ಶಿವಮೊಗ್ಗ : ಭಾರತಕ್ಕೆ ಬೇಕಾಗಿ ರುವುದು ಸುಸಂಸ್ಕೃತ ಶಿಕ್ಷಣ. ಯಾವುದೇ ಸಾಧನೆಯ ಮೂಲವು ಶಿಕ್ಷಣವಾಗಿದೆ. ಅಂತಹ ಶಿಕ್ಷಣದ ಪ್ರಾಕಾರಗಳು ಹೊಸತನದೆಡೆಗೆ ಸಾಗುತ್ತಿದೆ ಎಂದು ತುಮಕೂರು ವಿಶ್ವವಿದ್ಯಾಲಯ ಕುಲಸಚಿವರಾದ ಪ್ರೊ. ವೆಂಕಟೇಶ್ವರಲು ಹೇಳಿದರು.
ಇಂದು ನಗರದ ಎನ್‌ಇಎಸ್ ಮೈದಾನದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಶಿಕ್ಷಣ ಸಮಿತಿ ಅಮೃತ ಮಹೋತ್ಸವ ಸಮಾರೋಪ ಸಮಾರಂಭ ಎನ್‌ಇಎಸ್ ಹಬ್ಬ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಗತಿಕ ವಿದ್ಯಾರ್ಥಿ ಸಮೂಹ ದಲ್ಲಿರುವ ಶೇ.೫೦ರಷ್ಟು ವಿದ್ಯಾ ರ್ಥಿಗಳು ಭಾರತೀಯರು ಎಂಬ ಹೆಗ್ಗಳಿಕೆಯಿದೆ ಎಂದರು. ಖ್ಯಾತ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಮಾತ ನಾಡಿ, ಓದಿನಲ್ಲಿರುವ ಆನಂದ ಮೊಬೈಲ್‌ನಲ್ಲಿ ಸಿಗುವುದಿಲ್ಲ. ಮೊಬೈಲ್ ಆರೋಗ್ಯ ವನ್ನು ಕ್ಷೀಣಿ ಸಿದರೆ ಸಾಹಿತ್ಯ ನಮ್ಮ ಆರೋಗ್ಯ ಯುತ ವ್ಯಕ್ತಿತ್ವ ಹೆಚ್ಚಿಸುತ್ತದೆ ಎಂದರು. ಶಾಲೆಯೊಂದನ್ನು ತೆರೆದಾಗ ಜೈಲಿನ ಪ್ರಮಾಣ ಕಡಿಮೆಯಾಗು ತ್ತದೆ. ಉತ್ತಮ ಶಿಕ್ಷಣ ಮತ್ತು ವ್ಯಕ್ತಿ ತ್ವಕ್ಕೆ ಅಂತಹ ಶಕ್ತಿಯಿದೆ. ಇಂದು ದೊಡ್ಡ ಗ್ರಂಥಗಳು ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿದೆ. ಅದೆಷ್ಟೋ ಕವಿಗಳು, ಸಾಹಿತಿಗಳು ಬರೆಯುವುದನ್ನೆ ಬಿಟ್ಟಿದ್ದಾರೆ ಎಂದು ವಿಷಾದಿಸಿದರು. ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಮಾತನಾಡಿ, ಹಿರಿಯ ಚೇತನಗಳು ಕಟ್ಟಿ ಬೆಳೆಸಿದ ಸಂಸ್ಥೆಗೆ ಅಮೃತಮಹೋತ್ಸವ ಸಂಭ್ರಮ. ಇಂತಹ ದೀರ್ಘಕಾಲಿಕ ಅವಧಿಯಲ್ಲಿ ಶ್ರಮವಹಿಸಿದ ಎಲ್ಲರು ಸದಾ ಪ್ರಾತಃಸ್ಮರಣೀಯ. ಮಾನವ ಸಂಪನ್ಮೂಲದ ಅಭಿವೃದ್ಧಿಯ ಜೊತೆಗೆ ಮಾನವೀಯ ಮಲ್ಯ ಗಳನ್ನು ಹೆಚ್ಚಿಸುವ ಗುರಿ ಎನ್‌ಇ ಎಸ್ ಸಂಸ್ಥೆ ಯದ್ದಾಗಿದೆ. ಎನ್‌ಇ ಎಸ್ ಸಂಸ್ಥೆ ಯಲ್ಲಿ ಓದಿರುವ ಹಿರಿಯ ವಿದ್ಯಾರ್ಥಿಗಳೇ ನಮ್ಮ ಸಂಸ್ಥೆಯ ನಿಜವಾದ ಅಂಬಾಸಿ ಡರ್‌ಗಳು ಎಂದರು. ಕಾರ್ಯಕ್ರಮದಲ್ಲಿ ವಿವಿ ರ್‍ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಎನ್‌ಇಎಸ್ ಕ್ರೀಡೋತ್ಸ ವದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದಿಸ ಲಾಯಿತು. ಎನ್‌ಇ ಎಸ್ ಉಪಾಧ್ಯಕ್ಷ ಸಿ.ಆರ್. ನಾಗ ರಾಜ, ಕಾರ್ಯದರ್ಶಿ ಎಸ್.ಎನ್. ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ. ನಾರಾಯಣ್, ಖಜಂಚಿ ಡಿ.ಜಿ. ರಮೇಶ್ ಉಪಸ್ಥಿತರಿದ್ದರು. ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತಮಹೋತ್ಸವಕ್ಕೆ ವಿಜೃಂಭಣೆ ಯ ಚಾಲನೆ ನೀಡಲಾಯಿತು. ಸಾವಿರಾರು ಸಂಖ್ಯೆಯ ವಿದ್ಯಾ ರ್ಥಿಗಳು, ಶಿಕ್ಷಕರು, ಸಿಬ್ಬಂದಿ ವರ್ಗದವರು, ಹಳೆಯ ವಿದ್ಯಾರ್ಥಿ ಗಳು ಈ ಸಮಾರಂಭಕ್ಕೆ ಸಾಕ್ಷಿಯಾ ದರು.ಅಮೃತ ಮಹೋತ್ಸವದ ಅಂಗವಾಗಿ ಇಂದಿನಿಂದಲೇ ಕಾರ್‍ಯ ಕ್ರಮಗಳು ಆರಂಭವಾಗಿವೆ. ಪ್ರತಿ ಭಾ ಪುರಸ್ಕಾರ, ವಸ್ತುಪ್ರದರ್ಶನ, ಮಲೆನಾಡು ವೈಭವದ ಹೆಸರಿನಲ್ಲಿ ದೇಸೀತನದ ಪರಿಚಯವನ್ನು ಸಂಸ್ಥೆ ಆಯೋಜಿಸಿತ್ತು. ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಮಂಡಳಿ, ಶಾಲಾ ಕಾಲೇಜುಗಳ ಸಿಬ್ಬಂದಿ ವರ್ಗ, ಜಿಲ್ಲೆಯ ವಿವಿಧೆಡೆ ಇರುವ ಸಂಸ್ಥೆಗಳೂ ಸೇರಿದಂತೆ ಸುಮಾರು ೩೫ ಸಂಸ್ಥೆಗಳ ೧೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಮೃತ ಮ ಹೋತ್ಸವದಲ್ಲಿ ಭಾಗಿಯಾಗಿದ್ದರು. ಮಲೆನಾಡು ಉತ್ಸವದಲ್ಲಿ ಜಿಲ್ಲೆಯ ವಿವಿಧ ಕರಕುಶಲ ವಸ್ತು ಗಳು, ತಿಂಡಿ, ತಿನಿಸುಗಳು, ಕೋ ಣದ ಗಾಣದಿಂದ ಕಬ್ಬಿನ ಹಾಲನ್ನು ತಯಾರಿಸುವ ಪ್ರಾತ್ಯಕ್ಷಿತೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಕಬ್ಬಿನ ಹಾಲನ್ನು ಕುಡಿದು ಸಂಭ್ರಮಿ ಸಿದರು. ವಿವಿಧ ತಿನಿಸುಗಳು ಗಮನ ಸೆಳೆದವು. ರಾಗಿ ಕೀಲ್ಸ, ಮಂಡಕ್ಕಿ, ವಿವಿಧ ಬಗೆಯ ತಿನಿಸುಗಳು, ಅಂಟುಂಡೆಗಳು, ಗಾರ್ಗೆ ಮುಂತಾ ದ ತಿನಿಸುಗಳು ಬಾಯಲ್ಲಿ ನೀರೂ ರಿಸುವಂತಿತ್ತು. ಬಹುದೊಡ್ಡ ವೇದಿಕೆಯನ್ನು ನಿರ್ಮಿಸಲಾಗಿತ್ತು. ಇಂದು ನಡೆದ ಹಬ್ಬದ ಉದ್ಘಾಟನೆಯನ್ನು ಪ್ರಖ್ಯಾ ತ ಹಾಸ್ಯ ಕಲೆಗಾರ ಗಂಗಾವತಿ ಪ್ರಾಣೇಶ್ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ರ್‍ಯಾಂಕ್ ಪಡೆದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಲಾ ಯಿತು. ರ್‍ಯಾಂಕ್ ಪಡೆದ ವಿದ್ಯಾ ರ್ಥಿಗಳ ಜೊತೆಗೆ ಅವರ ಪೋಷ ಕರನ್ನು ಗೌರವಿಸಲಾಯಿತು. ಇಡೀ ಎನ್‌ಇಎಸ್ ಮೈದಾನ ದ ತುಂಬ ಜನರು ಜತ್ರೆಯಂತೆ ನೆರೆದಿದ್ದರು. ವಿದ್ಯಾರ್ಥಿಗಳು ಅಲ್ಲಲ್ಲಿ ಗುಂಪುಗುಂಪಾಗಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿ ಕೊಳ್ಳುತ್ತಿದ್ದರು. ಬಹಳಷ್ಟು ವಿದ್ಯಾರ್ಥಿಗಳು ಹೊಸ ಬಟ್ಟೆ ತೊಟ್ಟು ಹಬ್ಬದಲ್ಲಿ ಭಾಗವ ಹಿಸುವಂತೆ ಈ ವಿಶೇಷ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಒಟ್ಟಾರೆ ೭೫ ವರ್ಷಗಳ ಇತಿಹಾಸ ವಿರುವ ರಾಷ್ಟ್ರೀಯ ಶಿಕ್ಷಣ ಸಮಿತಿಯಎನ್‌ಇಎಸ್ ಹಬ್ಬ ಕಾರ್ಯಕ್ರಮ ನೆನಪಿನಲ್ಲಿಡುವಂತೆ ಮಾಡಿತು.