ಮಾದಕ ದ್ರವ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಎಬಿವಿಪಿ ಮನವಿ

ಶಿವಮೊಗ್ಗ: ಪೊಲೀಸ್ ಇಲಾಖೆ ಜಿಯಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಸೇವನೆಗೆ ಕಡಿವಾಣ ಹಾಕಲು ಮುಂದಾಗಿರುವುದು ಶ್ಲಾಘನೀಯ. ಹಾಗೆಯೇ ಮಾದಕ ದ್ರವ್ಯ ಮಾರಾಟ ಮಾಢುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕು ಎಂದು ಎಬಿವಿಪಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿದೆ.
ಕಳೆದ ಮೂರು ದಿನಗಳ ಹಿಂದೆ ಶಿವಮೊಗ್ಗದ ಪೊಲೀಸ್ ಇಲಾಖೆ ಯು ಮನೆಯಲ್ಲಿ ಗಾಂಜ ಬೆಳೆ ಯುತ್ತಿದ್ದ ಮತ್ತು ಅದನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಗಳ ಮೇಲೆ ದಾಳಿ ಮಾಡಿ ಅವರನ್ನು ಬಂಧಿಸಿರುವುದು ಶ್ಲಾಘನೀಯ. ಗಾಂಜ ಬೆಳೆಯುತ್ತಿದ್ದ ಮತ್ತು ಮಾರಾಟ ಮಾಡುತ್ತಿದ್ದ ಪ್ರಕರಣ ದಲ್ಲಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸಿಕ್ಕಿಬಿದ್ದಿರುವುದು ವಿಷಾದನೀಯ ಎಂದು ಮನವಿ ದಾರರು ತಿಳಿಸಿzರೆ.
ಜಿಯಾದ್ಯಂತ ಗಾಂಜ ಸೇರಿದಂತೆ ಹಲವಾರು ಮಾದಕ ದ್ರವ್ಯಗಳು, ವಿದ್ಯಾರ್ಥಿಗಳಿಗೆ ಸಿಗು ತ್ತಿವೆ ಇದರಿಂದ ಆ ವಿದ್ಯಾರ್ಥಿಗಳು ದಾರಿ ತಪ್ಪುತ್ತಿzರೆ. ಇದಷ್ಟೇ ಅಲ್ಲದೆ ಆ ಮಾದಕ ದ್ರವ್ಯಗಳ ಮತ್ತಿ ನಲ್ಲಿ ಬೇರೆ ರೀತಿಯ ಅಪರಾಧ ಕೃತ್ಯಗಳು ಸಹ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಮಾದಕ ದ್ರವ್ಯಗಳ ವಿರೋಧಿ ಹಲವಾರು ಜಗೃತಿ ಕಾರ್ಯಕ್ರಮ ಗಳನ್ನು ವಿದ್ಯಾರ್ಥಿಗಳಿಗೆ ಹಮ್ಮಿಕೊ ಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿzರೆ.
ಮಾದಕ ದ್ರವ್ಯಗಳ ಮಾರಾಟ ಮತ್ತು ಸೇವನೆಯಲ್ಲಿ ಭಾಗಿಯಾ ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಈ ಸಂದರ್ಭ ದಲ್ಲಿ ಎಬಿವಿಪಿ ಕಾರ್‍ಯಕರ್ತರು ಇದ್ದರು.