ಜನರನ್ನೇ ರಾಜರನ್ನಾಗಿಸುವ ಜನಾಂದೋಲನ; ಲಂಚ ಭ್ರಷ್ಟಾಚಾರ ಮುಕ್ತತೆ ನಮ್ಮ ಗುರಿ: ಶಿವಾನಂದ

1

ಶಿವಮೊಗ: ಚುನಾವಣೆಯನ್ನೇ ವೇದಿಕೆಯನ್ನಾಗಿಸಿಕೊಂಡು ಜನರನ್ನು ರಾಜರನ್ನಾಗಿಸುವ ಜನಾಂದೋಲನ ಕ್ಕಾಗಿ ಲಂಚ ಭ್ರಷ್ಟಚಾರ ಮುಕ್ತ ನಾಡಿಗಾಗಿ ಒಂದು ಬಹುದೊಡ್ಡ ಆಂದೋಲನ ರೂಪಿಸಿzವೆ ಎಂದು ಪುತ್ತೂರಿನ ಸುದ್ಧಿಜನಾಂದೋಲನ ವೇದಿಕೆಯ ಮುಖ್ಯಸ್ಥ ಡಾ.ಯು.ಪಿ. ಶಿವಾನಂದ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಗಾಂಧೀಜಿ ಯವರ ರಾಮ ಸ್ವರಾಜ್ಯದ ಆಶಯ ವನ್ನು ಇಟ್ಟುಕೊಂಡು ಹಳ್ಳಿಯಿಂದ ದಿಲ್ಲಿಗೆ ಆಡಳಿತಕ್ಕಾಗಿ ಭ್ರಷ್ಟಚಾರ ಮುಕ್ತ ನಾಡಿಗಾಗಿ ಸಾಮಾಜಿಕ ಜಲತಾಣದ ದುರುಪಯೋಗಗಳ ವಿರುದ್ಧ ಮತದಾರರಲ್ಲಿ ಜಗೃತಿ ಮೂಡಿಸು ವುದು ನಮ್ಮ ಉzಶ ಎಂದರು.


ಶಿವಮೊಗ್ಗ ಚುನಾವಣೆಯನ್ನು ವೇದಿಕೆಯಾಗಿ ಉಪಯೋಗಿಸಿಕೊಳ್ಳ ಬಹುದೇ ಎಂಬ ಚಿಂತನೆಯೂ ಇದೆ. ನಮ್ಮ ವೇದಿಕೆಯ ಮೂಲಕ ಪಕ್ಷೇತರ ಅಭ್ಯರ್ಥಿಯೊಬ್ಬರನ್ನು ನಿಲ್ಲಿಸಿ ಈ ಆಂದೋಲನವನ್ನು ಚಳುವಳಿಯ ಮೂಲಕ ಮಾಡುವುದು ನಮ್ಮ ಆಸೆಯಾಗಿದೆ. ಈ ಹಿನ್ನಲೆಯಲ್ಲಿಯೇ ನಾನು ಈ ಹಿಂದೆ ಗ್ರಾಮ ಸ್ವರಾಜ್ಯದ ಬಗ್ಗೆ ಕಲ್ಪನೆ ಮೂಡಿಸುವ ದೃಷ್ಟಿಯಿಂದ ಪ್ರಧಾನಿ ಮೋದಿಯವರ ವಿರುದ್ಧ ಹಾಗೂ ರಾಹುಲ್‌ಗಾಂಧಿಯವರ ವಿರುದ್ಧ ಸ್ಪರ್ಧಿಸಿ ಜಗೃತಿ ಉಂಟು ಮಾಡಲು ಪ್ರಯತ್ನಿಸಿzನೆ ಎಂದರು.
ಅಷ್ಟೇ ಅಲ್ಲ ಈ ಹಿಂದೆಯೂ ಕೂಡ ರಾಮಕೃಷ್ಣ ಹೆಗಡೆ, ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿ ಮುಂತಾದವರ ಎದುರು ಸ್ಪರ್ಧಿಸಿ ನನಗಾಗಿ ಓಟು ಕೇಳದೆ ಭ್ರಷ್ಟಚಾರದ ವಿರುದ್ಧ ಪ್ರಚಾರ ಮಾಡಿzನೆ. ಮತ್ತು ಇದರಿಂದ ಒಂದಿಷ್ಟು ಲಾಭವು ನನಗಾಗಿದೆ ಎಂದರು.
ಸುಳ್ಯ, ಪುತ್ತೂರು, ಬೆಳ್ತಂಗಡಿ ಗಳಲ್ಲಿ ಈ ಆಂದೋಲನವನ್ನು ಗಟ್ಟಿಯಾಗಿ ಆರಂಭಿಸಿ ಮಾಧ್ಯಮ ಮಿತ್ರರನ್ನು ತೊಡಗಿಸಿಕೊಳ್ಳುವಂತೆ ಮಾಡಿ ಜನಾಭಿಪ್ರಾಯವನ್ನು ಸಂಗ್ರಹಿಸುವುದು ಮತ್ತು ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಮೂಡಿಸುವುದು ನಮ್ಮ ಚಿಂತನೆಯಾಗಿದೆ. ನಾವು ಹಲವು ಬಾರಿ ಅಭ್ಯರ್ಥಿಗಳನ್ನು ನಿಲ್ಲಿಸುವುದಿಲ್ಲ. ಒಂದು ಪಕ್ಷ ಅಭ್ಯರ್ಥಿಯನ್ನು ನಿಲ್ಲಿಸಬೇಕಾಗಿ ಬಂದರು ಕೂಡ ಅಭ್ಯರ್ಥಿಗಾಗಿ ಓಟು ಕೇಳುವುದಿಲ್ಲ. ಆದರೂ ನಾವು ಪ್ರಚಾರ ಮಾಡುತ್ತೇವೆ. ಪ್ರಚಾರ ಮುಖ್ಯವಾಗಿ ಮತದಾರರಲ್ಲಿ ಜಗೃತಿ ಮೂಡಿಸುವುದೇ ಆಗಿರುತ್ತದೆ ಎಂದರು.
ಮತದಾರರು ಗುಲಾಮರಲ್ಲ ರಾಜರುಗಳು, ಜನಪ್ರತಿನಿಧಿ ರಾಜನಲ್ಲ, ಜನ ಸೇವಕ, ಅಧಿಕಾರಿಗಳು ಇರುವುದು ದಬ್ಬಾಳಿಕೆ ಮಾಡುವುದಕ್ಕೆ ಅಲ್ಲ, ಯಾರನ್ನು ಸೋಲಿಸಲು, ಯಾರನ್ನೋ ಗೆಲ್ಲಿಸಲು ನಮ್ಮ ಸ್ಪರ್ಧೆ ಇರುವುದಿಲ್ಲ. ಭ್ರಷ್ಟಚಾರ ಮುಕ್ತವಾದರೇ ಅದೇ ನಮ್ಮ ಗೆಲುವು ಎಂದರು.
ನಮ್ಮ ವೇದಿಕೆಯ ಮೂಲಕ ಜನಾಂದೋಲನಕ್ಕಾಗಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಲು ಯಾರಾದರೂ ಸಿಗುತ್ತಾರೆಯೇ ಎಂದು ನೋಡುತ್ತಿ zನೆ. ಸಿಕ್ಕರೆ ಪಕ್ಷೇತರವಾಗಿ ನಿಂತು ಚುನಾವಣೆಗೆ ನಿಂತ ಇತರ ಎ ಅಭ್ಯರ್ಥಿಗಳನ್ನು ಆಂದೋಲನದ ಪರ ನಿಲ್ಲುವಂತೆ ಮಾಡಿ ಮತದಾರರನ್ನೇ ರಾಜರನ್ನಾಗಿ ಮಾಡುವುದು ನಮ್ಮ ಗುರಿ ಎಂದರು.