ಅ. ೧೩: ಮದಕರಿನಾಯಕ ಜಯಂತಿ
ಶಿವಮೊಗ್ಗ: ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕರ ಯುವಪಡೆ ಜಿಲ್ಲಾ ಘಟಕದಿಂದ ಅ.೧೩ರಂದು ಬೆಳಿಗ್ಗೆ ೧೦ ಗಂಟೆಗೆ ನಾಡದೊರೆ, ವೀರ ಮದಕರಿ ನಾಯಕರ ಜಯ ಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಆರ್. ಹರೀಶ್ ಅವರು ಸುದ್ದಿಗೋಷ್ಟಿಯಲ್ಲಿ ಹೇಳಿ ದರು.
ಅಂದು ಬೆಳಿಗ್ಗೆ ೧೦ ಗಂಟೆಗೆ ಶಿವಪ್ಪನಾಯಕ ವೃತ್ತದಿಂದ ಅಂಬೇಡ್ಕರ್ ಭವನದವರೆಗೆ ನಾಡ ದೊರೆ ಮದಕರಿ ನಾಯಕರ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ನಂತರ ಮಧ್ಯಾಹ್ನ ೧೨.೩೦ಕ್ಕೆ ಅಂಬೇಡ್ಕರ್ ಭವನದಲ್ಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮವನ್ನು ತುಮ ಕೂರು ಶಿಡ್ಲೆಕೋಣದ ಸಂಜಯ ಕುಮಾರಾನಂದಸ್ವಾಮೀಜಿ ನೆರ ವೇರಿಸುವರು. ನಟ, ಸಾಹಿತಿ, ನಿರ್ಮಾಪಕ ಡಾ.ರಾಧಾಕೃಷ್ಣ ಪಲ್ಲಕ್ಕಿ ಅತಿಥಿಯಾಗಿ ಭಾಗವಹಿ ಸುವರು. ಜಿಲ್ಲಾಧ್ಯಕ್ಷ ಆರ್. ಹರೀಶ್ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಉಪಮಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕರಾದ ಎಸ್.ಎನ್. ಚನ್ನಬಸಪ್ಪ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ರುತ್ತಾರೆ ಎಂದರು.
ಗೌರವಾಧ್ಯಕ್ಷ ಭದ್ರಾಪುರ ಗಿರೀಶ್, ಪ್ರಮುಖರಾದ ಪ್ರಸನ್ನ, ಗುಡ್ಡಪ್ಪ, ಕೆ. ಮಂಜುನಾಥ್, ಮಂಜುನಾಥ್, ರಘುಪತಿ ಸೇರಿದಂತೆ ಹಲವರಿದ್ದರು.