ಹೊಸ ಆಟೋಗಳಿಗೆ ಪರವಾನಿಗೆ ನೀಡಲು ಆಗ್ರಹಿಸಿ ಜಿಪಂ ಸಿಇಓಗೆ ಸಂಘದಿಂದ ಮನವಿ

auto

ಶಿವಮೊಗ್ಗ: ಹೊಸದಾಗಿ ಖರೀದಿಸಿರುವ ಆಟೋ ರಿಕ್ಷಾಗ ಳಿಗೆ ಪರವಾನಿಗೆ ನೀಡಬೇಕೆಂದು ಆಗ್ರಹಿಸಿ ಆಟೋ ಚಾಲಕರ ಸಂಘ ಹಾಗೂ ಮಾಲೀಕರ ಸಂಘದ ವತಿಯಿಂದ ಡಿಸಿಗೆ ಇಂದು ಮನವಿ ಸಲ್ಲಿಸಲಾಯಿತು.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಹೊಸ ಆಟೋ ರಿಕ್ಷಾಗಳಿಗೆ ನೋಂದಣಿ ಮಾಡಿಕೊಡಲಾಗುತ್ತದೆ. ಆದರೆ ಅದನ್ನು ಓಡಿಸಲು ಪರವಾನಿಗೆ ನೀಡುವುದನ್ನು ನಿಲ್ಲಿಸಲಾಗಿದೆ. ಹೊಸದಾಗಿ ನೋಂದಣಿಯಾ ಗಿರುವ ಆಟೋ ರಿಕ್ಷಾಗಳಿಗೆ ಪರವಾನಿಗೆ ಇರುವುದಿಲ್ಲ. ಇದರಿಂದ ಕಷ್ಟಪಟ್ಟು ಆಟೋ ರಿಕ್ಷಾ ಖರೀದಿ ಮಾಡಿದವರಿಗೆ ಜೀವನ ಸಾಗಿಸುವುದೇ ಕಷ್ಟವಾಗುತ್ತಿದೆ. ಜೊತೆಗೆ ಸಾಲ ಮಾಡಿ ನಾವು ಆಟೋ ಖರೀದಿ ಮಾಡಿದ್ದೇವೆ. ಸುಮಾರು ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಈ ರೀತಿಯ ಪರವಾನಿಗೆ ಇಲ್ಲದ ಆಟೋಗಳಿವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಸಾಲದ ಕಂತುಗಳನ್ನು ಕಟ್ಟಲು ನಮಗೆ ಕಷ್ಟವಾಗುತ್ತಿದೆ. ಪರವಾ ನಿಗೆ ಇಲ್ಲದೇ ಆಟೋ ಓಡಿಸು ವುದೇ ಕೂಡ ತುಂಬಾ ಅಪಾಯ ಕಾರಿ ಯಾಗಿರುತ್ತದೆ. ಈ ಬಗ್ಗೆ ಹಲವು ಬಾರಿ ನಾವು ಮನವಿ ಮಾ ಡಿದ್ದರೂ ಸಾರಿಗೆ ಅಧಿಕಾರಿ ಗಳು ನಮ್ಮ ಮನವಿಗೆ ಸ್ಪಂದಿಸಿಲ್ಲ. ಆದ್ದರಿ ಂದ ಹೊಸದಾಗಿ ಖರೀದಿಸಿ ರುವ ಆಟೋಗಳಿಗೆ ಪರವಾನಿಗೆ ಕೊಡ ಬೇಕೆಂದು ಮನವಿ ಮಾಡಲಾಗಿ ದೆ.ಈ ಬಗ್ಗೆ ಶಾಸಕರು ಕೂಡ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಿ ದ್ದಾರೆ. ಆದರೂ, ಪರವಾನಿಗೆ ನೀಡಿಲ್ಲ ಎಂದು ಆಟೋ ಚಾಲಕರು ದೂರಿದರು.