ಅ.೨೦ರಿಂದ ನಾಲ್ಕು ದಿನಗಳ ಕಾಲ ವೈಭವದಿಂದ ಸಾಂಸ್ಕೃತಿಕ ಕಾರ್ಯಕ್ರಮ…

ಶಿವಮೊಗ್ಗ: ಮಹಾನಗರ ಪಾಲಿಕೆಯಿಂದ ಆಚರಿಸಲಾಗು ತ್ತಿರುವ ದಸರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ದಸರಾ ಸಮಿತಿ ವತಿ ಯಿಂದ ಅ.೨೦ರಿಂದ ನಾಲ್ಕು ದಿನ ಗಳ ಕಾಲ ವೈಭವದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಚರಿಸಲಾ ಗುತ್ತಿದೆ ಎಂದು ಸಾಂಸ್ಕೃತಿಕ ದಸರಾ ಸಮಿತಿ ಅಧ್ಯಕ್ಷ ಇ. ವಿಶ್ವಾಸ್ ತಿಳಿಸಿ ದರು.
ಅವರು ಇಂದು ಪಾಲಿಕೆ ಕಚೇರಿ ಯಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಅ.೨೦ರ ಸಂಜೆ ೫ರಿಂದ ರಾತ್ರಿ ೯-೩೦ರ ವರೆಗೆ ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್ ಸುಂದರರಾಜ್ ನೇತೃತ್ವದಲ್ಲಿ ವಚನ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ಕವಿಗೋಷ್ಠಿ ನಡೆಯಲಿದ್ದು, ಖ್ಯಾತ ವಕೀಲ ಎಂ.ಆರ್. ಸತ್ಯನಾರಾಯಣ ಉದ್ಘಾಟಿಸಲಿzರೆ ಎಂದರು.
ಮುಖ್ಯ ಅತಿಥಿಯಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಆಯುಕ್ತ ಕೆ. ಮಾಯಣ್ಣ ಗೌಡ, ಪಾಲಿಕೆ ಸದಸ್ಯರಾದ ಎಸ್. eನೇಶ್ವರ್, ಸುನೀತಾ ಅಣ್ಣಪ್ಪ, ರಾಹುಲ್ ಪಿ. ಬಿದರೆ, ಕಲ್ಪನಾ ರಮೇಶ್ ಹಾಗೂ ಇನ್ನಿತರರು ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಮೇಯರ್ ಎಸ್. ಶಿವಕುಮಾರ್ ವಹಿಸಲಿzರೆ ಎಂದರು.
ಅ.೨೨ರ ಸಂಜೆ ೫-೩೦ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ನಾಟ್ಯ ವೈವಿಧ್ಯ ಹಾಗೂ ಸಂಗೀತ ಸಂಭ್ರಮ ಕಾರ್ಯಕ್ರಮವನ್ನು ಖ್ಯಾತ ಚಿತ್ರನಟ ಅಜೇಯ್ ರಾವ್ ಉದ್ಘಾಟಿಸಲಿzರೆ. ಮುಖ್ಯ ಅತಿಥಿಯಾಗಿ ಸಂಸದ ಬಿವೈಆರ್, ಶಾಸಕ ಎಸ್.ಎನ್. ಚನ್ನಬಸಪ್ಪ, ಶಾರದಾ ಪೂರ್‍ಯಾ ನಾಯ್ಕ, ಎಸ್. ರುದ್ರೇ ಗೌಡ, ಎಸ್‌ಪಿ ಜಿ.ಕೆ ಮಿಥುನ್‌ಕುಮಾರ್, ಆಯುಕ್ತ ಕೆ. ಮಾಯಣ್ಣ ಗೌಡ, ಜಿ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಮೇಯರ್ ಎಸ್. ಶಿವಕುಮಾರ್, ಉಪಮೇಯರ್ ಲಕ್ಷ್ಮಿ ಶಂಕರ ನಾಯಕ್ ಆಗಮಿಸ ಲಿದ್ದು, ಸಮಿತಿಯ ಅಧ್ಯಕ್ಷ ಇ. ವಿಶ್ವಾಸ್ ಅಧ್ಯಕ್ಷತೆ ವಹಿಸಲಿzರೆ.
ನಂತರ ಪ್ರಹ್ಲಾದ್ ದೀಕ್ಷಿತ್ ನೇತೃತ್ವದಲ್ಲಿ ರಾಗರಂಜಿನಿ ತಂಡದ ವರಿಂದ ಸಂಗೀತ ಸಂಭ್ರಮ ಹಾಗೂ ಸ್ಥಳೀಯ ನೃತ್ಯ ಶಾಲಾ ಮಕ್ಕಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ ಎಂದರು.
ಅ.೨೩ರ ಸಂಜೆ ೫-೩೦ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಸಂಗೀತ ಹಾಗೂ ಜನಪದ ವೈಭವ ಕಾರ್ಯಕ್ರಮವನ್ನು ಖ್ಯಾತ ಚಿತ್ರನಟ ವಿಜಯರಾಘವೇಂದ್ರ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಎಸ್.ಎನ್ ಚನ್ನಬಸಪ್ಪ ವಹಿಸಲಿzರೆ. ಮುಖ್ಯ ಅತಿಥಿ ಯಾಗಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಶಾಸಕ ಬಿ.ವೈ. ವಿಜ ಯೇಂದ್ರ, ಡಿ.ಎಸ್. ಅರುಣ್, ಆಯುಕ್ತ ಕೆ.ಮಾಯಣ್ಣ ಗೌಡ, ಮಾಜಿ ಶಾಸಕ ಕೆ.ಬಿ. ಅಶೋಕ ನಾಯ್ಕ, ಬಿಜೆಪಿ ಜಿಧ್ಯಕ್ಷ ಟಿ.ಡಿ. ಮೇಘರಾಜ್ ಹಾಗೂ ಇನ್ನಿತರರು ಆಗಮಿಸಲಿzರೆ ಎಂದರು.
ನಂತರ ಜೋಗಿ ಸುನೀತಾ ಮಂಗಳಾ ರವಿ ಹಾಗೂ ಕಲಾತ್ಮಕ ತಂಡದವರಿಂದ ಸಂಗೀತ ವೈಭವ ಮತ್ತು ನಾಗರಾಜ್‌ಮೂರ್ತಿ ತಂಡದವರಿಂದ ಜನಪದ ವೈಭವ ನಡೆಯಲಿದೆ ಎಂದರು.
ಅದೇ ದಿನ ಸಂಜೆ ೫ರಿಂದ ರಾತ್ರಿ ೧೦ ಗಂಟೆಯವರೆಗೆ ಕುವೆಂಪು ರಂಗಮಂದಿರದಲ್ಲಿ ಯಕ್ಷ ದಸರಾ ನಡೆಯಲಿದ್ದು, ಶಿವಮೊಗ್ಗದ ಯಕ್ಷ ಸಂವರ್ಧನಾದ ಕಾರ್ಯದರ್ಶಿ ಶ್ರೀನಿವಾಸ ಆಚಾರ್ ಉದ್ಘಾಟಿಸಲಿ zರೆ. ಅಧ್ಯಕ್ಷತೆಯನ್ನು ಉಪ ಮೇಯರ್ ಲಕ್ಷ್ಮಿ ಶಂಕರ ನಾಂiiಕ್ ವಹಿಸಲಿzರೆ. ಮುಖ್ಯ ಅತಿಥಿಯಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ, ಮೇಯರ್ ಎಸ್. ಶಿವಕುಮಾರ್ ಹಾಗೂ ಪಾಲಿಕೆ ಸದಸ್ಯರ ಭಾಗವಹಿಸಲಿzರೆ.
ನಂತರ ಯಕ್ಷ ಸಂವರ್ಧನಾ ತಂಡದವರಿಂದ ಲಕ್ಷ್ಮಿ ವಿವಾಹ ಹಾಗೂ ಮಹಾ ಗಣಪತಿ ಯಕ್ಷ ಕಲಾ ಬಳಗದವರಿಂದ ಬಲರಾಮ ಗರ್ವಭಂಗ ಪ್ರಸಂಗ ಪ್ರದರ್ಶನಗೊಳ್ಳಲಿದೆ ಎಂದರು.
ಅ.೨೪ರಂದು ಸಂಜೆ ೫ ಗಂಟೆಗೆ ಫ್ರೀಡಂ ಪಾರ್ಕ್‌ನಲ್ಲಿ ಶಂಕರ್ ಶ್ಯಾನಭಾಗ್ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಪಾಲಿಕೆ ಸದಸ್ಯೆ ಸುನೀತಾ ಅಣ್ಣಪ್ಪ, ಸಮಿತಿಯ ಸದಸ್ಯ ಕಾರ್ಯದರ್ಶಿ ಸಿ.ಆರ್.ಸಿದ್ದಪ್ಪ ಉಪಸ್ಥಿತರಿದ್ದರು.