ಏ.30: ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ 100ನೇ ಬಾನುಲಿ ಸಂಚಿಕೆ…

ಶಿವಮೊಗ್ಗ: ಪ್ರಧಾನಿ ಮೋದಿ ಯವರ ೧೦೦ನೇ ಬಾನುಲಿ ಸಂಚಿಕೆ ಮನ್ ಕಿ ಬಾತ್ ಗಿನ್ನೀಸ್ ದಾಖಲೆ ಸೇರಲಿದ್ದು, ಏ.೩೦ರಂದು ಬೆಳಿಗ್ಗೆ ೧೧ರಿಂದ ೧೧.೩೦ರವರೆಗೆ ಬಿತ್ತರ ಗೊಳ್ಳಲಿರುವ ಈ ಕಾರ್ಯಕ್ರಮ ವನ್ನು ದೇಶದ ಕೋಟ್ಯಂತರ ಜನರು ವೀಕ್ಷಣೆ ಮಾಡಲಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಪ್ರಧಾನಿಯವರ ಜನಪ್ರಿಯ ಬಾನುಲಿ ಕಾರ್ಯಕ್ರಮ ಮನ್ ಕಿ ಬಾತ್ ೨೦೧೪ರ ಅಕ್ಟೋಬರ್ ತಿಂಗಳಲ್ಲಿ ಆರಂಭವಾಯಿತು. ಏ.೩೦ ರಂದು ಅದು ೧೦೦ನೇ ದಿನ ತಲುಪುತ್ತದೆ. ಸತತವಾಗಿ ತಪ್ಪದೆ ಬಿತ್ತರಗೊಂಡ ಕಾರ್ಯಕ್ರಮ ವಿದು. ಪ್ರಧಾನಿಯೊಬ್ಬರು ದೇಶದ ಸಣ್ಣ ಸಣ್ಣ ವಿಷಯಗಳನ್ನು ಸಮಸ್ಯೆಗಳನ್ನು, ಸಾಧಕರನ್ನು ಪರಿಚಯಿಸುತ್ತಾ ಕೋಟ್ಯಂತರ ಅಭಿಮಾನಿಗಳನ್ನು ಸೃಷ್ಟಿಸಿದ ಕಾರ್ಯಕ್ರಮ ಮತ್ತು ೩೦ರಂದು ಏಕಕಾಲದಲ್ಲಿ ದೇಶದ ಕೋಟ್ಯಂತರ ಜನರು ಇದನ್ನು ವೀಕ್ಷಣೆ ಮಾಡುತ್ತಿದ್ದಾರೆ. ಹಾಗಾಗಿ ಈ ಕಾರ್ಯಕ್ರಮ ಗಿನ್ನೀಸ್ ದಾಖಲೆಗೆ ಸೇರಬಹುದು ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿಯೂ ಕೂಡ ಈ ಕಾರ್ಯಕ್ರಮ ವೀಕ್ಷಿಸಲು ಜಿಲ್ಲೆಯ ಎಲ್ಲಾ ೧೨೭೬ ಬೂತ್‌ಗಳಲ್ಲಿ ದೊಡ್ಡ ಪರದೆಯ ಮೂಲಕ ವೀಕ್ಷಿಸಲು ಅವಕಾಶ ಮಾಡಲಾಗಿದೆ. ಪ್ರತಿ ಬೂತ್ ನಲ್ಲೂ ೧೦೦ರಿಂದ ೧೦೦೦ ಜನರು ವೀಕ್ಷಿಸಬಹುದಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಮತ್ತಷ್ಟು ಮತದಾರರಿಗೆ ತಲುಪಿಸಲು ನಮ್ಮ ಕಾರ್ಯಕರ್ತರು ಸಿದ್ಧರಾಗಿ ದ್ದಾರೆ. ಇದು ಯಾವುದೇ ರಾಜಕೀಯಕ್ಕಾಗಿ ಅಲ್ಲ. ನಿರಂತರವಾಗಿ ಬಿತ್ತರ ಗೊಂಡ ಕಾರ್ಯಕ್ರಮದ ಮುಂ ದುವರಿದ ೧೦೦ನೇ ಸಂಚಿಕೆ ಯಾಗಿದೆ ಎಂದರು.
ಪ್ರಧಾನಿಯವರು ದೇಶದ ಎಲ್ಲಾ ಜಿಲ್ಲೆಗಳ, ಹಳ್ಳಿಗಳ ಸಾಧಕರನ್ನು ಗುರುತಿಸಿ ತಮ್ಮ ಭಾಷಣದಲ್ಲಿ ಹೇಳುವುದರಿಂದ ಜನರಿಗೆ ತುಂಬಾ ಆಪ್ತವಾಗುತ್ತಾರೆ. ೪೭ನೇ ಸಂಚಿಕೆಯಲ್ಲಿ ಮೋದಿಯ ವರು ಮತ್ತೂರಿನ ಸಂಸ್ಕೃತ ಗ್ರಾಮ ದ ಬಗ್ಗೆ ಪ್ರಸ್ತಾಪ ಮಾಡಿದ್ದನ್ನು ಇತ್ತೀಚೆಗೆ ಜಿಲ್ಲೆಯ ಸುರೇಶ್ ಮತ್ತ ಮೈತ್ರಿಯವರ ಅಡಿಕೆ ಹಾಳೆ ಉದ್ಯಮಕ್ಕೆ ಸಂಬಂಧಿಸಿದಂತೆ ಪ್ರಶಂಸೆ ವ್ಯಕ್ತಪಡಿಸಿ ದ್ದರು. ಮತ್ತು ಬಸವಣ್ಣ, ಕುವೆಂಪುರಂತಹ ಮಹಾನ್ ಪುರುಷರ ಪ್ರಸ್ತಾಪ ಮಾಡಿದ್ದರು ಎಂದರು.


ಆಪರೇಷನ್ ಮಾಡದೆ ಅಧಿಕಾರಕ್ಕೆ ಬರುತ್ತೇವೆ: ಕರ್ನಾಟಕದಲ್ಲಿ ಈ ಬಾರಿ ಯಾವ ಆಪರೇಷನ್ ಮಾಡದೆ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತೇವೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಸದ್ಯ ಬಿಜೆಪಿ ರಾಜ್ಯದಲ್ಲಿ ೧೨೦ ಸ್ಥಾನಗಳನ್ನು ಗೆಲ್ಲುತ್ತದೆ ಆದರೆ ರಾಜ್ಯಕ್ಕೆ ಪ್ರಧಾನಿ ಮೋದಿ ಸೇರಿದಂತೆ ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಬರಲಿದ್ದು, ಆ ಪ್ರಚಾರದ ನಂತರ ೧೪೦ರಿಂದ ೧೫೦ ಸ್ಥಾನ ಪಡೆದು ಯಾರ ಸಹಕಾರವೂ ಇಲ್ಲದೆ ಯಾವುದೇ ಆಪರೇಷನ್ ಇಲ್ಲದೆ ಸರ್ಕಾರ ರಚಿಸುತ್ತೇವೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಧನಂಜಯ ಸರ್ಜಿ, ಶಿವರಾಜ್, ಶ್ರೀನಾಥ್, ಚಂದ್ರಶೇಖರ್, ಮಹಾಂತೇಶ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.