ಲೇಖನ: ಅಶ್ವಿನಿ ಅಂಗಡಿ, ಶಿಕ್ಷಕಿ ಹಾಗೂ ಸಾಹಿತಿ, ಬದಾಮಿ.
ಶಾಲಾ ದಿನಗಳು ಮುಗಿದು ಬೇಸಿಗೆ ರಜೆಯು ಪ್ರಾರಂಭವಾದರೆ ಮಕ್ಕಳಿಗೆ ಎಲಿಲ್ಲದ ಖುಷಿ, ಸಂತೋಷ. ಪಾಲಕರೊಂದಿಗೆ ಮಕ್ಕಳು ಆಗಲೇ ಕೆಲವು ಕರಾರುಗಳನ್ನು ಹಾಕಿಕೊಂಡಿರುತ್ತಾರೆ. ಕೆಲ ಸಂಚಾರಗಳು, ಬಾಂಧವರ ಊರುಗಳನ್ನು ಆಯ್ಕೆ ಪಟ್ಟಿಯಲ್ಲಿ ತಯಾರಿಸಿಕೊಂಡಿರುತ್ತಾರೆ. ಅಲ್ಲದೆ ಮಕ್ಕಳ ಸ್ಥಳ ವೀಕ್ಷಣಾ ಬೇಡಿಕೆಗಳು ಕೂಡ ಪೂರ್ವ ತಯಾರಿಯಲ್ಲಿರುತ್ತವೆ.
ಇಂತಹ ಒಂದು ಸಂಕೀರ್ಣ ಸಂದರ್ಭವನ್ನು ಜಾಣ ಪಾಲಕರಾದ ನಾವು ಮಕ್ಕಳ ಆಸೆ ಆಕಾಂಕ್ಷೆಗಳಿಗೆ ಘಾಸಿಯನ್ನು ಮಾಡದೆ ಜೊತೆಗೆ ಅವರ ದೈಹಿಕ ಮಾನಸಿಕ ಸ್ವಾಸ್ಥ್ಯದ ಕಡೆಗೂ ಗಮನ ಹರಿಸಿ ಮಕ್ಕಳ ರಜ ಮಜವನ್ನು ಒದಗಿಸಬೇಕಾಗಿದೆ. ಆದ್ದರಿಂದ ಕೆಲ ದೈನಿಕ ಬದಲಾವಣೆಗಳನ್ನು ಮಾಡಿಕೊಳ್ಳುವುದರ ಮೂಲಕ ಮಕ್ಕಳ ಬೇಸಿಗೆಯ ರಜೆಯ ಮಜವನ್ನು ಸಂಪನ್ನಗೊಳಿಸುವುದು ಪಾಲಕರ ಆದ್ಯವಾಗಿದೆ.
ಪ್ರವಾಸಿ ತಾಣಗಳ ಆಯ್ಕೆ:
ರಜೆ ಬಂತಂದರೆ ಸಾಕು ಮಕ್ಕಳು ಹಾಗೂ ಹಿರಿಯರ ಮನದಲ್ಲಿ ತುಡಿತವಾಗುವ ಮೊದಲ ಪ್ರಶ್ನೆ ಪ್ರವಾಸ ಅಥವಾ ಕಿರು ಸಂಚಾರ. ಇಂತಹ ಬೇಸಿಗೆ ಅವಧಿಯಲ್ಲಿ ಆರೋಗ್ಯದ ಉತ್ತಮ ಸ್ಥಳ ಆಯ್ಕೆಯ ಉಚಿತವಾಗಿದೆ. ಆದಷ್ಟು ಪ್ರಕೃತಿಯ ಮಧ್ಯದಲ್ಲಿ ಮಕ್ಕಳಿಗೆ ಪ್ರವಾಸವನ್ನು ಒದಗಿಸುವುದು ಉತ್ತಮ. ಹಸುರಿನ ಮಧ್ಯದಲ್ಲಿ ಇರುವಂತಹ ರೆಸಾರ್ಟ್ (ಆಟೋದ್ಯಾನ)ಗಳ ಆಯ್ಕೆ ಮಾಡಬೇಕು. ಸಾಕಷ್ಟು ನೆರಳು ಹಾಗೂ ಆಹ್ಲಾದಕರ ವಾತಾವರಣ ಜೊತೆಗೆ ಸರಳ ಆಟೋಟಗಳ ಒಳಗೊಂಡಿರುವ ಪ್ರದೇಶವದಾಗಿರಬೇಕು. ಇನ್ನು ಹಳ್ಳಿಯಲ್ಲಿರುವ ಸಂಬಂಧಿಕರ ಮನೆಗೆ ಹೋಗುವುದಂತೂ ಅತಿ ಅವಶ್ಯಕ! ಇದರಿಂದ ನಮ್ಮ ಸಂಬಂಧಿಕರ ಪರಿಚಯ ಹಾಗೂ ಬಾಂಧವ್ಯದ ಜೊತೆಗೆ ಹಳ್ಳಿಯ ಸೊಗಡನ್ನು ಸವಿಯಲು ಮಕ್ಕಳಿಗೆ ಇದೊಂದು ಉತ್ತಮ ಮಾರ್ಗವಾಗಿದೆ. ಗ್ರಾಮೀಣ ಪ್ರದೇಶದ ಆಚಾರ- ವಿಚಾರ ಹಬ್ಬ-ಹರಿದಿನಗಳ ಆಚರಣೆಯ ಕುರಿತು ಜೊತೆಗೆ ಕೃಷಿ ಕಾರ್ಯಗಳ ವೈಖರಿಗಳನ್ನು ಕೂಡ ನಾವು ಮಕ್ಕಳಿಗೆ ಈ ಮೂಲಕ ತಿಳಿಸಬಹುದಾಗಿದೆ
ಆಹಾರ ಪದ್ಧತಿಗಳು:
ಈ ಬೇಸಿಗೆಯ ತಾಪಕ್ಕೆ ನಾವು ಮಕ್ಕಳ ದೇಹದಲ್ಲಿ ಕೆಲ ಆಂತರಿಕ ಸಮಸ್ಯೆಗಳು ಉಂಟಾಗುವುದನ್ನು ತಿಳಿದಿದ್ದೇವೆ. ಉದಾಹರಣೆಗೆ ಕರುಳಿನ ಉರಿಯೂತ, ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡ, ನಿರ್ಜಲೀಕರಣ, ಚಯಾಪಚಯ ಕ್ರಿಯೆಯ ಅಸಮತೋಲನ ಇನ್ನು ಮುಂತಾದವು ಅದಕ್ಕಾಗಿ ನಾವು ಮಕ್ಕಳ ಆಹಾರ ಪದ್ಧತಿಯಲ್ಲಿಯೂ ಕೆಲ ಬದಲಾವಣೆಯನ್ನು ಮಾಡಬೇಕಾಗಿದೆ. ಬರೀ ನಾಲಿಗೆ ಹಿತವನ್ನು ಬಯಸದೆ ದೈಹಿಕ ಆರೋಗ್ಯದ ಅವಶ್ಯಕತೆಯನ್ನು ನಾವು ಮಕ್ಕಳಿಗೆ ತಿಳಿಸಬೇಕಾಗಿದೆ.

  • ದೇಹಕ್ಕೆ ಅನವಶ್ಯಕವಾದ ಸಕ್ಕರೆಯುಕ್ತ ಹಾಗೂ ಅಧಿಕ ಎಣ್ಣೆಯುಕ್ತ ಹಾಗೂ ಜಂಕ್ ಫುಡ್‌ಗಳ ವರ್ಜ್ಯ ಮಾಡಬೇಕು.
  • ಡೈರಿ ಉತ್ಪನ್ನಗಳ ಸೇವನೆಯಿಂದ ದೇಹದಲ್ಲಿಯ ತಾಪವನ್ನು ಕಡಿಮೆ ಮಾಡಿ ಜೀರ್ಣಾಂಗ ಕ್ರಿಯೆಯು ಉತ್ತಮವಾಗಿ ಸಾಗಲು ಅನುವು ಮಾಡಬೇಕಾಗಿದೆ
  • ಪ್ರೊ ಬಯೋಟೆಕ್ (ಆರೋಗ್ಯದ ಅವಶ್ಯಕ ಸೂಕ್ಷ್ಮಾಣು ಜೀವಿ) ಸಮದ್ಧ ಪದಾರ್ಥಗಳು, ಮೊಸರು, ಸಾರಕ್ರಾಟ್(ಕೋಸು ಗಡ್ಡೆಯ ತಿನಿಸು) , ಕೊಂಬುಚಾದಂತಹ (ಸಣ್ಣ ಬೀಜಗಳ ಟೀ), ಪದಾರ್ಥಗಳ ರೂಢಿ ಮಾತ್ರವಲ್ಲದೆ ಇವುಗಳಲ್ಲಿ ಪ್ರೊ ಬಯೋಟಿಕ್ ಅಂಶ ಸಮೃದ್ಧವಾಗಿದೆ. ಅಲ್ಲದೆ ಕರುಳಿನ ಆರೋಗ್ಯಕ್ಕೆ ಉತ್ತಮ ಎನಿಸುವ ಬ್ಯಾಕ್ಟೀರಿಯಾಗಳಿವೆ. ಈ ಆಹಾರಗಳು ನಿಮ್ಮ ಕರುಳಿನ ಬ್ಯಾಕ್ಟೀರಿಯಾದ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.
  • ದೇಹ ತಣಿಸುವ ತರಕಾರಿಗಳ ಬಳಕೆ: ತಂಪು ಪಾನೀಯಗಳು ಹಾಗೂ ಪ್ರೊಜೆನ್ ಡೆಸರ್ಟ್‌ಗಳು (ಹಗುರ ಸಿಹಿ ಖಾದ್ಯ) ನಾಲಿಗೆಯ ರುಚಿ ಮೊಗ್ಗುಗಳನ್ನು ಅರಳಿಸಿ ಆ ಕ್ಷಣಕ್ಕೆ ದೇಹ ತಾಪವನ್ನು ನೀಗಿಸಬಹುದು, ಆದರೆ ಇದರಿಂದ ಯಾವುದೇ ಆರೋಗ್ಯ ಪ್ರಯೋಜನಗಳಿಲ್ಲ ಆದ್ದರಿಂದ ನಾವು ದಿನನಿತ್ಯದಲ್ಲಿ ಹಸಿ ತರಕಾರಿಗಳಾದಂತಹ ಸೌತೆಕಾಯಿ, ಗಜ್ಜರಿ, ಮೂಲಂಗಿ, ಸೆಲರಿ, ಲೆಟಿಸ್ ನಂತಹ ಸೊಪ್ಪುಗಳನ್ನು ತರಕಾರಿಗಳನ್ನು ಬಳಸುವುದರಿಂದ ದೇಹದಲ್ಲಿ ನೀರಿನ ಅಂಶವನ್ನು ಹೆಚ್ಚಿಸಿ ದೇಹದ ತಾಪಮಾನವನ್ನು ತಣಿಸಬಹುದಾಗಿದೆ.
  • ಲೀನ್ ಪ್ರೋಟೀನ್ ಗ್ರಿಲ್ ಚಿಕನ್ ಫಿಶ್ ಹಾಗೂ ಮೊಟ್ಟೆಯಂತಹ ಪೋಷಕಾಂಶ ಸಮೃದ್ಧ ಆಹಾರ ಪದಾರ್ಥಗಳು ಮಕ್ಕಳ ಅತೀ ಹಸಿವನ್ನು ವಿರೋಧಿಸುವಲ್ಲಿ ಪಾತ್ರವಹಿಸುತ್ತವೆ. ಅಲ್ಲದೆ ಇವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ತೂಕ ಹೆಚ್ಚಾಗುವುದನ್ನು ಕೂಡ ನಿಯಂತ್ರಿಸುತ್ತದೆ. ಆದ್ದರಿಂದ ಇಂತಹ ಆಹಾರವು ಅವಶ್ಯಕತೆವಾಗಿದೆ
  • ನೈಸರ್ಗಿಕ ಟೀ ಗಳು ಹಾಗೂ ಶರಭತ್ತುಗಳು, ಪೆಪ್ಪರ್ ಮೆಂಟ್ ಟೀ, ಶುಂಠಿ ಟೀ ಹಾಗೂ ತಾಜ ಹಣ್ಣು ಗಳಿಂದ ಮನೆಯಲ್ಲಿಯೇ ತಯಾರಿಸಿದ ಜ್ಯೂಸ್‌ಗಳ ಸೇವನೆ ಜೊತೆಗೆ ಲಿಂಬು ಹಣ್ಣಿನ ಪಾನಕ ಇವು ದೇಹದ ನಿರ್ಜಲೀಕರಣವನ್ನು ಹೋಗಲಾಡಿಸಿ ನರಗಳ ರಕ್ತ ಸಂಚಲನಕ್ಕೆ ಸಹಕಾರಿ ಯಾಗಿದೆ. ಹಣ್ಣುಗಳು ಉತ್ತಮ ಪದಾರ್ಥಗಳಾಗಿವೆ ಮಕ್ಕಳಿಗೆ ರುಚಿಸುದರೊಂದಿಗೆ ದೇಹದ ಆರೋಗ್ಯವನ್ನು ಸಮತೋಲನದಲ್ಲಿಡಲು ಸಹಕಾರಿಯಾಗಿದೆ
  • ಬೇಸಿಗೆಯ ಬಟ್ಟೆಗಳು ಹಾಗೂ ಧಿರಿಸುಗಳು: ಬೇಸಿಗೆಯ ಅವಧಿಯಲ್ಲಿ ಸೂರ್ಯನ ಶಾಖದಿಂದ ಮಕ್ಕಳ ಮೃದು ಚರ್ಮದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುವುದಾಗಿದೆ ಅಲ್ಲದೆ ಮಕ್ಕಳ ಚರ್ಮದ ಮೇಲೆ ರ್‍ಯಾಷಸ್‌ಗಳು, ನೀರಿನ ಗುಳ್ಳೆಗಳು, ಚರ್ಮ ಕೆಂಪಾಗುವಿಕೆ, ತುರಿಕೆ ಹಾಗೂ ಉರಿಯೂತಗಳು ಸಂಭವಿಸುವುದು ಸಾಮಾನ್ಯವಾಗಿದೆ.
    ಆದ್ದರಿಂದ ಮಕ್ಕಳಿಗೆ ಆದಷ್ಟು ಸಡಿಲವಾದ ಹತ್ತಿಯ ಹಾಗೂ ನಾರಿನಿಂದ ತಯಾರಿಸಿದ ಬಟ್ಟೆಗಳನ್ನು ಹಾಕಿಕೊಳ್ಳಲು ಸೂಚಿಸುವುದು ಯೋಗ್ಯ ಅಲ್ಲದೆ ಘಾಡ ಬಣ್ಣದ ಬಟ್ಟೆಗಳ ಬಳಕೆಯು ಕಡಿಮೆ ಮಾಡಿ ಆದಷ್ಟು ತಿಳಿ ಬಣ್ಣಗಳ ಬಟ್ಟೆಗಳನ್ನು ಧರಿಸುವುದು ಉಚಿತವಾಗಿದೆ. ಜೊತೆಗೆ ಹೊರ ಸಂಚಾರಕ್ಕೆ ಹೋದಾಗ ತಲೆಯ ಮೇಲೆ ಟೊಪ್ಪಿಗೆ ಧರಿಸುವುದು ಉತ್ತಮ ಜೊತೆಗೆ ಕಣ್ಣಿನ ಸಂರಕ್ಷಣೆ ಕಾಪಾಡಲು ಸನ್ ಗಾಗ್ಗಲ್ಸ್ ಹಾಕುವುದು ಒಳ್ಳೆಯದು. ಇದರಿಂದ ನಾವು ಬಿಸಿಲಿನ ತಾಪವನ್ನು ಕಡಿಮೆ ಮಾಡಬಹುದಾಗಿದೆ. ಜೊತೆಗೆ ಮಕ್ಕಳು ಬಯಲಿನಲ್ಲಿ ಧೂಳಿನಲ್ಲಿ ಹಾಗೂ ಮಣ್ಣು, ಕಲುಷಿತ ನೀರಿನಲ್ಲಿ ಆಟವಾಡಿ ಮನೆಗೆ ಹಿಂತಿರುಗಿದಾಗ ಕಡ್ಡಾಯವಾಗಿ ಮೃದು ಸೋಪಿನಿಂದ ಮತ್ತೊಮ್ಮೆ ಅವರಿಗೆ ಸ್ನಾನ ಮಾಡಿಸುವುದು ಉತ್ತಮ. ಇದರಿಂದ ಮಕ್ಕಳ ಎ ದೈಹಿಕ ಆಯಾಸವನ್ನು ದೂರ ಮಾಡಿ ಅವರ ದೇಹವನ್ನು ಪುನರ್ ಚೈತನ್ಯಗೊಳಿಸುವುದಕ್ಕೆ ಸಹಕಾರಿಯಾಗಿದೆ.
  • ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು: ಮಕ್ಕಳಿಗೆ ಮುಂದಿನ ತರಗತಿಯ ಪಠ್ಯದ ಲಘು ಅಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಸದಭಿರುಚಿಯ ಹಾಡು ನೃತ್ಯ, ಕಲೆ, ಉಚಿತ ಸಾಮಗ್ರಿಗಳ ತಯಾರಿಕೆ ಇವುಗಳನ್ನು ಅವರ ಆಸಕ್ತಿ ಅಪೇಕ್ಷೆಗಳಿಗನುಗುಣವಾಗಿ ಕಾರ್ಯ ಚಟುವಟಿಕೆಗಳನ್ನು ಒದಗಿಸುವುದು ಹಾಗೂ ಪಠ್ಯ ವಿಷಯಗಳಲ್ಲಿ ಕಠಿಣವಾದ ವಿಷಯಗಳಿಗೆ ಪುನಶ್ಚೇತನ ತರಬೇತಿಗಳನ್ನು ಕೊಡುವುದು ಅನಿವಾರ್ಯ.
  • ಟಿವಿ ಮೊಬೈಲ್‌ಗಳ ಬಳಕೆ ಕಡಿಮೆಯಾಗಿರಲಿ: ಇತ್ತೀಚಿಗಂತೂ ಮಕ್ಕಳು ಮೆಬೈಲ್ ಹಾಗೂ ಟಿವಿಗಳ ಬಳಕೆಯ ವ್ಯಸನಿಗಳಾಗಿzರೆ. ಇದರಿಂದ ಅವರ ನರಮಂಡಲದ ಮೇಲೆ ದುಷ್ಪರಿಣಾಮ ಆಗುವುದಲ್ಲದೇ ಕಣ್ಣಿನ ದೃಷ್ಟಿ ದೋಷಗಳು ಹಾಗೂ ತಲೆನೋವು ಮಾನಸಿಕ ಕಿರಿಕಿರಿ ಜೊತೆಗೆ ಖಿನ್ನತೆ ಇಂತಹ ಸಮಸ್ಯೆಗಳನ್ನು ನಾವು ಕಾಣಬಹುದಾಗಿದೆ. ಆದ್ದರಿಂದ ಇವುಗಳ ಬಳಕೆಯನ್ನು ಕಡಿಮೆ ಮಾಡಿ ಆರೋಗ್ಯಕರ ಹವ್ಯಾಸಗಳನ್ನು ಮಕ್ಕಳಲ್ಲಿ ಮೂಡಿಸುವುದು ಅವಶ್ಯಕ.
    ಈ ಮೇಲೆ ಹೇಳಿರುವ ಎ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವು ಮಕ್ಕಳ ಬೇಸಿಗೆಯ ರಜೆಯ ಮಜವನ್ನು ಅರ್ಥಪೂರ್ಣ ಗೊಳಿಸಬೇಕಾಗಿದೆ. ಆದ್ದರಿಂದ ಮಗುವಿನ ದೈಹಿಕ ಮಾನಸಿಕ ಸ್ವಾಸ್ಥ್ಯದೊಂದಿಗೆ ನಮ್ಮ ಬೇಸಿಗೆಯ ಅವಧಿಯು ಪೂರ್ಣವಾಗಬೇಕಿದೆ.
ಅಶ್ವಿನಿ ಅಂಗಡಿ, ಶಿಕ್ಷಕಿ ಹಾಗೂ ಸಾಹಿತಿ, ಬದಾಮಿ.