ಕಲ್ಯಾಣ ಕೇಂದ್ರಿತ ಕಾನೂನುಗಳೊಂದಿಗೆ ಹೊಸಯುಗ ಪ್ರಾರಂಭ…
ಶಿವಮೊಗ್ಗ: ವಸಾಹತುಶಾಹಿ ಯುಗದ ಕಾನೂನುಗಳ ಅಂತ್ಯ ಗೊಳಿಸಿ, ಸಾರ್ವಜನಿಕ ಸೇವೆ ಮತ್ತು ಕಲ್ಯಾಣ ಕೇಂದ್ರಿತ ಕಾನೂನುಗ ಳೊಂದಿಗೆ ಹೊಸ ಯುಗ ಪ್ರಾರಂಭ ವಾಗುತ್ತಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಅಭಿಪ್ರಾಯಪಟ್ಟರು.
ನಗರದ ಸಿ. ಭೀಮಸೇನರಾವ್ ರಾಷ್ಟ್ರೀಯ ಕಾನೂನು ಮಹಾ ವಿದ್ಯಾಲಯದ ವತಿಯಿಂದ ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಆಶ್ರಯ ದಲ್ಲಿ ಚಂದನ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ `ಕ್ರಿಮಿನಲ್ ಅಪರಾಧ ಪ್ರಕರಣಗಳ ಹೊಸ ಪ್ರಮುಖ ಕಾಯ್ದೆಗಳು ಬದಲಾವಣೆ ಗಳು’ ಕುರಿತ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-೨೦೨೩, ಭಾರತೀಯ ನ್ಯಾಯ ಸಂಹಿತೆ-೨೦೨೩ ಮತ್ತು ಭಾರತೀಯ ಸಾಕ್ಷಿ ಅಧಿನಿಯಮ- ೨೦೨೩ ಮಸೂದೆಗಳು ಈ ವರ್ಷ ಜುಲೈ ೧ರಿಂದ ಅನುಷ್ಟಾನ ಗೊಳ್ಳುತ್ತಿದೆ. ನ್ಯಾಯಾಲಯದಲ್ಲಿ ತ್ವರಿತವಾಗಿ ಪ್ರಕರಣಗಳ ಇತ್ಯರ್ಥ ವಾಗುವುದಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆಯಾಗುವುದಿಲ್ಲ ಎಂಬ ಅಪಾದನೆ ಗಳನ್ನು ಹೋಗಲಾಡಿಸು ವಲ್ಲಿ ಹೊಸ ಮಸೂದೆಗಳು ಪರಿಣಾಮಕಾರಿಯಾಗಿ ನಿಲ್ಲಲಿದೆ ಎಂದರು.
ಈ ಕಾಯ್ದೆಯ ಮೂಲಕ ಪೊಲೀಸರ ತನಿಖೆಯ ಕ್ರಮಾವಳಿ, ಪ್ರಥಮ ತನಿಖಾ ವರದಿ, ಸಾಕ್ಷ್ಯಾ ಧಾರಗಳ ಸಂಗ್ರಹ, ಪ್ರಕರಣಗಳ ಶೀಘ್ರ ಇತ್ಯರ್ಥ ಸೇರಿದಂತೆ ನಮ್ಮ ಕಾನೂನು, ಪೊಲೀಸ್ ಮತ್ತು ತನಿಖಾ ವ್ಯವಸ್ಥೆಗಳನ್ನು ಆಧುನಿಕ ಯುಗಕ್ಕೆ ತಕ್ಕಂತೆ ನಾವೀನ್ಯತೆ ಯೊಂದಿಗೆ ರೂಪಗೊಳಿಸಲಾಗಿದೆ. ಇಲ್ಲಿಯವರೆಗೆ ಕೆಲಸ ಮಾಡುತ್ತಿದ್ದ ವಕೀಲರು, ಪೋಲಿಸರು, ಸಾರ್ವಜನಿಕರು ಹೊಸತನಕ್ಕೆ ಹೇಗೆ ಒಗ್ಗಿಕೊಳ್ಳುತ್ತಾರೆ ಎಂಬ ಕುತೂಹಲ ವಿದೆ ಎಂದು ಹೇಳಿದರು.
ನೂತನ ಕಾಯ್ದೆಗಳ ಕುರಿತಾಗಿ ನಿವೃತ್ತ ಸರ್ಕಾರಿ ಅಭಿಯೋಜಕ ಹೆಚ್.ಡಿ. ಆನಂದಕುಮಾರ್ ಮಾತನಾಡಿ, ನ್ಯಾಯಾಂಗ ವ್ಯವಸ್ಥೆ ರಕ್ತಹೀನತೆಯಿಂದ ಬಳಲುತ್ತಿದೆ, ಅದಕ್ಕೆ ಹೊಸ ರಕ್ತಬೇಕಿದೆ ಎಂಬ ಚರ್ಚೆ ಅನೇಕ ವರ್ಷಗಳಿಂದ ಕೇಳಿಬರುತ್ತಿತ್ತು. ಅಂತಹ ಚರ್ಚೆಗೆ ಇದೀಗ ಅದ್ಭುತ ಸ್ಪಂದನೆ ಸಿಕ್ಕಿದೆ ಎಂದ ಅವರು, ಶಿಕ್ಷೆಯಿಂದ ವ್ಯಕ್ತಿಯನ್ನು ಬದಲಾಯಿಸುವುದ ಕ್ಕಿಂತ ಉತ್ತಮ ಚಿಂತನೆಗಳಿಂದ ವ್ಯಕ್ತಿತ್ವ ಬದಲಾಯಿಸುವ ಮುಖ್ಯ ಉದ್ದೇಶ ಹೊಸ ಕಾಯ್ದೆಗಿದೆ. ಈ ಮೂಲಕ ಪ್ರತಿಯೊಬ್ಬ ನಾಗರೀ ಕರಿಗೆ ನ್ಯಾಯದ ಸ್ಪರ್ಶ ನೀಡುವಲ್ಲಿ ನ್ಯಾಯ ಸಂಹಿತೆ ಕಾಯ್ದೆಯಿಂದ ಸಾಧ್ಯವಾಗಲಿದೆ. ಭಾರತದಿಂದ ಹೊರಗಿದ್ದು, ದೇಶದ ಒಳಗಿನ ಅಪರಾಧ ಪ್ರಕರಣಗಳಿಗೆ ಭಾಗಿ ಯಾಗುವ ಅಪರಾಧಿಗಳನ್ನು ಭಾರತೀಯ ಕಾನೂನು ವ್ಯಾಪ್ತಿಗೆ ತರುವಂತಹ ಬಲಿಷ್ಟ ಕಾಯ್ದೆ ಇದಾಗಿದೆ ಎಂದರು. ನ್ಯಾಯ ಸಂಹಿತೆ ಕಾಯ್ದೆಯಲ್ಲಿ ೫೧೧ ಸೆಕ್ಷನ್‌ಗಳಿಂದ ೩೫೮ ಸೆಕ್ಷನ್‌ಗೆ ಇಳಿಸಲಾಗಿದೆ ಎಂದು ಅವರು ವಿವರಿಸಿದರು.
ಪ್ರಾಂಶುಪಾಲೆ ಡಾ. ಎ. ಅನಲಾ ಅಧ್ಯಕ್ಷತೆ ವಹಿಸಿದ್ದರು. ಎನ್‌ಇಎಸ್ ಖಜಾಂಚಿ ಡಾ. ಪಿ. ನಾರಾಯಣ್, ನಿರ್ದೇಶಕ ಅನಂತದತ್ತ, ಐಕ್ಯುಎಸಿ ಸಂಯೋಜಕ ಡಾ. ಎಸ್. ಕಾಂತರಾಜ್, ಶಿರಸಿ ಎಂಇಎಸ್ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರಮತ್ ಅಡಿಗ, ವಕೀಲ ಕೆ. ಕೃಷ್ಣರಾವ್, ಕಾರ್ಯಕ್ರಮ ಸಂಯೋಜಕ ಡಾ. ಎ.ಎನ್. ಆದರ್ಶ, ಶ್ರೀಲಕ್ಷ್ಮೀ ಸೇರಿದಂತೆ ಇನ್ನಿತರರಿದ್ದರು.