ಆಶ್ರಯ ವಸತಿ ಯೋಜನೆ ಪ್ರಗತಿ ಪರಿಶೀಲನೆಗೆ ಅಧಿಕಾರಿಗಳ ತಂಡ…

2

ಶಿವಮೊಗ್ಗ : ನಗರ ಪಾಲಿಕೆಯಿಂದ ಕೈಗೆತ್ತಿ ಕೊಂಡಿರುವ ಗೋವಿಂದಾಪುರ ಆಶ್ರಯ ವಸತಿ ಯೋಜನೆಯ ಬಾಕಿ ಕಾಮಗಾರಿಯ ಪ್ರಗತಿ ಕುರಿತಂತೆ ರಾಜ್ಯಮಟ್ಟದ ಅಧಿಕಾರಿಗಳು ಇಲ್ಲಿಗೆ ಇಂದು ಆಗಮಿಸಿ ಎರಡು ದಿನ ಇ ಇದ್ದು ಮಾಹಿತಿ ಪಡೆಯ ಲಿzರೆ ಎಂದು ಶಾಸಕ ಎಸ್. ಎನ್.ಚನ್ನಬಸಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಿಂದಾಪುರದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಜಿ+೨ ಮಾದರಿಯ ಆಶ್ರಯ ಮನೆಗಳ ಕೆಲಸ ಕಳೆದ ೭ ವರ್ಷಗಳಿಂದ ನಡೆಯುತ್ತಿದೆ. ಆದರೂ ಇನ್ನೂ ಪೂರ್ಣವಾಗಿಲ್ಲ. ಶೀಘ್ರ ಪೂರ್ಣ ಗೊಳಿಸುವಂತೆ ಸಚಿವರನ್ನು ಕೋರಲಾಗಿತ್ತು. ಅವರು ಇಲ್ಲಿಗೆ ಬಂದು ಸಭೆ ಮಾಡುವುದಾಗಿ ಹೇಳಿದ್ದರು. ಈಗ ರಾಜ್ಯ ಮಟ್ಟದ ಅಧಿಕಾರಿಗಳು ಬರುತ್ತಿzರೆಂದರು.
ಮೂರು ಸಾವಿರಮನೆಗಳಲ್ಲಿ ೬೨೪ ಮನೆ ಹಂಚಿಕೆಯಾಗಿವೆ. ೬೪೮ ಮನೆಗಳು ಸಿದ್ಧವಾಗಿವೆ. ೧೭೨೮ ಮನೆ ಪರಿಪೂರ್ಣವಾಗಿ ಆಗಬೇಕಿದೆ. ಮೂಲ ಸೌಕರ್ಯದ ಕೊರೆತೆ ಹಿನ್ನೆಲೆಯಲ್ಲಿ ಮನೆಪಡೆದ ವರೂ ಇನ್ನೂ ಹೋಗಿಲ್ಲ. ಮೂಲಸೌಕರ್ಯದ ಬಗ್ಗೆಯೂ ಪರಿಶೀಲಿಸಲಾಗುತ್ತದೆ ಎಂದರು.
ಗೋಪಶೆಟ್ಟಿಕೊಪ್ಪದಲ್ಲಿ೧೮೩೬ ಮನೆಗಳ ನಿರ್ಮಾಣ ವಾಗುತ್ತಿವೆ. ಅಲ್ಲಿಯೂ ಕೂಡ ಸಾಕಷ್ಟು ಕೆಲಸ ಬಾಕಿ ಇದೆ. ಮೂಲ ಸೌಕರ್ಯ ಗಳನ್ನು ಒದಗಿಸಲು ೧೩.೧೧ ಕೋಟಿ ರೂ. ಅಗತ್ಯವಾಗಿ ಬಿಡುಗಡೆ ಆಗಬೇಕಿದೆ. ಈ ಎ ಕೆಲಸ ಕಾರ್ಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಸದನದಲ್ಲಿ ಉತ್ತರ ಪಡೆಯಲಾಗಿದೆ ಎಂದರು.
ಬಿಜೆಪಿಯಿಂದ ಹಮ್ಮಿಕೊಂಡಿರುವ ಮೈಸೂರು ಪಾದಯಾತ್ರೆಗೆ ಶಿವಮೊಗ್ಗ ದಿಂದಲೂ ಕೂಡ ತಂಡ ಹೋಗ ಲಿದೆ. ಜಿಯಿಂದ ಸುಮಾರು ೩೦೦೦ಕ್ಕೂ ಹೆಚ್ಚು ಕಾಯಕರ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿ zರೆ. ಸುಮಾರು ೧೪೦ ಕಿ.ಮೀ. ಪಾದಯಾತ್ರೆ ನಡೆಯಲಿದ್ದು, ೮ ದಿನಗಳ ಕಾಲ ನಡೆಯಲಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಮೋಹನ ರೆಡ್ಡಿ, ಶಿವರಾಜ್, ಎನ್.ಕೆ. ಜಗದೀಶ್, ನಾಗರಾಜ್, ಮಂಜುನಾಥ್, ರೇಣುಕಾ ನಾಗರಾಜ್ ಇನ್ನಿತರರಿದ್ದರು.