ್ರಾಮಣ್ಣ, ಜಿ ಪ್ರಭಾರಿ ರಘುಪತಿ ಭಟ್, ಎಂ.ಬಿ. ಭಾನುಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.