ಅಧರ್ಮ ಮಾಡಿದರೆ ದೇವರಿಂದ ಸರ್ಜಿಕಲ್ ಸ್ಟ್ರೈಕ್ ನಿಶ್ಚಿತ…
ಹೊಳೆಹೊನ್ನೂರು: ಅನ್ಯಾಯ, ಅನಾಚಾರ ಮಾಡಿದರೆ ದೇವರು ಒಂದ ಒಂದು ದಿನ ಸರ್ಜಿಕಲ್ ಸ್ಟ್ರೈಕ್ ಮಾಡಿಯೇ ಮಾಡುತ್ತಾನೆ. ಈ ಬಗ್ಗೆ ಸದಾ ಎಚ್ಚರ ಇಟ್ಟುಕೊಳ್ಳಿ ಎಂದು ಉತ್ತರಾದಿ ಮಠಾ ಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಭ್ರಷ್ಟಾಚಾರ, ಕಳ್ಳತನ ಮಾಡಿದರೆ ಅನಂತ ದುಃಖವನ್ನು ಅನುಭವಿಸುತ್ತಾರೆ. ಆದರೂ ಅವರಿಗೆ ಅನ್ಯಾಯದ ಅರ್ಥ ಆಗುವುದಿಲ್ಲ. ಅನ್ಯಾಯದ ಹಣವನ್ನು ದಕ್ಕಿಸಿಕೊಳ್ಳಲು ಸಾಧ್ಯವೇ ಇಲ್ಲ. ದೇವರು ಮಾಡಿದ ನಿಯಮಕ್ಕೆ ವಿರುದ್ಧವಾಗಿ ಮನುಷ್ಯ ನಡೆದರೆ ಸುಮ್ಮನೆ ಕೂರಲು ಅವನೇನು ದೇವರು ನಪುಂಸಕನೇ ಎಂದರು.
ದೇವರಿಗೆ ಹೇಡಿತನ ಇಲ್ಲ. ಹೀಗಾಗಿ ನಿಶ್ಚಿತವಾಗಿ ಅನಾಚಾರಿ ಗಳಿಗೆ ಶಿಕ್ಷೆ ಆಗಿಯೇ ಆಗುತ್ತದೆ. ಮೊದಲು ಅಧರ್ಮದಿಂದ ವೃದ್ಧಿಯಾಗಲು ಬಿಡುತ್ತಾನೆ. ತಿದ್ದಿಕೊಳ್ಳುತ್ತಾನಾ ನೋಡುತ್ತಾನೆ. ಬದಲಾಗದಿದ್ದರೆ ಕೊನೆಗೆ ಒಂದು ದಿನ ತಕ್ಕಶಾಸ್ತಿ ಮಾಡುತ್ತಾನೆ. ದೇವರ ನಿಗ್ರಹಕ್ಕೆ ಗುರಿಯಾಗುವ ಯಾವ ಅಧರ್ಮ ಮಾಡಬೇಡಿ ಎಂದು ಶ್ರೀಗಳು ಎಚ್ಚರಿಸಿದರು.
ಯುವತಿಯರು ದುರ್ಗೆಯನ್ನು ಸ್ಮರಿಸಿ :
ಎಲ್ಲ ಸಜ್ಜನರೂ, ಅದರಲ್ಲೂ ಸ್ತ್ರೀಯರು, ವಿಶೇಷವಾಗಿ ಯುವತಿ ಯರು ಉತ್ತಮವಾದ ಬ್ರಹ್ಮಚರ್ಯ ದಿಂದ ಜೀವನ ನಡೆಸಬೇಕು. ಅದರಲ್ಲೂ ತಮ್ಮ ವಿವಾಹಪೂರ್ವ ದಲ್ಲಿ ಬ್ರಹ್ಮಚರ್ಯವನ್ನು ಕಾಪಾಡಿ ಕೊಳ್ಳಬೇಕು. ಶುದ್ಧವಾದ ಚಾರಿತ್ರ್ಯ ಸಂಪನ್ನರಾಗಿ ಬಾಳಿ ಬೆಳಗಬೇಕು. ಅದಕ್ಕಾಗಿ ದುರ್ಗೆಯ ಸ್ಮರಣೆ ಮಾಡ ಬೇಕು. ದುರ್ಗಾ ಸುಳಾದಿಯನ್ನು ನಿತ್ಯ ಹೇಳಬೇಕು ಎಂದು ಸ್ವಾಮಿಗಳು ಸಲಹೆ ನೀಡಿದರು.
ಪಂಡಿತ ಪೂಜ್ಯರಾದ ಗುತ್ತಲ ರಂಗಾಚಾರ್ಯ, ಮಠದ ದಿವಾನರಾದ ಶಶಿ ಆಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ನವರತ್ನ ಪುರುಷೋತ್ತಮಾ ಚಾರ್ಯ, ನವರತ್ನ ರಾಮಾ ಚಾರ್ಯ, ಕಡೂರು ಮಧುಸೂಧ ನಾಚಾರ್ಯ, ರಘೂತ್ತಮಾ ಚಾರ್ಯ ಸಂಡೂರು, ಕಪುರ ಜಯತೀರ್ಥಾಚಾರ್ಯ, ಬಾಳಗಾರು ಜಯತೀರ್ಥಾ ಚಾರ್ಯ ಮೊದಲಾದವರಿದ್ದರು.