ಪೌರ ಕಾರ್ಮಿಕರಿಗೆ ವಿಮಾನ ಪ್ರವಾಸ: ಬಿವೈಆರ್

ಶಿವಮೊಗ್ಗ : ತಮ್ಮ ಆರೋಗ್ಯ ವನ್ನು ಲೆಕ್ಕಿಸದೆ ನಗರದ ಜನರ ಸ್ವಾಸ್ತ್ಯ ಕಾಪಾಡುವ ಉದ್ದೇಶದಿಂದ ಪೌರ ಕಾರ್ಮಿಕರು ಸಲ್ಲಿಸುತ್ತಿರುವ ಸೇವೆ ಅಪಾರವಾದದ್ದು ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.
ನಗರದ ಕುವೆಂಪುರಂಗ ಮಂ ದಿರದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಪೌರಕಾರ್ಮಿಕರ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯ ವಿಲ್ಲ. ಪೌರಕಾರ್ಮಿಕರು ತಮ್ಮ ಜೀವವನ್ನು ಪಣಕಿಟ್ಟು ಅಂದಿನ ತುರ್ತು ಸಂದರ್ಭದಲ್ಲಿ ಸೇವೆ ಸಲ್ಲಿಸಿದ್ದಾರೆ. ಪೌರಕಾರ್ಮಿಕರು ಪ್ರತಿನಿತ್ಯ ಸಲ್ಲಿಸುತ್ತಿರುವ ಸೇವೆಗೆ ಪ್ರತಿಯಾಗಿ ನಾಡಿನ ಪ್ರಧಾನಿಗಳೇ ಕಾಶಿಯಲ್ಲಿ ಪೌರಕಾರ್ಮಿಕರ ಪಾದಪೂಜೆ ಮಾಡಿದ್ದರು ಎಂದು ತಿಳಿಸಿದರು.
ಪೌರಕಾರ್ಮಿಕರುಗಳು ಎಂದರೆ ಕೆಲವರು ಈ ಹಿಂದೆ ಮೂಗು ಮುರಿಯುತ್ತಿದ್ದರು. ಕೆಲವರು ಅವರನ್ನು ಕೇವಲವಾಗಿ ಕಾಣುತ್ತಿದ್ದರು. ಸಂವಿಧಾನ ಇಂದು ಪೌರಕಾರ್ಮಿಕರನ್ನ ಗೌರವದಿಂದ ನೋಡಲು ಅವಕಾಶ ಕಲ್ಪಿಸಿದೆ. ಪೌರಕಾರ್ಮಿಕರ ನೇಮಕಾತಿ ಮತ್ತು ಬೇಡಿಕೆ ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಏನಾಗಬೇಕು ಅದನ್ನು ಮಾಡಲು ಸಿದ್ದವಿದೆ ಎಂದರು.
ಗ್ರೀನ್ ಸಿಟಿ ಕ್ಲೀನ್ ಸಿಟಿ ಪ್ರಶಸ್ತಿ ಗೆ ಪೌರಕಾರ್ಮಿಕರು ಕಾರಣ. ಮುಂದಿನ ದಿನಗಳಲ್ಲಿ ವಿಮಾನದ ಮೂಲಕ ಪೌರಕಾರ್ಮಿಕರನ್ನ ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗುವುದು ಎಂಬ ಭರವಸೆ ನೀಡಿದರು.
ಈ ಹಿಂದೆ ಸಚಿವರಾಗಿದ್ದ ಈಶ್ವರಪ್ಪ ನವರು ಪೌರಕಾರ್ಮಿಕರಿ ಗೆಪ್ರವಾಸ ಕಲ್ಪಿಸಿದ್ದರು. ರೈಲು ಮತ್ತು ಇತರೆ ವಾಹನಗಳಲ್ಲಿ ಪ್ರವಾಸ ಮಾಡಿಸಿದ್ದರು. ಆಗ ವಿಮಾನ ಇನ್ನೂ ಆರಂಭವಾಗಿ ರಲಿಲ್ಲ ಮುಂದಿನ ದಿನಗಳಲ್ಲಿ ವಿಮಾನಗಳಲ್ಲಿ ಪ್ರವಾಸ ಕಳುಹಿ ಸುವುದಾಗಿ ಸಂಸದ ಬಿ.ವೈ. ರಾಘವೇಂದ್ರ ಭರವಸೆ ನೀಡಿದರು.
ಇದೇ ವೇಳೆ ೧೦ ಜನ ಪೌರ ಕಾರ್ಮಿಕರನ್ನು ಸನ್ಮಾನಿಸಲಾ ಯಿತು.ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಮೇಯರ್ ಶಿವಕುಮಾರ್, ಸದಸ್ಯ ರಾದ ಯೋಗೀಶ್, ರಮೇಶ್ ಹೆಗ್ಡೆ, ಸುರೇಖಾ ಮುರುಳೀಧರ್, ಸುನಿತಾ ಅಣ್ಣಪ್ಪ, ರೇಖಾ ರಂಗ ನಾಥ್, ಆಯುಕ್ತ ಮಾಯಣ್ಣ ಗೌಡ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಗೋವಿಂದಪ್ಪ ಇದ್ದರು.