ಆ.೨೦ರಂದು ಮುದ್ರಕರೊಡನೆ ಸಂವಾದ
ಶಿವಮೊಗ್ಗ: ಮಲೆನಾಡು ಮುದ್ರಕರ ಸಂಘ ಹಾಗೂ ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಆಶ್ರಯದಲ್ಲಿ ಆ.೨೦ ರ ಬೆಳಿಗ್ಗೆ ೧೦ರಿಂದ ೧-೩೦ರವರೆಗೆ ಜಿ ವಾಣಿಜ್ಯ ಸಂಘದ ಸಭಾಂಗಣದಲ್ಲಿ ಮುದ್ರಣ ಕ್ಷೇತ್ರದ ಇಂದಿನ ಸವಾಲುಗಳು-ಪರಿಹಾರ ವಿಷಯ ಕುರಿತು ತಜ್ಞರಿಂದ ಚರ್ಚೆ, ಮುದ್ರಕರೊಡನೆ ಸಂವಾದ ಹಾಗೂ ಸಮನ್ವಯ ಸಮಿತಿ ಸಭೆ ಹಮ್ಮಿಕೊಳ್ಳ ಲಾಗಿದೆ ಎಂದು ಮಲೆನಾಡು ಮುದ್ರಕರ ಸಂಘದ ಅಧ್ಯಕ್ಷ ಎಂ. ಮಾಧವಾಚಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಮಲೆನಾಡು ಮುದ್ರಕರ ಸಂಘವು ಜಿ ವ್ಯಾಪ್ತಿಯಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿದ್ದು, ಮುದ್ರಕರಿಗೆ ಪೂರಕ ಅನುಕೂಲ ವಾತಾವರಣ ಕಲ್ಪಿಸುತ್ತಿವೆ. ಸುಮಾರು ೨೫೦ಕ್ಕೂ ಹೆಚ್ಚು ಸದಸ್ಯರನ್ನೊಳಗೊಂಡಿದೆ ಎಂದ ಅವರು, ಮುದ್ರಕರೊಡನೆ ಸಂವಾದ ವನ್ನು ರಾಜ್ಯದಲ್ಲಿ ಪ್ರಥಮ ಬಾರಿಗೆ ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದು, ನಂತರ ರಾಜ್ಯದ ಇನ್ನಿತರ ಕಡೆ ಏರ್ಪಡಿಸಲಾಗುವುದು ಎಂದರು.
ಸಂವಾದದಲ್ಲಿ ಮುದ್ರಣ ಕ್ಷೇತ್ರದ ಸವಾಲು ಮತ್ತು ಪರಿಹಾರ, ಆಧುನಿಕ ತಂತ್ರeನ ಅಳವಡಿಕೆ, ಜಿ ಮಟ್ಟದಲ್ಲಿ ಮುದ್ರಣ ಕೈಗಾರಿಕೆ ಕ್ಲಸ್ಟರ್ ಸ್ಥಾಪಿಸುವ ಬಗ್ಗೆ ವಿಚಾರ ವಿನಿಮಯ, ರಾಜ್ಯ ಸಂಘ ದಿಂದ ನಿರೀಕ್ಷಿಸುವ ಸವಾಲುಗಳು ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾ ಗುವುದು ಎಂದರು.
ಸಂವಾದವು ಮುದ್ರಣ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ನಡೆಯಲಿದ್ದು, ಮುದ್ರಕರು ತಮ್ಮ ಅಮೂಲ್ಯವಾದ ಪ್ರಶ್ನೆ, ಪರಿಹಾರ, ಮಾರ್ಗೋಪಾಯ, ಸಮಸ್ಯೆಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಚರ್ಚಿಸಿ ಪರಿಹಾರ ಕಂಡುಕೊಳ್ಳ ಬಹುದಾಗಿದೆ. ಉತ್ತಮ ಸಲಹೆ ಗಳನ್ನು ನೀಡುವ ಐವರು ಮುದ್ರಕರಿಗೆ ಬಹುಮಾನ ನೀಡಲಾಗುವುದು ಎಂದರು.
ಜಿ ವಾಣಿಜ್ಯ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಖಿಲ ಭಾರತ ಮುದ್ರಣಕಾರರ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಪ್ರಿಂಟಿಂಗ್ ಪಾರ್ಕ್ ಕ್ಲಸ್ಟರ್‌ನ ಅಧ್ಯಕ್ಷ ಸಿ.ಆರ್.ಜನಾರ್ಧನ್, ರಾಜ್ಯ ಮುದ್ರಣಕಾರರ ಸಂಘದ ಅಧ್ಯಕ್ಷ ಬಿ.ಆರ್. ಅಶೋಕ್ ಕುಮಾರ್, ರಾಜ್ಯ ಮುದ್ರಣಕಾರರ ಸಮನ್ವಯ ಸಮಿತಿ ಸಂಚಾಲಕ ಎಂ. ಮಹೇಶ್‌ಕುಮಾರ್, ದಾವಣಗೆರೆ ಡಿವಿಜನ್ ಸಂಚಾಲನಾ ಸಮಿತಿ ಉಪಾಧ್ಯಕ್ಷ ಎ.ಎಂ. ಪ್ರಕಾಶ್ ವಿಷಯತಜ್ಞರಾಗಿ ಭಾಗವಹಿಸಲಿ zರೆ ಎಂದರು.
ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹಾವೇರಿ, ವಿಜಯನಗರ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಯ ಮುದ್ರಕರು ಸಂವಾದದಲ್ಲಿ ಭಾಗವಹಿಸಿ ಪರಿಹಾರ ಕಂಡುಕೊಳ್ಳಲು ಕೋರಿದ ಅವರು, ಸುಮಾರು ೧೦೦ಕ್ಕೂ ಹೆಚ್ಚು ಮುದ್ರಕರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸಂಘದ ಕಾರ್ಯದರ್ಶಿ ಗಣೇಶ್ ಬಿಳಗಿ ಮಾತನಾಡಿ, ಪ್ರಬಲ ಪೈಪೋಟಿ ಹಾಗೂ ಆಧು ನಿಕ ತಂತ್ರeನ ಬಳಕೆ, ಮುದ್ರಣ ಸಾಮಗ್ರಿ ಹಾಗೂ ವಿದ್ಯುತ್ ದರ ಏರಿಕೆ, ಕಾರ್ಮಿಕರ ಕೊರತೆಯಿಂ ದಾಗಿ ಸಣ್ಣ ಸಣ್ಣ ಮುದ್ರಣಾಲಯ ಗಳು ಮುಚ್ಚುವ ಹಂತ ತಲುಪಿದ್ದು, ಈ ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳಲು ಈ ಸಂವಾದ ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಮಂಜುನಾಥ್, ಹರೀಶ್ ನಾಯಕ, ಯೋಗೀಶ್, ಎಸ್.ಎಸ್. ಗಿರೀಶ್, ಮುರುಳಿ, ಶ್ರುತಿಚಂದ್ರು ಉಪಸ್ಥಿತರಿದ್ದರು.