ಆಮ್ ಆದ್ಮಿ ಪಕ್ಷದಿಂದ ನೇತ್ರಾವತಿ ಗೌಡ ನಾಮಪತ್ರ ಸಲ್ಲಿಕೆ…

ಶಿವಮೊಗ್ಗ: ಆಮ್ ಆದ್ಮಿ ಪಕ್ಷದಿಂದ ನೇತ್ರಾವತಿ ಗೌಡ ಅವರು ಇಂದು ತಮ್ಮ ಅಪಾರ ಅಭಿಮಾನಿಗಳೊಂದಿಗೆ ನಾಮಪತ್ರ ಸಲ್ಲಿಸಿದರು.
ಅವರು ಶಿವಪ್ಪನಾಯಕ, ಬಸವಣ್ಣ, ಹಾಗೂ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷವಾಗಿದೆ. ದೆಹಲಿ ಹಾಗೂ ಪಂಜಬ್‌ನಲ್ಲಿ ಉತ್ತಮ ಆಡಳಿತ ನೀಡಿದೆ. ಪಕ್ಷದ ಕಾರ್ಯಕ್ರಮವನ್ನು ಸಾರ್ವಜನಿ ಕರು ಗಮನಿಸಿದ್ದು, ನಿರಂತರ ಬೆಂಬಲ ವ್ಯಕ್ತಪಡಿಸುತ್ತಿzರೆ. ಪಕ್ಷಕ್ಕೆ ನಗರದ ಎಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು ಸಾರ್ವ ಜನಿಕರು ಸ್ವಯಂಪ್ರೇರಿತರಾಗಿ ಮೆರವಣಿಗೆಯಲ್ಲಿ ಭಾಗವಹಿಸಿ zರೆ. ನನಗೆ ಗೆಲ್ಲುವ ಪೂರ್ಣ ವಿಶ್ವಾಸವಿದೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಸುರೇಶ್ ಕೋಟೇ ಕಾರ, ನಜೀರ್ ಅಹ್ಮದ್, ಮುಕ್ಬುಲ್ ಅಹ್ಮದ್ ಹಾಗೂ ಪ್ರಮುಖರು ಹಾಜರಿದ್ದರು.