ಅ.15 : ಡಾ|ಎ. ಪಿ. ಜೆ. ಅಬ್ದುಲ್ ಕಲಾಂ ಜನ್ಮ ದಿನಾಚರಣೆ…

kalam

ವಿದ್ಯಾರ್ಥಿಯು ನಿರಂತರ ಕಲಿಕಾರ್ಥಿಯಾಗಿದ್ದು ಭವಿಷ್ಯದಲ್ಲಿ ವಿಶ್ವದ ಆಧಾರ ಸ್ತಂಭವೆನಿಸುತ್ತಾನೆ. ಅಂತಹ ವಿದ್ಯಾರ್ಥಿಯ ನಿರ್ಮಾಣ ಮತ್ತು ಸರ್ವಾಂಗೀಣ ಅಭಿವೃದ್ಧಿಯು ಎಲ್ಲ ಪೋಷಕರ, ಶಾಲೆಯ ಮತ್ತು ಶಿಕ್ಷಕರ ಜವಾಬ್ದಾರಿ. ಆದ್ದರಿಂದ ಎ.ಪಿ.ಜೆ. ಅಬ್ದುಲ್ ಕಲಾಂರವರೇ ಹೇಳಿ ಕೊಳ್ಳುವಂತೆ “ನಾನು ಶಿಕ್ಷಕನಾಗಿ ನೆನಪಿನಲ್ಲಿರಲು ಇಷ್ಟಪಡುತ್ತೇನೆ ಎಂದಿzರೆ.
ಭಾರತದ ಕ್ಷಿಪಣಿ ಮನುಷ್ಯ, ಭಾರತ ಕಂಡ ಸರ್ವ ಶ್ರೇಷ್ಠ ವಿeನಿ ಮತ್ತು ಶಿಕ್ಷಕರು ಆದ ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮ ದಿನದ ಸವಿ ನೆನಪಿಗಾಗಿ ‘ವಿಶ್ವ ವಿದ್ಯಾರ್ಥಿ ಗಳ ದಿನ’ವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.
೨೦೧೦ರಲ್ಲಿ ವಿಶ್ವಸಂಸ್ಥೆಯು ಅ.೧೫ ರಂದು ‘ವಿಶ್ವ ವಿದ್ಯಾರ್ಥಿಗಳ ದಿನ’ಎಂದು ಘೋಷಿಸಿತು. ಈ ಮೂಲಕ ಅಬ್ದುಲ್ ಕಲಾಂ ಅವರು ಶಿಕ್ಷಣವನ್ನು ಉತ್ತೇಜಿಸಲು ಪಟ್ಟ ಪ್ರಾಮಾಣಿಕ ಪ್ರಯತ್ನವನ್ನು ಸ್ಮರಿಸುವುದು ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ.


ಬಡತನ ಮತ್ತು ನಿರುದ್ಯೋಗ ನಿರ್ಮೂಲನೆಯ ಉದ್ದೇಶವನ್ನು ಹೊಂದಿದ ವೇಗಯುತ ಅಭಿವೃದ್ಧಿ ಯೊಂದಿಗೆ ರಾಷ್ಟೀಯ ರಕ್ಷಣೆಯು ರಾಷ್ಟ್ರದ ಆದ್ಯತೆಯ ಅಂಶವೆಂಬು ದನ್ನು ಪ್ರತಿಯೊಬ್ಬ ಭಾರತೀಯನೂ ಗಮನಿಸಬೇಕು. – ಹೀಗೆಂದು ೨೦೦೨ರ ಜು.೨೫ ರಂದು ಭಾರತದ ೧೧ನೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡು ಭಾರತ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದವರು ಯಾರು ಗೊತ್ತೇ? ಅವರೇ, ಸರಳತೆಯ ಸಾಕಾರ ಮೂರ್ತಿ, ಸಾರ್ವಕಾಲಿಕ ಸ್ಫೂರ್ತಿ, ಭಾರತ ಮಾತೆಯ ಹೆಮ್ಮೆಯ ಪುತ್ರ, ಭಾರತದ ವೈeನಿಕ ಮತ್ತು ವೈಮಾನಿಕ ಕ್ಷೇತ್ರವನ್ನು ವಿಶ್ವಕ್ಕೆ ಮಿಂಚಿನಂತೆ ಬೆಳಗಿಸಿದ ಹೆಮ್ಮೆಯ ವಿeನಿ, ಜವಾಬ್ದಾರಿಯುತ ರಾಜಕಾರಣಿ, ಭಾರತದ ಕ್ಷಿಪಣಿಯ ಜನಕ, ವಿಚಾರವಾದಿ, ಶ್ರೇಷ್ಠ ಉಪನ್ಯಾಸಕ, ಚಿಂತಕ, ತತ್ವeನಿ, ಮಕ್ಕಳ ನೆಚ್ಚಿನ ಮೇಷ್ಟ್ರು , ಜನಸಾಮಾನ್ಯರ ಜನಪ್ರಿಯ ರಾಷ್ಟ್ರಪತಿ, ಅಪ್ಪಟ ದೇಶಭಕ್ತ, ರಾಷ್ಟ್ರಾಭಿವೃದ್ಧಿಯ ಕನಸುಗಾರ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ರವರು.
ಭಾರತ ದೇಶ ಕಂಡ ಅದ್ವಿತೀಯ ವಾದ ನಿಸ್ವಾರ್ಥ ವ್ಯಕ್ತಿತ್ವ ಅವರದು. ಭಾರತದ ಬಗ್ಗೆ ಅವರಿಗಿರುವ ಪ್ರೀತಿ, ಅಭಿಮಾನ, ಬದ್ಧತೆ ಎಲ್ಲವೂ ಅವರ ಭಾಷಣದ ಮೂಲಕ ಅಭಿವ್ಯಕ್ತಿ ಗೊಂಡಿರುವುದನ್ನು ತಿಳಿಯುತ್ತೇವೆ. ಇಂತಹ ಮಹೋನ್ನತ ವ್ಯಕ್ತಿತ್ವದ ಕಲಾಂ ರವರ ಜೀವನ ಗಾಥೆಯನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.
ಎ. ಪಿ. ಜೆ. ಅಬ್ದುಲ್ ಕಲಾಂ ರವರ ಪೂರ್ಣ ಹೆಸರು ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಎಂದು. ಇವರು ತಮಿಳು ನಾಡಿನ ರಾಮೇಶ್ವರಂನಲ್ಲಿ, ಅ.೧೫, ೧೯೩೧ರಲ್ಲಿ ತಮಿಳು ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಜೈನುಲಬ್ದೀನ್, ಅವರು ದೋಣಿ ಮಾಲೀಕರಾಗಿ ದ್ದರು. ತಾಯಿ ಅಶಿಮಾ ಗೃಹಿಣಿ ಯಾಗಿದ್ದರು. ಕಲಾಂ ಅವರ ತಂದೆ, ಈಗ ನಿರ್ನಾಮವಾದ ಧನುಷ್ಕೋಟಿ ಮತ್ತು ರಾಮೇಶ್ವರಂ ನಡುವೆ ತಮ್ಮ ದೋಣಿಯಲ್ಲಿ ಹಿಂದು ಭಕ್ತಾದಿಗಳನ್ನು ಕರೆದು ಕೊಂಡು ಹೋಗುತ್ತಿದ್ದರು.
ಕಲಾಂ ಅವರು ಕುಟುಂಬದ ನಾಲ್ಕು ಜನ ಸಹೋದರರು ಮತ್ತು ಒಬ್ಬ ಸಹೋದರಿಯಲ್ಲಿ ಅತ್ಯಂತ ಕಿರಿಯ ವರಾಗಿದ್ದರು. ಅವರು ಬಡತನದ ಹಿನ್ನೆಲೆಯಿಂದ ಬಂದವರು ಮತ್ತು ತನ್ನ ಕುಟುಂಬಕ್ಕೆ ಆರ್ಥಿಕವಾಗಿ ಬೆಂಬಲಿಸುವ ಸಲುವಾಗಿ, ಕಿರಿಯ ವಯಸ್ಸಿನ ಕೆಲಸ ಆರಂಭಿಸಿದರು. ಕಲಾಂ ರವರಿಗೆ ತಮ್ಮ ತಂದೆಯೇ ಸ್ಫೂರ್ತಿ. ತಮ್ಮ ತಂದೆಗೆ ಆರ್ಥಿಕವಾಗಿ ಸಹಾಯ ಮಾಡಲು, ಅವರು ಶಾಲೆಯ ನಂತರ ಸಹೋದರ ಸಂಸೂದ್ದೀನ್ ಕಲಾಂ ರವರೊಂದಿಗೆ ದಿನಪತ್ರಿಕೆಗಳನ್ನು ವಿತರಣೆ ಮಾಡುತ್ತಿದ್ದರು. ಇವರ ಬಾಲ್ಯವು ಬಹಳ ಬಡತನದಿಂದ ಕೂಡಿತ್ತು.
ಬೆಳಗಿನ ಜವ ನಾಲ್ಕು ಘಂಟೆಗೆ ಎದ್ದು ದಿನದ ಪಾಠಗಳನ್ನು ಓದಿ ಕೊಂಡು ಶಾಲೆಗೆ ಹೋಗುತ್ತಿದ್ದರು. ಅವರು ಶಾಲೆಯಲ್ಲಿzಗ ಒಬ್ಬ ಸಾಧಾರಣ ವಿದ್ಯಾರ್ಥಿಯಾಗಿದ್ದು, ಚುರುಕಾದ ಮತ್ತು ಕಠಿಣ ಪರಿಶ್ರಮ ಪಡುವ ವಿದ್ಯಾರ್ಥಿಯಾಗಿದ್ದರು. ಅವರಿಗೆ ಗಣಿತದಲ್ಲಿ ವಿಶೇಷ ಆಸಕ್ತಿ ಇತ್ತು. ಅವರು ಗಣಿತವನ್ನು ಹಲವು ಗಂಟೆಗಳ ಅಧ್ಯಯನ ಮಾಡುತ್ತಿ ದ್ದರು. ಅಬ್ದುಲ್ ಕಲಾಂರವರು ರಾಮನಾಥಪುರಂನಲ್ಲಿನ ಶ್ವಾರ್ಟ್ಜ್ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ ಉನ್ನತ ಮಾಧ್ಯಮಿಕ ಶಿಕ್ಷಣ ಮುಗಿಸಿದ ನಂತರ ತಿರುಚಿರಾಪಳ್ಳಿ ಯಲ್ಲಿ ಸೇಂಟ್ ಜೋಸೆಫ್ಸ್ ಕಾಲೇಜಿಗೆ ಸೇರಿಕೊಂಡರು. ೧೯೫೪ ರಲ್ಲಿ ಮದ್ರಾಸ್ ವಿವಿಯಿಂದ ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ನಂತರ ಅವರು ಮದ್ರಾಸ್ ತಾಂತ್ರಿಕ ವಿವಿಯಲ್ಲಿ ಅಂತರಿಕ್ಷಯಾನ ಇಂಜಿನಿಯರಿಂಗ್ ಓದಲು ಮದ್ರಾಸ್‌ಗೆ ತೆರಳಿದರು.


೧೯೬೦ರಲ್ಲಿ ಮದ್ರಾಸ್ ತಾಂತ್ರಿಕ ಮಹಾವಿದ್ಯಾಲಯದಿಂದ ಪದವಿ ಪಡೆದ ನಂತರ ಕಲಾಂ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವದ್ಧಿ ಸಂಸ್ಥೆ (ಡಿ.ಅರ್.ಡಿ.ಓ) ನ ವಾಯುಯಾನ ವಿeನ ಅಭಿವೃದ್ಧಿ ವಿಭಾಗಕ್ಕೆ ಒಬ್ಬ ವಿeನಿ ಯಾಗಿ ಸೇರಿಕೊಂಡರು. ಅಲ್ಲಿ ಅವರು ತಮ್ಮ ವೃತ್ತಿ ಜೀವನದ ಪ್ರಾರಂಭದಲ್ಲಿ ಭಾರತದ ಭೂ ಸೇನೆಗೆ ಸಣ್ಣ ಹೆಲಿಕಾಪ್ಟರ್‌ಗಳನ್ನು ವಿನ್ಯಾಸ ಮಾಡುತ್ತಿದ್ದರು, ಆದರೆ ಅವರಿಗೆ ತಾವು ಡಿ.ಆರ್.ಡಿ.ಓ ದಲ್ಲಿ ಆಯ್ದುಕೊಂಡ ಕೆಲಸದ ಬಗ್ಗೆ ಅಸಮಾಧಾನ ಇತ್ತು. ಇವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ಯಲ್ಲಿ ವೈಮಾನಿಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದರು. ಇವರು ಭಾರತಕ್ಕೆ ಕ್ಷಿಪಣಿ ಹಾಗೂ ರಾಕೆಟ್ ತಂತ್ರeನವನ್ನು ತಯಾರಿಸಿರುವ ಕಾರಣ, ಇವರನ್ನು ಕ್ಷಿಪಣಿಗಳ ಜನಕ ಎಂದು ಕರೆಯಲಾಗುತ್ತದೆ. ಭಾರತದ ಮೊದಲ ಉಪಗ್ರಹ ಉಡಾವಣಾ ವಾಹನವಾದ ಖಔ ಐಐಐ ಮತ್ತು ಮಾರ್ಗದರ್ಶಿ ಕ್ಷಿಪಣಿ ಕಾರ್ಯಕ್ರಮದ ಮೇಲಿನ ಅವರ ಕೆಲಸವು ಅವರನ್ನು ಭಾರತದ ಅತ್ಯಂತ ಗೌರವಾನ್ವಿತ ವಿeನಿ ಯನ್ನಾಗಿ ಮಾಡಿತು ಮತ್ತು ಉನ್ನತ ತಂತ್ರeನದ ಏರೋಸ್ಪೇಸ್ ಯೋಜನೆಗಳ ವಿನ್ಯಾಸ ಮತ್ತು ಅಭಿವೃದ್ಧಿಗೆ ಅಡಿಪಾಯವನ್ನು ಒದಗಿಸಿತು. ನಂತರ ೧೯೮೦ರಲ್ಲಿ ರೋಹಿಣಿ ಉಪಗ್ರಹವನ್ನು ಭೂಮಿಯ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾದರು. ತ್ರಿಶೂಲ್, ಪಥ್ವಿ, ಅಗ್ನಿ ಕ್ಷಿಪಣಿಗಳ ಉಡಾವಣೆ ಗಳು ಕಲಾಂ ರವರಿಗೆ ಬಹಳ ಯಶಸ್ಸನ್ನು ತಂದುಕೊಟ್ಟವು.
ಅಬ್ದುಲ್ ಕಲಾಂರವರು ಭಾರತದ ೧೧ನೇ ರಾಷ್ಟ್ರಪತಿಯಾಗಿ ೨೦೦೨ರ ಜು.೨೫ ರಿಂದ ೨೦೦೭ ರ ಜು.೨೫ರವರೆಗೆ ಸೇವೆ ಸಲ್ಲಿಸಿದರು. ಸರಳತೆ, ಪ್ರಾಮಾಣಿಕತೆ ಮತ್ತು ಮೇಧಾವಿತನದ ಸಾಕಾರ ಮೂರ್ತಿ ಯಂತಿರುವ ಕಲಾಂ ಅವರು ರಾಷ್ಟ್ರಪತಿ ಹುzಯ ಘನತೆಯನ್ನು ಹೆಚ್ಚಿಸಿದರು. ಜನಸಾಮಾನ್ಯರ ರಾಷ್ಟ್ರಪತಿ ಎಂಬ ಕೀರ್ತಿಗೆ ಪಾತ್ರರಾದರು. ಸ್ವತಃ ಬ್ರಹ್ಮಚಾರಿ ಆದ ಇವರಿಗೆ ಮಕ್ಕಳೆಂದರೆ ಬಹಳ ಪ್ರೀತಿ. ಅವರ ಉಪನ್ಯಾಸ ಕಾರ್ಯಕ್ರಮಗಳಲ್ಲಿ ಮಕ್ಕಳು ಇರಲೇಬೇಕು. ಮಕ್ಕಳೊಂದಿಗೆ ಬೆರೆತು ಉಪಯುಕ್ತ ಸಲಹೆ ಸೂಚನೆ ನೀಡುವುದು ಇವರ ನೆಚ್ಚಿನ ಹವ್ಯಾಸವಾಗಿತ್ತು.
ಇವರು ಓರ್ವ ಉತ್ತಮ ಲೇಖಕರಾಗಿ ಹತ್ತಾರು ಗ್ರಂಥಗಳನ್ನು ಬರೆದಿzರೆ. ‘ ವಿಂಗ್ಸ್ ಆಫ್ ಫೈರ್ ಎಂಬುದು ಇವರ ಆತ್ಮಕಥೆ. ಇವರು ತಮ್ಮ ಇಂಡಿಯಾ ಮೈ ಡ್ರೀಮ್, ಇಂಡಿಯಾ ೨೦೨೦ ಎಂಬ ಗ್ರಂಥ ಗಳಲ್ಲಿ ಭವ್ಯ ಭಾರತ ನಿರ್ಮಾಣದ ಬಗ್ಗೆ ರೂಪುರೇಷೆಗಳನ್ನು ಹಾಕಿಕೊಟ್ಟಿzರೆ. ಮೈ ಜರ್ನಿ, ಟಾರ್ಗೆಟ್ ತ್ರಿ ಬಿಲಿಯನ್- ಮುಂತಾದ ಕೃತಿಗಳನ್ನು ಬರೆದಿ zರೆ. ಅಪ್ರತಿಮ ದೇಶಭಕ್ತರೂ ಉತ್ತಮ ವಾಗ್ಮಿಯೂ ಆಗಿರುವ ಕಲಾಂ ಅವರು ದೇಶ ವಿದೇಶಗಳಲ್ಲಿ ಸಂಚರಿಸುತ್ತ eನ-ವಿeನ ಪ್ರಸಾರದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡರು. ಒಮ್ಮೆ ಕಲಾಂ ರವರು ಆಧುನಿಕ ಭಾರತವನ್ನು ರೂಪಿಸುವಲ್ಲಿ ತಂತ್ರeನದ ಪಾತ್ರದ ಕುರಿತು ಮಾತನಾಡಿದರು. ಅವರ ಭಾಷಣದ ನಂತರ ಹತ್ತು ವರ್ಷದ ಬಾಲಕಿಯೊಬ್ಬಳು ಅವರ ಹಸ್ತಾಕ್ಷರಕ್ಕಾಗಿ ಅವರ ಬಳಿಗೆ ಬಂದಳು. ‘ ನಿಮ್ಮ ಮಹತ್ವಾಕಾಂಕ್ಷೆ ಏನು? ‘ ಎಂದು ಕಲಾಂ ಅವರನ್ನು ಕೇಳಿದರು. ನಾನು ಅಭಿವೃದ್ಧಿ ಹೊಂದಿದ ಭಾರತದಲ್ಲಿ ವಾಸಿಸಲು ಬಯಸುತ್ತೇನೆ ಎಂದು ಆ ಬಾಲಕಿ ಉತ್ತರಿಸಿದಳು.


ಎ.ಪಿ. ಜೆ. ಅಬ್ದುಲ್ ಕಲಾಂ ಅವರ ಸೇವಾ ವ್ಯಕ್ತಿತ್ವಕ್ಕೆ ಸಂದ ಪ್ರಶಸ್ತಿ ಗೌರವಾದರಗಳು ಅತ್ಯಮೂಲ್ಯ ವೆನಿಸಿವೆ. ೨೦೧೪ರಲ್ಲಿ ಡಾಕ್ಟರ್ ಆಫ್ ಸೈನ್ಸ್ ಪದವಿಯನ್ನು ಎಡಿನ್‌ಬರ್ಗ್ ವಿಶ್ವವಿದ್ಯಾಲಯ, ಯುನೈಟೆಡ್ ಕಿಂಗ್ ಡಮ್‌ನಿಂದ ನೀಡಿ ಗೌರವಿಸಲಾಯಿತು. ಸೈಮನ್ ಫೇಸರ್ ವಿಶ್ವವಿದ್ಯಾಲಯವು ೨೦೧೨ರಲ್ಲಿ ಡಾಕ್ಟರ್ ಆಫ್ ಲಾ ಪದವಿ ನೀಡಿ ಗೌರವಿಸಿತು. ವಾಟರ್ಲೂ ವಿಶ್ವವಿದ್ಯಾಲಯವು ೨೦೧೦ ರಲ್ಲಿ ಡಾಕ್ಟರ್ ಆಫ್ ಇಂಜಿನಿಯರಿಂಗ್ ಪದವಿ ನೀಡಿ ಸನ್ಮಾನಿಸಿತು. ಓಕ್ಲ್ಯಾಂಡ್ ವಿಶ್ವವಿದ್ಯಾಲಯವು ೨೦೦೯ ರಲ್ಲಿ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿತು. ಇಂಗ್ಲೆಂಡ್‌ನ ರಾಯಲ್ ಸೊಸೈಟಿಯು ೨೦೦೭ ರಲ್ಲಿ ಕಿಂಗ್ ಚಾರ್ಲ್ಸ್ ಐಐ ಪದಕ ನೀಡಿ ಗೌರವಿಸಿತು. ಅಮೇರಿಕಾದ ಕ್ಯಾಲಿ ಪೋರ್ನಿಯಾ ವಿಶ್ವವಿದ್ಯಾಲಯವು ಕಲಾಂ ರವರನ್ನು ಗೌರವಿಸಿತು. ಅಲ್ವಾರ್ ಸಂಶೋಧನಾ ಕೇಂದ್ರ, ಚೆನೈ ೨೦೦೦ನೇ ವರ್ಷದಲ್ಲಿ ರಾಮಾನುಜನ್ ಪ್ರಶಸ್ತಿ ನೀಡಿ ಗೌರವಿಸಿದೆ. ಭಾರತ ಸರ್ಕಾರವು ೧೯೯೮ರಲ್ಲಿ ವೀರ್ ಸಾವರ್ಕರ್ ಪ್ರಶಸ್ತಿ , ೧೯೯೭ರಲ್ಲಿ ಭಾರತ ರತ್ನ ಪ್ರಶಸ್ತಿ ೧೯೯೦ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ , ೧೯೮೧ರಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೯೯೭ರಲ್ಲಿ ದೇಶದ ಐಕ್ಯತೆಯ ಇಂದಿರಾಗಾಂಧಿ ಪ್ರಶಸ್ತಿ ನೀಡಿ ಸನ್ಮಾಸಿದೆ. ಹೀಗೆ ಪ್ರಶಸ್ತಿಗಳು ಇವರನ್ನೇ ಅರಸಿ ಬಂದವೇ ವಿನಃ ಪ್ರಶಸ್ತಿಗಳನ್ನು ಹುಡುಕಿಕೊಂಡು ಕಲಾಂರವರು ಎಂದೂ ಹೋದವರಲ್ಲ.
ಡಾ|| ಎ.ಪಿ.ಜೆ. ಅಬ್ದುಲ್ ಕಲಾಂರವರು ಜು.೨೭, ೨೦೧೫ ರಂದು ಮೇಘಾಲಯದ ಶಿಂಗ್ ನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದರು. ನಂತರ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆ ದರು. ೨೦೧೫ ರ ಜು.೩೦ ರಂದು ಡಾ| ಕಲಾಂ ರವರು ಹುಟ್ಟಿಬೆಳೆದ ತಮಿಳುನಾಡಿನ ರಾಮೇಶ್ವರಂ ಊರಿನಲ್ಲಿ ಅವರ ಅಂತಿಮ ಸಂಸ್ಕಾರವು ಸಕಲ ರಾಷ್ಟ್ರೀಯ ಗೌರವಗಳೊಂದಿಗೆ ನಡೆಯಿತು.


ತನ್ನ ದೇಹದಲ್ಲಿ ಕೊನೆಯ ಉಸಿರು ಇರುವವರೆಗೂ ಸೇವೆಯಲ್ಲಿ ನಿರತರಾಗಿದ್ದು, ಇಡೀ ರಾಷ್ಟ್ರದ ಜನತೆಗೆ ಮಾದರಿಯ ವ್ಯಕ್ತಿತ್ವ ಹೊಂದಿದವರಾಗಿದ್ದರು. ಅಬ್ಬುಲ್ ಕಲಾಂ ಮೇರು ಪ್ರತಿಭೆಯ ಅದ್ಭುತ ವ್ಯಕ್ತಿತ್ವದ ಮಹಾನ್ ಚೇತನವಾಗಿ ಭಾರತದ ಆಗಸದಲ್ಲಿ ಹೊಳೆವ ಚಿರಧ್ರುವತಾರೆಯಾಗಿzರೆ.
ಇಂದು ಕಲಾಂ ರವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ನಾನು ಓದಿದ ಪುಸ್ತಕಗಳಿಂದ ಸಂಗ್ರಹಿಸಿದ ಹಿತ್ತೋಕ್ತಿಗಳನ್ನು ಸ್ಮರಿಸುವ ಮೂಲಕ ನಮ್ಮ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳೋಣ.
eನವೆಂಬುದು ಎಂದಿಗೂ ನಿಂತ ನೀರಾಗಬಾರದು. ಸದಾ ಹೆಚ್ಚುತ್ತಲೇ ಇರಬೇಕು. ಇದು ನಿಮ್ಮ ವೈಯಕ್ತಿಕ ಸ್ವಾತಂತ್ರ್ಯ ಪಡೆಯಲು ಬೇಕಾದ ಪ್ರಮುಖ ಅಸ್ತ್ರ. ನೀವು ಒಂದೇ ವಸ್ತುವನ್ನು ಹಿಡಿದು ಕುಳಿತರೆ ಬುದ್ಧಿ ಜಡ್ಡುಗಟ್ಟುತ್ತದೆ. ಆದ್ದರಿಂದ ಹೊಸ ಆಯಾಮಗಳನ್ನು ಕಂಡುಕೊಳ್ಳಬೇಕು.
ನಿzಯಲ್ಲಿ ಕಾಣುವಂತದ್ದು ಕನಸಲ್ಲ, ನಿz ಗೆಡುವಂತೆ ಮಾಡುವುದಿದೆಯಲ್ಲ ಅದು ನಿಜವಾದ ಕನಸು.
ಪ್ರತಿಯೊಬ್ಬರೂ ಜೀವನದಲ್ಲಿ ದುಃಖವನ್ನು ಅನುಭವಿಸುತ್ತಾರೆ, ಈ ದುಃಖವು ಎಲ್ಲರಲ್ಲೂ ತಾಳ್ಮೆಯನ್ನು ಪರೀಕ್ಷಿಸುತ್ತದೆ.
ಪ್ರತಿದಿನ ಒಂದು ಗಂಟೆಕಾಲ ಪುಸ್ತಕಗಳನ್ನು ಓದಿರಿ, ಕೆಲವೇ ವರ್ಷಗಳಲ್ಲಿ ನೀವು eನದ ಕೇಂದ್ರವಾಗಿ ಬದಲಾಗುವಿರಿ.
ದೇಶದಲ್ಲಿನ ಅತ್ಯುತ್ತಮ ಮಿದುಳುಗಳನ್ನು ತರಗತಿ ಕೊಠಡಿಗಳ ಕೊನೆಯ ಬೆಂಚುಗಳಲ್ಲಿ ಕಾಣಬಹುದು.
ಬದಲಾವಣೆ ಧೈರ್ಯವನ್ನು ಅಪೇಕ್ಷಿಸುತ್ತದೆ. ವಿಭಿನ್ನವಾಗಿ ಚಿಂತಿಸಲು ಧೈರ್ಯಬೇಕು. ಅಸಾಧ್ಯವಾದುದನ್ನು ಅನ್ವೇಷಿಸಲು ಧೈರ್ಯಬೇಕು. ಸಮಸ್ಯೆಗಳೊಂದಿಗೆ ಹೋರಾಡಿ ಯಶಸ್ವಿಯಾಗಲು ಧೈರ್ಯಬೇಕು.
ಕಲಿಯುವಿಕೆ ಸಜನಶೀಲತೆ ನೀಡುತ್ತದೆ. ಸಜನಶೀಲತೆ ಯೋಚಿಸುವಂತೆ ಮಾಡುತ್ತದೆ. ಯೋಚಿಸುವುದು eನವನ್ನು ತುಂಬುತ್ತದೆ. eನ ನಿಮ್ಮನ್ನು ಮಹಾನ್ ವ್ಯಕ್ತಿಯನ್ನಾಗಿಸುತ್ತದೆ.
ಪ್ರಜ್ವಲಿಸುವ ಮನಸ್ಸು ಭೂಮಿಯ ಮೇಲಿರುವ ಅತ್ಯಂತ ಸಾಮರ್ಥ್ಯ ಶಾಲಿ ಸಂಪನ್ಮೂಲ.
ಶಿಕ್ಷಕರು ರಾಷ್ಟ್ರದ ಬೆನ್ನೆಲುಬು, ಕನಸುಗಳು ನನಸಾಗುವ ವೇದಿಕೆಯ ಬುನಾದಿಗಳು. ಒಬ್ಬ ಶಿಕ್ಷಕನ ಜೀವನವು ಅನೇಕ ದೀಪಗಳನ್ನು ಬೆಳಗಿಸಬಲ್ಲದು.
ಅಸಾಧ್ಯವೆಂದು ಭಾವಿಸುವುದನ್ನು ಸಾಧ್ಯ ಮಾಡುವುದರಲ್ಲಿಯೇ ಮನುಷ್ಯ ಪ್ರಯತ್ನದ ಸಾರ್ಥಕತೆ ಇದೆ.
ನಾವು ಏನನ್ನು ಕಲಿಸುತ್ತೇ ವೆಯೋ ಅದನ್ನು ಆಚರಣೆಗೆ ತರಬೇಕು. ನಾವು ಏನನ್ನು ನಂಬುತ್ತೇವೆಯೋ ಅದನ್ನೇ ಸತತವೂ ಸಾಧಿಸಬೇಕು.
ಕನಸು ಕಾಣಬೇಕು. ಏಕೆಂದರೆ ಕನಸಿನ ನಮ್ಮೆಲ್ಲರ ಆಕಾಂಕ್ಷೆಗಳು ಹುಟ್ಟುತ್ತವೆ. ಅದರ ನಮ್ಮ ಯೋಜನೆಗಳು ಪರಿಕಲ್ಪನೆಗಳು ಕಾರ್ಯರೂಪಕ್ಕಿಳಿಯುತ್ತವೆ.
ನಮ್ಮ ಪ್ರಾಮಾಣಿಕ ದುಡಿಮೆಯೇ ನಮ್ಮ ದಾರಿದೀಪ. ನಾವು ಕಷ್ಟಪಟ್ಟು ದುಡಿದರೆ ಅಭಿವದ್ಧಿ ಹೊಂದಬಹುದು. ಮಹಾನ್ ಚಿಂತನೆಗಳನ್ನು ಕಾರ್ಯರೂಪಕ್ಕೆ ತನ್ನಿ, ಪ್ರಾಮಾಣಿಕ ರೀತಿ ನೀತಿಗಳೇ ನಮ್ಮ ಮಾರ್ಗದರ್ಶಿ ಸೂತ್ರಗಳಾಗಲಿ.
ಭಾರತದ ಕ್ಷಿಪಣಿ ಮನುಷ್ಯ ಭಾರತರತ್ನ ಡಾ.ಎ.ಪಿ.ಜೆ. ಅಬ್ಬುಲ್ ಕಲಾಂ ರವರ ಮಾತುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಭಾರತದ ಆದರ್ಶ ವ್ಯಕ್ತಿಗಳಾಗಿ ಬಾಳೋಣ. ಸರಳ ಜೀವನ ಉದಾತ್ತ ಮಲ್ಯಗಳನ್ನು ಚಿಂತಿಸುವತ್ತ ಮನಸ್ಸನ್ನು ಕೇಂದ್ರೀಕರಿಸಿ ಬದುಕಿರುವವರೆಗೂ ವಿಶ್ವದೇಳ್ಗೆಗೆ ಶ್ರಮಿಸೋಣ. ವಿeನದ ದೀಪವನ್ನು ಬೆಳಗುವ ಮೂಲಕ eನವನ್ನು ನಿತ್ಯ ನಿರಂತರ ಹಂಚೋಣ.

ಕೆ.ಎನ್. ಚಿದಾನಂದ. ಸಾಹಿತಿ. ಹಾಸನ.