ಶ್ರೀಕ್ಷೇತ್ರ ಹೊರನಾಡಿನ ಅನ್ನಪೂರ್ಣೇಶ್ವರೀ ದೇವಸ್ಥಾನದ ಶ್ರೀ ಜಗನ್ಮಾತೆಯ ಪುನಃ ಪ್ರತಿಷ್ಠಾ ಸ್ವರ್ಣ ಮಹೋತ್ಸವ…

ಶಿವಮೊಗ್ಗ: ಶ್ರೀ ಕ್ಷೇತ್ರ ಹೊರನಾಡಿನ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಶ್ರೀ ಜಗನ್ಮಾತೆಯ ಪುನಃ ಪ್ರತಿಷ್ಠಾ ಸ್ವರ್ಣ ಮಹೋತ್ಸವ, ಬ್ರಹ್ಮ ಕುಂಭಾಭಿಷೇಕ ಮತ್ತು ರಥೋತ್ಸವ ಕಾರ್ಯಕ್ರಮ ಏ. ೨೨ ರಿಂದ ೨೯ ರವರೆಗೆ ಜರುಗಲಿದೆ.
ಏ. ೨೨ ರಂದು ಮುಂಜನೆ ೫.೩೦ ಕ್ಕೆ ಶ್ರೀ ಉದ್ಭವ ಗಣಪತಿ ಸ್ವಾಮಿ, ಶ್ರೀ ಜಗನ್ಮಾತೆ, ಶ್ರೀ ನವಗ್ರಹ ದಏವರು ಮತ್ತು ಶ್ರೀ ಆಂಜನೇಯ ಸ್ವಾಮಿಗೆ ಮಹಾಭಿ ಷೇಕ ಆರಂಭವಾಗಲಿದ್ದು, ೭.೩೦ ರಿಂದ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು ನಡೆಯಲಿವೆ ಎಂದು ದೇವಸ್ಥಾನದ ಶಿವಮೊಗ್ಗದ ಭಕ್ತ ವೃಂದದ ಪರವಾಗಿ ಕೆ.ವಿ. ವಸಂv ಕುಮಾರ್ ನಡೆದ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.
ಏ. ೨೩ ರಂದು ವಾರ್ಷಿಕ ವರ್ಧಂತ್ಯುತ್ಸವ, ೨೪ ರಂದು ಉದ್ಭವ ಗಣಪತಿ ಸ್ವಾಮಿ ಸನ್ನಿಧಿಯಲ್ಲಿ ಕುಂಭಾಭಿಷೇಕ, ೨೫ ರಂದು ಆದಿತ್ಯಾದಿ ನವಗ್ರಹ ದೇವರುಗಳ ಸನ್ನಿಧಿಯಲ್ಲಿ, ೨೬ ರಂದು ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಕುಂಭಾಭಿಷೇಕ ನಡೆಯಲಿದೆ. ೨೭ ರಂದು ಶ್ರೀ ಧರಣಿ ಹೋಮ ಮತ್ತು ಬ್ರಹ್ಮ ಕುಂಭಾಭಿಷೇಕದ ಕಲಶ ಸ್ಥಾಪನೆ, ೨೮ ರಂದು ಶ್ರೀ ಜಗನ್ಮಾತೆಗೆ ಬ್ರಹ್ಮ ಕುಂಭಾಭಿಷೇಕ ಮತ್ತು ರಥೋತ್ಸವ ನಡೆಯಲಿದೆ. ಏ. ೨೯ ರಂದು ಸಂಪ್ರೋಕ್ಷಣೆ ನಡೆಯಲಿದೆ ಎಂದರು.
ಪ್ರತಿದಿನ ಮಧ್ಯಾಹ್ನ ೧೧.೩೦ ರಿಂದ ಧಾರ್ಮಿಕ ಸಭೆಗಳು ಜರು ಗಲಿದ್ದು, ವಿವಿಧ ಮಠಗಳ ಮಠಾ ಧೀಶರು ಸಾನಿಧ್ಯ ವಹಿಸಲಿದ್ದು, ಧಾರ್ಮಿಕ ಉಪನ್ಯಾಸ ನಡೆದು ವಿವಿಧ ಕ್ಷೇತ್ರಗಳ ಸೇವಾ ಸಾಧಕರಿಗೆ ಸನ್ಮಾನಿಸಲಾಗುವುದು. ಮುಖ್ಯ ಅತಿಥಿಗಳಾಗಿ ಚಲನಟಚಿತ್ರ ನಟರು ಹಾಗೂ ಹಿರಿಯ ಪತ್ರಕರ್ತರು ಭಾಗವಹಿಸಲಿzರೆ. ಪ್ರತಿದಿನ ಸಂಜೆ ೭ ಗಂಟೆಗೆ ಸಾಂಸ್ಕೃ ತಿಕ ಕಾರ್ಯಕ್ರಮಗಳು ನಡೆಯ ಲಿವೆ ಎಂದರು.
ಜಿ ಬ್ರಾಹ್ಮಣ ಸಭಾದ ಅಧ್ಯಕ್ಷ ನಟರಾಜ್ ಭಾಗವತ್ ಮಾತನಾಡಿ, ಏ. ೨೨ ರಿಂದ ೨೮ ರವರೆಗೆ ಪ್ರತಿದಿನ ಬೆಳಗ್ಗೆ ೯ ರಿಂದ ಮಧ್ಯಾಹ್ನ ೧ ಗಂಟೆವರೆಗೆ ಕೋಟಿ ಕುಂಕುಮಾರ್ಚನೆ ನಡೆಯಲಿದ್ದು, ಏ. ೨೬ ರಂದು ಶಿವಮೊಗ್ಗ ಜಿ ಯಿಂದ ಭಕ್ತರು ಈ ಕುಂಕು ಮಾರ್ಚನೆಯಲ್ಲಿ ಭಾಗವಹಿಸಬ ಹುದು. ಇವರಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಈ ಧಾರ್ಮಿಕ ಕಾರ್ಯ ಕ್ರಮಕ್ಕೆ ಹೊರೆ ಕಾಣಿಕೆ ಸಲ್ಲಿಸು ವವರು ತರಕಾರಿ ಹೊರತುಪಡಿಸಿ ಧವಸ ಧಾನ್ಯ, ಧನ ಸಲ್ಲಿಸಬ ಹುದಾಗಿದೆ. ಹೊರೆ ಕಾಣಿಕೆ ಸಲ್ಲಿಸುವವರು ವಿನೋಬನಗರ ದಲ್ಲಿರುವ ವಿಪ್ರ ಟ್ರಸ್ಟ್, ಬ್ರಾಹ್ಮಣ ವಿದ್ಯಾರ್ಥಿ ನಿಲಯ, ರವೀಂದ್ರ ನಗರದ ಶ್ರೀ ಪ್ರಸನ್ನಗಣಪತಿ ದೇವಾಲಯ, ಗೋಪಾಳದ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನಕ್ಕೆ ಏ. ೨೦ ರೊಳಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ೮೨೧೭೫ ೪೦೦೯೦, ೯೪೮೧೬ ೨೯೬೬೫ ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸೂರ್ಯನಾರಾಯಣ, ಕೆ.ಜೆ. ಕುಮಾರಶಾಸ್ತ್ರಿ, ನಾಗೇಶ್, ವೆಂಕಟೇಶ್ ಮೂರ್ತಿ, ಕೇಶವಮೂರ್ತಿ ಉಪಸ್ಥಿತರಿದ್ದರು.