ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತ ಮಹಿಳೆ ಸಾಕಷ್ಟು ಒತ್ತಡ ಸನ್ನಿವೇಶ ಉದುರಿಸುತ್ತಿದ್ದಾಳೆ: ಯಡಗೆರೆ

ಶಿವಮೊಗ್ಗ: ಮಹಿಳೆಯರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸೃಜನಶೀಲತೆ ಹೆಚ್ಚಿಸಿಕೊಂಡರೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸಬಹುದು ಎಂದು ಶಿವಮೊಗ್ಗ ಜಿ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಹೇಳಿದರು.
ಇಲ್ಲಿನ ಪತ್ರಿಕಾಭವನದಲ್ಲಿ ಶನಿವಾರ ಮನ್ವಂತರ ಮಹಿಳಾ ಮಂಡಳ, ಶಿವಮೊಗ್ಗ ಜಿ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಮಹಿಳೆಯರಿಗಾಗಿ ಮಹಿಳಾ ಕೇಂದ್ರಿತವಾದ ಮತ್ತೆ ಆಡೋಣ ಬನ್ನಿ ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊರುವ ಮಹಿಳೆ ಸಾಕಷ್ಟು ಒತ್ತಡ ಸನ್ನಿವೇಶಗಳನ್ನು ಎದುರಿಸುತ್ತಿzರೆ. ಕುಟುಂಬ ವೃತ್ತಿ ನಿರ್ವಹಣೆ ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ಮಹಿಳೆ ಹೆಚ್ಚು ತೊಡಗಿಕೊಳ್ಳಬೇಕು. ಎಂತz ಕಠಿಣ ಸಂದರ್ಭಗಳನ್ನು ನಿಭಾಯಿ ಸುವಂತ ಸೃಜನಶೀಲತೆ ಮಹಿಳೆ ಅಗತ್ಯವಾಗಿದ್ದು, ಸಾಮರ್ಥ್ಯಕ್ಕೆ ಇಂಬು ನೀಡುವಂತೆ ಸಾಮಾನ್ಯ eನವನ್ನು ವಿಸ್ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಓದಿನಲ್ಲಿ ಮಹಿಳೆಯರು ಯಾವಾಗಲು ಮುಂದೆ ಇರು ತ್ತಾರೆ. ಓದಿನಾಚೆಗಿನ ಪ್ರಪಂಚದ ಬಗ್ಗೆಯೂ ಅವರು eನ ಸಂಗ್ರಹಿ ಸಬೇಕು. ಮಹಿಳೆ ತನ್ನ ಚರ್ಚೆ, ಕಾರ್ಯಚಟುವಟಿಕೆಗಳನ್ನು ಸೀಮಿತಗೊಳಿಸಿಕೊಳ್ಳದೆ, ಸಮಗ್ರ ವಿಷಯಗಳತ್ತ ಆಳವಾದ eನ ವನ್ನು ಪಡೆದುಕೊಳ್ಳಬೇಕು. ಆಗ ನಮ್ಮೊಳಗಿನ ಐಕ್ಯೂ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಮಹಿಳೆಯರು ಗಮನ ಹರಿಸಬೇಕು ಎಂದು ಹೇಳಿದರು.
ಆಚಾರ್ ಗ್ರೋಪ್ ಆಫ್ ಕಂಪನಿಯ ಅಧ್ಯಕ್ಷ ಜೋಯ್ಸ್ ರಾಮಾಚಾರ್ ಮಾತನಾಡಿ, ಸಮಾಜ ತಿದ್ದುವಲ್ಲಿ ಮಹಿಳೆ ಪಾತ್ರ ಹಿರಿದಾಗಿದ್ದು, ಮಹಿಳೆ ಹಿಂಜರಿಕೆ ತೊರೆದು ದೈರ್ಯದಿಂದ ಮುನ್ನಡೆಯಬೇಕು ಎಂದರು.
ಮಹಿಳೆ ಮನೆ ನಿರ್ವಹಣೆಗಷ್ಟೇ ಸೀಮಿತಗೊಳ್ಳದೇ ತಾವು ಪಡೆದುಕೊಂಡ ಶಿಕ್ಷಣವನ್ನು ಸದುಪಯೋಗ ಮಾಡಿಕೊಂಡು ಉದ್ಯೋಗ ಗಿಟ್ಟಿಸಿಕೊಳ್ಳಬೇಕು. ಆಗ ಮಾತ್ರ ಆಕೆ ಆರ್ಥಿಕ ಸಬಲತೆಯನ್ನು ಗಳಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮನ್ವಂತರ ಮಹಿಳಾ ಮಂಡಳ ಅಧ್ಯಕ್ಷೆ ಶ್ರೀರಂಜನಿ ದತ್ತಾತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಸುಗುಣ ವಾಲ್ಸ್ ಮತ್ತು ಪೈಪ್ಸ್ ಪ್ರೈ. ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿ ವಾರಿಜ ರಾಮಾ ಚಾರ್, ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ರಂಗಭೂಮಿ ಕಲಾವಿದ ಕಾಂತೇಶ್ ಕದರಮಂಡಲಗಿ, ರಂಗ ನಿರ್ದೆ ಶಕ ಹೊನ್ನಾಳಿ ಚಂದ್ರಶೇಖರ್, ಕಮಲ ನೆಹರು ಮಹಿಳಾ ಕಾಲೇ ಜಿನ ನಿವೃತ್ತ ಪ್ರಾಧ್ಯಾಪಕಿ ಪ್ರೊ. ಕಿರಣ್ ದೇಸಾಯಿ ಉಪಸ್ಥಿತರಿ ದ್ದರು.
ಲತಾ ಸೋಮಶೇಖರ್ ಸ್ವಾಗತಿಸಿದರು.ಜೋಯ್ಸ್ ರಾಮಾಚಾರ್ ದಂಪತಿಗಳನ್ನು ಸನ್ಮಾನಿಸಲಾಯಿತು.