ಪ್ರತಿಯೊಬ್ಬರೂ ಗೌರವಯುತವಾಗಿ ಬದುಕಲು ಎಲ್ಲಾ ರೀತಿಯ ಸಮಸ್ಯೆಗಳಿಗೆ ಸ್ಪಂದನೆ…

ಶಿಕಾರಿಪುರ : ಯಡಿಯೂರಪ್ಪನವರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳು ವಲ್ಲಿ ತಾಲೂಕಿನ ಪತ್ರಕರ್ತರು ಸರಿದಾರಿಗೆ ತರುವ ಮೂಲಕ ಅವರನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಇಲ್ಲಿನ ನೂತನ ಶಾಸಕ ಬಿ.ವೈ ವಿಜಯೇಂದ್ರ ಹೆಮ್ಮೆ ವ್ಯಕ್ತಪಡಿಸಿದರು.
ಪಟ್ಟಣದ ಸುದ್ದಿಮನೆಯಲ್ಲಿ ತಾಲೂಕು ಪರ್ತಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಬದಲಾವಣೆ ಜಗದ ನಿಯಮ ವಾಗಿದ್ದು, ಪತ್ರಿಕಾ ರಂಗ ಇತ್ತೀಚಿನ ವರ್ಷದಲ್ಲಿ ದೃಶ್ಯ ಮಾದ್ಯಮ, ಸಾಮಾಜಿಕ ಜಾಲತಾಣದ ಜತೆಗೆ ದೊಡ್ಡ ಪೈಪೋಟಿಯನ್ನು ಎದುರಿಸುತ್ತಿದೆ ಎಂದರು.
ಪ್ರಜಾಪ್ರಭುತ್ವದ ೪ನೇ ಅಂಗವಾಗಿ ಗುರುತಿಸಿಕೊಂಡಿರುವ ಪತ್ರಿಕಾ ರಂಗದಲ್ಲಿನ ಪತ್ರಕರ್ತರನ್ನು ಯಡಿಯೂರಪ್ಪನವರು ಸಾರ್ವಜನಿಕ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ನಂತರದಲ್ಲಿ ಮೇಲು ಕೀಳು ಎಂದು ಭಾವಿಸದೆ ಪ್ರತಿಯೊಬ್ಬರಿಗೂ ವಿಶೇಷ ಗೌರವ ನೀಡುತ್ತಿದ್ದರು. ಇಂತಹ ವಿಶೇಷ ವ್ಯಕ್ತಿತ್ವ ಇತರೆ ರಾಜಕಾರಣಿಗಳಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.
ಯಡಿಯೂರಪ್ಪನವರ ಜನ್ಮಭೂಮಿ ಭೂಕನಕೆರೆಯಾಗಿ, ಕರ್ಮಭೂಮಿ ಶಿಕಾರಿಪುರವಾಗಿದ್ದು ಅವರು ಯಶಸ್ವಿ ರಾಜಕಾರಣಿಯಾಗಲು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ತಾಲೂಕಿನ ಪತ್ರಕರ್ತರು ಸರಿದಾರಿಯಲ್ಲಿ ಕರೆದೊಯ್ಯುವ ಮೂಲಕ ಅವರ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಪ್ರಶಂಸಿಸಿದ ಅವರು, ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟ ೮೦ಕ್ಕೂ ಹೆಚ್ಚಿನ ಪತ್ರಕರ್ತರ ಕುಟುಂಬಕ್ಕೆ ತಲಾ ರೂ.೫ ಲಕ್ಷ ಪರಿಹಾರವನ್ನು ತಕ್ಷಣ ಬಿಡುಗಡೆಗೊಳಿಸಿದ್ದಾರೆ. ದೆಹಲಿಯಲ್ಲಿನ ರಾಜ್ಯದ ಪತ್ರಕರ್ತರಿಗೆ ಕರ್ನಾಟಕ ಭವನ ದಲ್ಲಿ ರಿಯಾಯತಿ ದರದಲ್ಲಿ ಊಟ ತಿಂಡಿಗೆ ಆದೇಶಿಸಿ ಕಾಳಜಿಯನ್ನು ಮೆರೆದಿದ್ದಾರೆ ಎಂದು ತಿಳಿಸಿದರು.
ಇದೀಗ ತಾವು ಕ್ಷೇತ್ರದ ಶಾಸಕನಾಗಿ ರಾಜಕಾರಣದಲ್ಲಿ ಅಂಬೆಗಾಲಿಡುತ್ತಿದ್ದು ಈ ಸಂದರ್ಭದಲ್ಲಿ ಟೀಕೆ ಟಿಪ್ಪಣಿ ಸಹಜವಾಗಿದ್ದು, ತಾಲೂಕು ಪಕ್ಷ ಹಾಗೂ ವೈಯುಕ್ತಿಕ ಹಿತಾಸಕ್ತಿಯಿಂದ ಪ್ರತಿಯೊಂದನ್ನು ಸಕಾರಾತ್ಮವಾಗಿ ಸ್ವೀಕರಿಸಿ ಬೆಳೆಯುವ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು, ಪತ್ರಿಕಾ ರಂಗದಲ್ಲಿನ ಪ್ರತಿಯೊಬ್ಬರೂ ಗೌರವಯುತವಾಗಿ ವೃತ್ತಿಗೆ ಚ್ಯುತಿ ಬಾರದ ರೀತಿಯಲ್ಲಿ ಬದುಕಲು ಎಲ್ಲ ರೀತಿ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಸಂಘದ ಉಪಾಧ್ಯಕ್ಷ ವೈದ್ಯನಾಥ್ ಮಾತನಾಡಿ, ಪತ್ರಿಕಾ ರಂಗದಲ್ಲಿನ ವ್ಯಾಪಕ ಬದಲಾವಣೆ ಪತ್ರಕರ್ತರಿಗೆ ಸವಾಲಾಗಿದ್ದು ಸುದ್ದಿ ನೀಡುವ ಧಾವಂತದಲ್ಲಿ ಸತ್ಯಾಸತ್ಯತೆಯನ್ನು ಬದಿಗಿಟ್ಟು ಅಪಾಯ ಹೆಚ್ಚಾಗುತ್ತಿದೆ eನದ ಉನ್ನತೀಕರಣವಿಲ್ಲದೆ ಪರ್ತಕರ್ತರು ಸವಾಲು ಎದುರಿಸಲು ಸಾಧ್ಯವಿಲ್ಲ. ಪ್ರತಿಷ್ಠೆಗೆ ಸುದ್ದಿಯ ಮೂಲವಾಗಿರುವ ಜನಸಾಮಾನ್ಯ ರಿಂದ ಅಂತರವನ್ನು ಕಾಪಾಡಿ ಕೊಂಡಲ್ಲಿ ವೃತ್ತಿಯಲ್ಲಿ ವಿಫಲವಾಗುವುದು ನಿಶ್ಚಿತ ಎಂದು ತಿಳಿಸಿದ ಅವರು, ಸಂಕುಚಿತ ಭಾವನೆ ತೊರೆದು ವಿಶಾಲ ದೃಷ್ಟಿಕೋನದಿಂದ ಪರಿಪಕ್ವತೆ ಬೆಳೆಸಿಕೊಂಡಲ್ಲಿ ಮಾತ್ರ ಸದೃಡ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಪ್ರಾಸ್ಥಾವಿಕವಾಗಿ ಮಾತನಾಡಿದ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್ ಹುಚ್ರಾಯಪ್ಪ , ಸ್ಥಳೀಯ ಪತ್ರಿಕಾ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿಯಾದ ಅವಧಿಯಲ್ಲಿ ಅನುದಾನ ನೀಡಿದ್ದನ್ನು ಸದಾ ಕಾಲ ಸ್ಮರಿಸುವುದಾಗಿ ತಿಳಿಸಿ ಇದೀಗ ಪುನಃ ಹೆಚ್ಚುವರಿಯಾಗಿ ರೂ.೧೫ ಲಕ್ಷ ಅನುದಾನವನ್ನು ಸಂಸದರು ನೀಡಿದ ವಾಗ್ದಾನದಿಂದ ಕಟ್ಟಡ ಹೆಚ್ಚು ಸದೃಢವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೂತನ ಶಾಸಕರನ್ನು ಅಭಿನಂದಿಸಲಾಯಿತು. ಅಧ್ಯಕ್ಷತೆಯನ್ನು ತಾ.ಸಂಘದ ಅಧ್ಯಕ್ಷ ಚಂದ್ರಶೇಖರ ಮಠದ್ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಉಪಾಧ್ಯಕ್ಷ ಹಾಲಸ್ವಾಮಿ, ದೀಪಕ್ ಸಾಗರ್, ನಾಗೇಶನಾಯ್ಕ, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಇ ಎಚ್ ಬಸವರಾಜ್, ಕಾರ್ಯದರ್ಶಿ ರಾಜು, ಮುಖಂಡ ಗುರುಮೂರ್ತಿ, ವೇಣು ಗೋಪಾಲ್, ಪಾಪಯ್ಯ,ಪುರಸಭಾ ಸದಸ್ಯ ಉಳ್ಳಿ ದರ್ಶನ್, ಪಾಲಾಕ್ಷಪ್ಪ, ಜೀನಳ್ಳಿ ಪ್ರಶಾಂತ್,ಕಸಾಪ ಅಧ್ಯಕ್ಷ ರಘು ಮತ್ತಿತರರು ಉಪಸ್ಥಿತರಿದ್ದರು.