ಹಬ್ಬಗಳ ವಿಶೇಷವಾದ ಹಬ್ಬ ರಕ್ಷಾ ಬಂಧನ:ನಾಯಕ್
ಹೊನ್ನಾಳಿ: ರಕ್ಷಾ ಬಂಧನವು ಪರಸ್ಪರ ನಿರಪೇಕ್ಷ ಪ್ರೀತಿ, ಕಾಳಜಿ, ಜವಾಬ್ದಾರಿ ಹಾಗೂ ಸಹೋದರ- ಸಹೋದರಿಯ ಉತ್ತಮ ಸಂಬಂಧ ವನ್ನು ನಿರ್ಮಾಣ ಮಾಡುವ ವಿಶೇಷ ಹಬ್ಬವಾಗಿದೆ ಎಂದು ಪ್ರಾಂಶುಪಾಲ ತಿಪ್ಪೇಸ್ವಾಮಿ ನಾಯಕ್ ತಿಳಿಸಿದರು.
ತಾಲ್ಲೂಕಿನ ಕಮ್ಮಾರಘಟ್ಟೆ ಯಲ್ಲಿರುವ ಪೋದಾರ್ ಲರ್ನಿಂಗ್ ಸ್ಕೂಲ್‌ಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಆಚರಿಸುವ ಪ್ರತಿಯೊಂದು ಹಬ್ಬಗಳಿಗೂ ಅದರದ್ದೇ ಆದ ಮಹತ್ವವಿರುತ್ತದೆ. ಆದರೆ ರಕ್ಷಾ ಬಂಧನ ಹಬ್ಬವು ಉತ್ತಮ ಸಮಾಜ ನಿರ್ಮಾಣ ಮಾಡಲು ಸಹೋದರ -ಸಹೋದರಿಯ ಬಾಂಧವ್ಯವನ್ನು ಗಟ್ಟಿಗೊಳಿಸುವ ವಿಶೇಷ ಹಬ್ಬವಾಗಿದೆ ಎಂದು ಹೇಳಿದರು.
ರಕ್ಷಾ ಎಂದರೆ ರಕ್ಷಣೆ ಮತ್ತು ಬಂಧನ ಎಂದರೆ ಬಂಧ ಇದು ಸಹೋದರ-ಸಹೋದರಿಯರ ನಡುವೆ ಪ್ರೀತಿ, ಒಗ್ಗಟ್ಟು ಮತ್ತು ಪರಸ್ಪರ ವಿಶ್ವಾಸದ ಸಂಕೇತವಾಗಿ ಕಾರ್ಯನಿರ್ವಹಿಸಲಿದೆ ಈ ಹಿನ್ನೆಲೆ ಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿ ಗಳಲ್ಲೂ ಸಹೋದರತ್ವದ ಮನೋಭಾವ ಬಾಲ್ಯದಿಂದಲೇ ಬೆಳೆಯಲೆಂದು ರಕ್ಷಾ ಬಂಧನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾ ಗಿದ್ದು ಹಬ್ಬದ ಆಚರಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು.
ಸಾಮೂಹಿಕವಾಗಿ ವಿದ್ಯಾರ್ಥಿನಿಯರು ವಿದ್ಯಾರ್ಥಿ ಗಳಿಗೆ ಆರತಿ ಬೆಳಗಿ ಹಣೆಗೆ ತಿಲಕವನ್ನಿಟ್ಟು ರಾಖಿ ಕಟ್ಟಿ ಶುಭಾಶಯ ಕೋರಿದರು. ಇದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರಿಗೆ ಸಿಹಿ ತಿನ್ನಿಸಿದರು. ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಈ ಸಂದರ್ಭದಲ್ಲಿ ಶಾಲೆಯ ಮಾರ್ಕೇಟಿಂಗ್ ಮ್ಯಾನೇಜರ್ ಕೀರ್ತಿ, ಅಡ್ಮಿನ್ ಮಾನೇಜರ್ ಯಶ್ವಂತ್, ಮುಖ್ಯ ಶಿಕ್ಷಕಿ ಲೀನಾ ರಾಬರ್ಟ್, ಶಿಕ್ಷಕಿಯರಾದ ರಶ್ಮಿ, ಜ್ಯೋತಿ, ನೇತ್ರಾವತಿ, ನೇತ್ರಾ, ಪೂಜ, ಶಾಂತಾದೇವಿ ಹಿರೇಮಠ್, ಶಿಕ್ಷಕರಾದ ಅಭಿಷೇಕ್, ಧನಂಜಯ್, ಮಾರುತಿ, ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.