ಅಗ್ರಸೇನಾ ಚಿತ್ರ ನಾಳೆ ರಾಜ್ಯಾದ್ಯಂತ ತೆರೆಗೆ…

ಶಿಕಾರಿಪುರ : ನಿರ್ಮಾಪಕಿ ಜಯರಾಮ್ ರೆಡ್ಡಿ ಅವರ ವೈಷ್ಣವಿ ಸಿನಿಮಾ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಅಗ್ರಸೇನಾ ಚೊಚ್ಚಲ ಕನ್ನಡ ಚಲನ ಚಿತ್ರಕ್ಕೆ ಹೆಸರಾಂತ ನಿರ್ದೇಶಕ ಭಜರಂಗಿ ಹರ್ಷ ಅವರ ಜೊತೆ ಸಹನಿರ್ದೇಶಕರಾಗಿ ಹತ್ತು ವರ್ಷ ಹೆಚ್ಚು ಕೆಲಸ ಮಾಡಿದ ಅನುಭವಿ ಮುರುಗೇಶ್, ಕಣ್ಣಪ್ಪ ಚಿತ್ರದ ನಿರ್ದೇಶಕರಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿzರೆ ಎಂದು ಪ್ರಮುಖ ಪಾತ್ರ ವಹಿಸಿರುವ ನಾಯಕ ನಟ ಅಗಸ್ತ್ಯ ಬೆಳಗೆರೆ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಚಲನ ಚಿತ್ರದಲ್ಲಿ ನಾಯಕಿ ಯಾಗಿ ರಚನಾ ದರ್ಶನ್, ಇನ್ನೋರ್ವ ನಾಯಕ ನಟ ಅಮರ್ ವಿರಾಜ, ಪೋಷಕ ಪಾತ್ರದಲ್ಲಿ ಹಿರಿಯ ನಾಯಕ ನಟ ರಾಮಕೃಷ್ಣ ಮನೋಜ್ಞವಾಗಿ ನಟಿಸಿzರೆ ಅಗ್ರಸೇನಾ ಚಿತ್ರ ಅವರ ೨೦೦ನೇ ಚಿತ್ರವಾಗಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಈ ಚಿತ್ರವು ಡಬಲ್ ಟ್ರ್ಯಾಕ್ ಚಿತ್ರವಾಗಿದ್ದು ಹಳ್ಳಿಯ ಜೊತೆ ಪಟ್ಟಣದ ಸಂಬಂಧ ಹೊಂದಿರುವ ಚಿತ್ರವಾಗಿದೆ. ಸಿಟಿ ಕಂಟೆಂಟ್‌ನಲ್ಲಿ ನಾಯಕ ನಟರಾಗಿ ಅಮರ್ ವಿರಾಜ್ ಅಭಿನಯಿಸಿದ್ದು ಹಳ್ಳಿಯ ಕಂಟೆಂಟ್‌ನಲ್ಲಿ ನಾನು ಆದಿಶೇಷ ಹೆಸರಿನಲ್ಲಿ ಅಭಿನಯಿಸಿರುತ್ತೆನೆ. ಚಿತ್ರದ ಮೂಲ ಉದ್ದೇಶ ಹಳ್ಳಿಯ ಲ್ಲಿಯೇ ಹೆಚ್ಚಿನ ಕರುಣೆ, ಮಾನವೀಯ ಮೌಲ್ಯಗಳು ಇವೆ ಎಂದು ಪ್ರತಿಪಾದಿಸುವುದಾಗಿದೆ ಎಂದರು.
ಈ ಚಿತ್ರದಲ್ಲಿ ಐದು ಹಾಡು ಗಳಿದ್ದು ಎಲ್ಲವೂ ಅರ್ಥಗರ್ಭಿತ ವಾಗಿದೆ. ಚಿತ್ರದ ಇಂಟ್ರಡಕ್ಷನ್ ಸಾಂಗ್ ಅನ್ನು ಕರ್ನಾಟಕದ ಚಕ್ರವರ್ತಿ ಡಾ.ಶಿವಣ್ಣನವರು ಬಿಡುಗಡೆಗೊಳಿಸಿದ್ದು ಈಗಾಗಲೇ ಯೂಟ್ಯೂಬ್‌ನಲ್ಲಿ ೧೦ ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿzರೆ. ದಸರಾ ಗೊಂಬೆ ಎಂಬ ಹಾಡನ್ನು ನಟ ವಿನೋದ್ ರಾಜ್ ಬಿಡುಗಡೆ ಗೊಳಿಸಿದ್ದು ಇದು ಕೂಡ ಯೂಟ್ಯೂಬ್‌ನಲ್ಲಿ ಪ್ರಶಂಸೆ ಪಡೆದಿದೆ. ಚಿತ್ರದ ಟೀಸರ್ ಹಾಗೂ ಟ್ರೈಲರ್‌ರನ್ನು ನಟ ಭಯಂಕರ ಧನಂಜಯ್ ಡಾಲಿ ಬಿಡುಗಡೆ ಮಾಡಿರುತ್ತಾರೆ ಎಂದು ತಿಳಿಸಿದರು.
ಇತ್ತೀಚಿಗೆ ಕಲಾಭಿಮಾನಿಗಳು ಆಕ್ಷನ್ ಚಿತ್ರ ವನ್ನು ಅಪೇಕ್ಷಿಸುತ್ತಿದ್ದು ಅದಕ್ಕಾಗಿಯೇ ಹೊಸದಾಗಿ ನಟನೆ ಮಾಡುತ್ತಿದ್ದರು ಕೂಡಾ ಆಕ್ಷನ್ ರಿಸ್ಕ್ ಅನ್ನು ತೆಗೆದುಕೊಳ್ಳಲಾಗಿದೆ. ಚಲನ ಚಿತ್ರದಲ್ಲೂ ಕೂಡ ಮೂರು ಫೈಟ್‌ಗಳಿದ್ದು ಅದರ ಜೊತೆಗೆ ಒಂದು ಬಿಟ್ ರೈನ್‌ಫೈಟ್ ಕೂಡ ಇದ್ದು ಹಿರಿಯ ನಟ ಪ್ರಖ್ಯಾತ ನಟ ಅಲ್ಲು ಅರ್ಜುನ್ ನಟಿಸಿರುವ ಪುಷ್ಪ ಚಿತ್ರದಲ್ಲಿ ಇರುವಂತೆ ರೋಪ್ ಸ್ಟಂಟ್‌ಗಳನ್ನು ಅಮೋಘವಾಗಿ ಚಿತ್ರಿಕರಿಸಲಾಗಿದೆ. ಇದನ್ನು ಆಗ ಲೇ ಕಲಾಭಿಮಾನಿಗಳು ಪ್ರಶಂಸಿ ರುತ್ತಾರೆ ಎಂದು ತಿಳಿಸಿದರು.
ಯಾವುದೇ ತರಹದ ಮುಜು ಗರ ತರುವಂತಹ ಅಶ್ಲೀಲತೆ ಅಂತಹ ಚಲನ ಚಿತ್ರವಾಗಿರದೆ ಕುಟುಂಬ ಆಧಾರಿತ ಚಲನ ಚಿತ್ರವಾಗಿದೆ ಎಂದರು.
ರಾಜ್ಯದ ೧೦೦ ಚಿತ್ರಮಂದಿರ ಗಳಲ್ಲಿ ಏಕಕಾಲಕ್ಕೆ ಜೂ. ೨೩ರ ನಾಳೆ ಬಿಡುಗಡೆಯಾಗಲಿದ್ದು ಕನ್ನಡ ಅಭಿಮಾನಿಗಳು ಹಾಗೂ ಕಲಾ ರಸಿಕರು ಕಲಾ ಅಭಿಮಾನಿಗಳು ಚಿತ್ರವನ್ನು ತಪ್ಪದೆ ಟಾಕೀಸ್‌ಗಳಲ್ಲಿ ನೋಡಿ ಹೊಸದಾಗಿ ಸಿನಿಮಾ ರಂಗಕ್ಕೆ ಸಿನಿಮಾ ರಂಗಕ್ಕೆ ಪಾದ ರ್ಪಣೆ ಮಾಡುತ್ತಿರುವ ನಮ್ಮಂತಹ ಹೊಸ ನಟರಿಗೆ ಪ್ರೋತ್ಸಾಹಿಸ ಬೇಕೆಂದು ವಿನಂತಿಸಿದರು.
ಸುದ್ದಿ ಗೋಷ್ಟಿಯಲ್ಲಿ ಇನ್ನೋ ರ್ವ ನಿರ್ದೇಶಕ ಪಟ್ಟಣದ ವೈಭವ್ ಬಸವರಾಜ್ ಉಪಸ್ಥಿತರಿದ್ದರು.