ಏ.7: ಶಿಲ್ಪಿ ಅರುಣ್ ಯೋಗಿರಾಜ್‌ಗೆ ಸನ್ಮಾನ…

shilpi

ಶಿವಮೊಗ್ಗ: ಜಿ ವಿಶ್ವಕರ್ಮ, ವಿಶ್ವ ಬ್ರಾಹ್ಮಣ, ಕಾಳಿಕಾ ಪರಮೇಶ್ವರಿ ದೇವಸ್ಥಾನ ಸೇವಾ ಸಮಿತಿ ಹಾಗೂ ಜಿಯ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏ.೭ರಂದು ಬೆಳಿಗ್ಗೆ ೧೧ಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಧ್ಯೆಯ ಶ್ರೀರಾಮಲ ವಿಗ್ರಹದ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವಿಶ್ವಕರ್ಮದ ಮಹಾಸಭಾದ ಅಧ್ಯಕ್ಷ ನಿರಂಜನ ಮೂರ್ತಿ ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯೋಧ್ಯೆಯ ಶ್ರೀರಾಮಮಂದಿರ ಉದ್ಘಾಟನೆಯಾಗಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ಮಂದಿರದಲ್ಲಿ ಶ್ರೀರಾಮ ಲ ವಿಗ್ರಹದ ಶಿಲ್ಪಿ ನಮ್ಮ ಕನ್ನಡದವರು ಅದರಲ್ಲೂ ಮೈಸೂರಿನವರು ಮತ್ತು ವಿಶ್ವಕರ್ಮದವರು ಎಂಬುವುದೇ ನಮಗೆ ದೊಡ್ಡ ಹೆಮ್ಮೆ, ಅವರನ್ನು ಸನ್ಮಾನಿಸುತ್ತಿರುವುದು ಅತ್ಯಂತ ಸಂಭ್ರಮವಾಗಿದೆ ಎಂದರು.
ಅರುಣ್‌ಯೋಗೀರಾಜ್ ದೇಶದ ಬಹುಬೇಡಿಕೆಯ ಶಿಲ್ಪಿಯಾಗಿzರೆ. ಮೈಸೂರಿನ ೫ ತಲೆಮಾರಿನ ಪ್ರಸಿದ್ಧ ಶಿಲ್ಪಿಗಳ ಕೌಟುಂಬಿಕ ಹಿನ್ನಲೆ ಹೊಂದಿರುವ ಇವರು ದೇಶದಲ್ಲಿಯೇ ಹೆಸರಾಗಿzರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಇವರ ಪ್ರತಿಭೆಯನ್ನು ಶ್ಲಾಘಿಸಿzರೆ. ಇವರ ಕುಟುಂಬದ ಹಿರಿಯರನ್ನು ಮೈಸೂರು ರಾಜರು ಪೋಷಣೆ ಮಾಡುತ್ತಿದ್ದರು ಎನ್ನುವುದು ಹೆಮ್ಮೆಯಾಗಿದೆ ಎಂದರು.
ಇವರಿಗೆ ಹಲವು ಪ್ರಶಸ್ತಿಗಳು ಬಂದಿವೆ. ೨೦೨೦ರಲ್ಲಿ ನಾಲ್ವಡಿ ಪ್ರಶಸ್ತಿ, ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಅವರಿಗೆ ಮೆಚ್ಚುಗೆ , ದಿ ಕ್ರಾಫ್ಟ್ ಕೌನ್ಸಿಲ್ ಆಫ್ ಕರ್ನಾಟಕದ ಗೌರವ ಸದಸ್ಯತ್ವ, ರಾಜ್ಯೋತ್ಸವ ಪ್ರಶಸ್ತಿ, ಮುಖ್ಯಮಂತ್ರಿಗಳಿಂದ ಸನ್ಮಾನ, ಕ್ರೀಡಾ ಅಕಾಡೆಮಿಯಿಂದ ಅಭಿನಂದನೆ ಹೀಗೆ ಹಲವು ಪ್ರಶಸ್ತಿ ಸನ್ಮಾನಗಳನ್ನು ಇವರು ಪಡೆದಿzರೆ ಎಂದರು.
ಸಮಾಜದ ಪ್ರಮುಖ ಎಸ್.ರಮೇಶ್ ಮಾತನಾಡಿ, ಇಂತಹ ಮಹಾನ್‌ಶಿಲ್ಪಿಯನ್ನು ಸನ್ಮಾನಿಸುತ್ತಿರುವುದು ನಮ್ಮ ಕರ್ತವ್ಯ ಕೂಡ ಏ.೭ರಂದು ಸನ್ಮಾನ ಕಾರ್ಯಕ್ರಮಕ್ಕೂ ಮೆದಲು ಬೆಳಿಗ್ಗೆ ೯ಕ್ಕೆ ಗಾಂಧಿಬಜರಿನ ಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ತಾರಕಹೋಮದೊಂದಿಗೆ ರಾಜಬೀದಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ರಾಮಣ್ಣಶ್ರೇಷ್ಠಿ ಪಾರ್ಕಿನಿಂದ ಅಂಬೇಡ್ಕರ್ ಭವನದವರೆಗೆ ಈ ಉತ್ಸವ ನಡೆಯಲಿದೆ ಎಂದರು.
ಸನ್ಮಾನ ಸಮಾರಂಭದ ಸಾನಿಧ್ಯವನ್ನು ಹಾಸನ ಜಿ ಅರೇಮಾದನಹಳ್ಳಿಯ ಶ್ರೀ ಶಿವಸುeನತೀರ್ಥ ಮಹಾಸ್ವಾಮಿ ಹಾಗೂ ಚನ್ನಗಿರಿ ತಾಲ್ಲೂಕು ವಡ್ನಾಳ್ ಮಠದ ಶ್ರೀ ಶಂಕರ ಆತ್ಮಾನಂದ ಸರಸ್ವತಿ ಮಹಾಸ್ವಾಮಿಜಿಯವರು ಸಾನಿಧ್ಯ ವಹಿಸಲಿzರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬಿ.ಕೆ.ಶ್ರೀನಾಥ್, ಲಿಂಗಪ್ಪಾಚಾರ್, ರೂಪ, ಯಶೋಧ ನಾಗರಾಜ್, ಮಾಲತೇಶ್, ಸತೀಶ್, ಮನೇಶ್, ಶ್ರೀನಿವಾಸ, ಜಗನ್ನಾಥ ಮುಂತಾದವರು ಇದ್ದರು.