ಕಮಲ ಕೆಳಗಿಟ್ಟು ತೆನೆಹೊತ್ತ ಆಯ್ನೂರ್ ಮಂಜುನಾಥ್…
ಚಿತ್ರದುರ್ಗ: ರಾಜ್ಯ ವಿಧಾ ನಸಭೆ ಚುನಾವಣೆ ಟಿಕೆಟ್ ಹಂಚಿಕೆ ಸಂಬಂಧ ಬಿಜೆಪಿಯಲ್ಲಿ ಬಂಡಾಯ ಜೋರಾಗಿದೆ. ಟಿಕೆಟ್ ಸಿಗದೆ ಇದ್ದವರು ಒಬ್ಬೊಬ್ಬರಾಗಿ ಪಕ್ಷ ತೊರೆಯುತ್ತಿದ್ದಾರೆ. ಅದರಂತೆ ಇದೀಗ ವಿಧಾನ ಪರಿಷತ್ ಬಿಜೆಪಿ ಸದಸ್ಯ ಆಯನೂರು ಮಂಜು ನಾಥ್ ಜೆಡಿಎಸ್‌ಗೆ ಸೇರ್ಪಡೆ ಯಾಗಿದ್ದಾರೆ.
ಇಂದು ಚಿತ್ರದುರ್ಗ ಜೆಡಿಎಸ್ ಕಚೇರಿಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಜೆಡಿಎಸ್ ಬಾವುಟ ಕೊಡುವ ಮೂಲಕ ಆಯನೂರು ಮಂಜು ನಾಥ್‌ರನ್ನು ಪಕ್ಷಕ್ಕೆ ಬರಮಾಡಿ ಕೊಂಡಿದ್ದಾರೆ. ಇದೇ ವೇಳೆ ಅವರಿಗೆ ಶಿವಮೊಗ್ಗ ಕ್ಷೇತ್ರದಿಂದಲೇ ಕಣಕ್ಕಿಯಲು ಬಿ ಫಾರಂ ನೀಡಲಾ ಯಿತು.
ಇಂದು ಸಂಜೆ ೪ಗಂಟೆಗೆ ಆಯನೂರು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಜೊತೆಗೆ ನಾಳೆ(ಏ.೨೦) ಜೆಡಿಎಸ್ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ಶಿವಮೊಗ್ಗದಲ್ಲಿಂದು ಬೆಳ್ಳಂ ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಆಯನೂರು ಮಂಜುನಾಥ್, ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದೇನೆ. ಇಂದು ಮಧ್ಯಾಹ್ನ ಹುಬ್ಬಳ್ಳಿಗೆ ತೆರಳಿ ಸಭಾಪತಿಗಳನ್ನು ಭೇಟಿಯಾಗಿ ರಾಜೀನಾಮೆ ನೀಡು ವೆ. ಅಲ್ಲದೇ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ನಾಳೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸುತ್ತೇನೆ. ಯಾವ ಪಕ್ಷದಿಂದ ಸ್ಪರ್ಧೆ ಎಂಬುದನ್ನು ಮಧ್ಯಾಹ್ನದ ಬಳಿಕ ತಿಳಿಸುವೆ ಎಂದು ಹೇಳಿದ್ದರು.
ಇನ್ನು ಬಿಜೆಪಿ ಪಕ್ಷಕ್ಕೆ ರಾಜೀ ನಾಮೆ ನೀಡುತ್ತಿರುವೆ. ಟಿಕೆಟ್ ಗೋಸ್ಕರ ನಾನು ಪಕ್ಷ ಬಿಡುತ್ತಿಲ್ಲ. ನಗರದ ಋಣ ತೀರಿಸಲು ಈ ನಿರ್ಧಾರ ಮಾಡಿರುವೆ. ಈಶ್ವರಪ್ಪ ಕಣದಲ್ಲಿ ಇದ್ದರೆ. ನಾನು ಕೊಡುವ ಲೆಕ್ಕ ತುಂಬಾ ಇದೆ. ಆ ಲೆಕ್ಕ ಈ ಚುನಾವಣೆಯಲ್ಲಿ ಕೊಡುತ್ತೇನೆ. ಯಡಿಯೂರಪ್ಪ ಪರ ಹೇಳಿಕೆ ನೀಡಿದ ಏಕೈಕ ವ್ಯಕ್ತಿ ನಾನು. ಅವರ ಮೇಲೆ ಆರೋಪ ಸಮಸ್ಯೆಗಳು ಬಂದಾಗ ನಾನೇ ಒಬ್ಬನೇ ಅವರ ಪರ ಉತ್ತರ ಕೊಟ್ಟಿದ್ದೆ. ಮಹಾನಗರ ಪಾಲಿಕೆ ಕಮೀಷನ್ ದಂಧೆ ಬಗ್ಗೆ ಯಾರು ಧ್ವನಿ ಎತ್ತಲಿಲ್ಲ ಎಂದು ಪರೋಕ್ಷವಾಗಿ ಕೆಎಸ್ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದರು.