ಅರ್ಹರಿಗೆ ಸರ್ಕಾರದ ಸೌಲಭ್ಯಗಳು ದೊರೆಯುವಂತಾಗಲಿ: ನ್ಯಾ.ಬಿ.ವೀರಪ್ಪ
ಶಿವಮೊಗ್ಗ :ಅರ್ಹರಿಗೆ ಉಚಿತ ಕಾನೂನು ಸೇವೆ, ಸಲಹೆ ನೀಡುವುದಲ್ಲದೆ ಈಗಾಗಲೇ ನ್ಯಾಯಾಲಯದಲ್ಲಿ ದಾಖಲಾಗಿ ರುವ ಮೊಕದ್ದಮೆಗಳನ್ನು ತ್ವರಿತಗ ತಿಯಲ್ಲಿ ವಿಲೇವಾರಿ ಮಾಡು ವುದು, ಲೋಕ ಅದಾಲತ್‌ನಲ್ಲಿ ಪ್ರಕರಣಗಳು ವಿಚಾರಣೆಗೆ ಬರುವ ಮುನ್ನವೇ ರಾಜೀಸಂದಾನದ ಮೂಲಕ ಇತ್ಯರ್ಥಗೊಳಿಸಿ, ಜನ ಸಾಮಾನ್ಯರ ನೆಮ್ಮದಿಯ ಬದುಕಿಗೆ ಅವಕಾಶ ಕಲ್ಪಿಸುವುದು ಕಾನೂನು ಸೇವಾ ಪ್ರಾಧಿಕಾರದ ಉದ್ದೇಶವಾ ಗಿದೆ ಎಂದು ಹೈಕೋರ್ಟ್‌ನ ಹಿರಿಯ ನ್ಯಾಯಾಧೀಶ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಕಾರ್ಯಾಧ್ಯಕ್ಷ ಬಿ.ವೀರಪ್ಪ ಅವರು ಹೇಳಿದರು.
ಅವರು ಇಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿ ಕಾನೂನು ಸೇವೆಗಳ ಪ್ರಾಧಿಕಾರ. ಜಿಡಳಿತ, ಜಿ ಪಂಚಾಯತ್, ವಕೀಲರ ಸಂಘ, ಪೀಪಲ್ ಲಾಯರ್‍ಸ್ ಗಿಲ್ಡ್ ಮತ್ತು ಎಸ್.ಎಸ್.ಎಸ್.ಎಂ.ಎಸ್. ಸ್ವಯಂ ಸೇವಾ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಕಾನೂನು ಅರಿವು – ನೆರವು ಮಹಾಮೇಳ ವನ್ನು ಉದ್ಘಾಟಿಸಿ ಅವರು ಮಾತ ನಾಡುತ್ತಿದ್ದರು.
ರಾಜ್ಯದಲ್ಲಿಯೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರಿ ಗಾಗಿ ನಗರದ ಮೆಗ್ಗಾನ್ ಆಸ್ಪತ್ರೆ ಯಲ್ಲಿ ಚಿಕಿತ್ಸಾ ಕೊಠಡಿಯನ್ನು ಆರಂಭಿಸಲಾಗಿರುವುದು ಸಂತಸದ ಸಂಗತಿ. ಲಿಂಗತ್ವ ಅಲ್ಪಸಂಖ್ಯಾತರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆ ಸವಾಲುಗಳು ಅನೇಕ. ಸಂವಿಧಾ ನದ ಆಶಯದಂತೆ ಅವರಿಗೂ ಸಮಾನವಾದ ಹಕ್ಕು ಮತ್ತು ಅವಕಾಶಗಳನ್ನು ಒದಗಿಸಲಾಗಿದೆ. ಆದರೂ ಇನ್ನಷ್ಟು ಸೇವಾ -ಸೌಲ ಭ್ಯಗಳು ದೊರೆಯುವಂತಾಗಬೇಕು ಎಂದ ಅವರು ಭಾರತೀಯ ಸೈನ್ಯ ದಲ್ಲೂ ಲಿಂಗತ್ವ ಅಲ್ಪಸಂಖ್ಯಾತರು ಸೇವೆ ಸಲ್ಲಿಸುವಂತಾಗಬೇಕೆಂದರು.
ಭ್ರಷ್ಟಾಚಾರ ನಾಗರೀಕ ಸಮಾಜದ ಕಳಂಕ. ಅದು ಕ್ಯಾನ್ಸರ್ ಇದ್ದಂತೆ. ಮನೆಯಲ್ಲಿನ ಪ್ರತಿ ಮಹಿಳೆಯರು ಮನೆಯ ಯಜ ಮಾನ ತರುವ ಹಣ ನ್ಯಾಯದ ಸಂಪಾದನೆಯೇ ಎಂದು ಪ್ರಶ್ನಿಸುವಂತಾಗಬೇಕು. ತಪ್ಪಿದಲ್ಲಿ ಅದು ಭ್ರಷ್ಟಾಚಾರಕ್ಕೆ ಸಹಕಾರ ನೀಡಿದಂತೆ ಎಂದ ಅವರು ಈ ನಿಟ್ಟಿನಲ್ಲಿ ಎ ಮಹಿಳೆಯರು ಸಂಕಲ್ಪ ಮಾಡುವಂತೆ ಸೂಚಿಸಿ ದರು. ಇತ್ತೀಚೆಗೆ ನೀಡಿದ ಒಂದು ಮಹತ್ವದ ತೀರ್ಪಿನಿಂದ ಸಾರಿಗೆ ನಿಯಮಗಳ ಅನುಷ್ಟಾನದಲ್ಲಿ ಅಲ್ಪ ಸಡಿಲಿಕೆ ಮಾಡಿದ್ದರಿಂದಾಗಿ ಪ್ರಕರ ಣಗಳು ನಿಯಂತ್ರಣಕ್ಕೆ ಬಂದಿವೆ ಮಾತ್ರವಲ್ಲ ಕೋಟ್ಯಾಂತರ ರೂಪಾಯಿಗಳ ಆದಾಯ ಸರ್ಕಾರಕ್ಕೆ ಬಂದಿದೆ ಎಂದರು.
ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಶಿಕ್ಷಣ ನೀಡಬೇಕು. ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಪ್ರತಿ ವ್ಯಕ್ತಿ ಯೂ ಮಾನವೀಯ ನೆಲೆಯಲ್ಲಿಲ ಜೀವನ ನಿರ್ವಹಣೆ ಮಾಡಬೇಕು. ಮಕ್ಕಳು ತಮ್ಮ ಪೋಷಕರನ್ನು ನಿರ್ಲಕ್ಷಿಸುವುದು ಸಲ್ಲದು ಎಂದ ಅವರು, ಸಾಧ್ಯವಿರುವಲ್ಲಿ ಮರ- ಗಿಡಗಳನ್ನು ಬೆಳೆಸಿ, ಸ್ವಚ್ಚ, ಸ್ವಸ್ಥ ಹಾಗೂ ಸುಂದರ ಪರಿಸರ ನಿರ್ಮಾಣಕ್ಕೆ ಸಹಕರಿಸುವಂತೆ ಅವರು ಮನವಿ ಮಾಡಿದರು. ಶಿಕ್ಷಣ ಉತ್ತಮ ಬದುಕಿನ ಬ್ರಹ್ಮಾಸ್ತ್ರ. ಶಿಕ್ಷಿತರ ಜೀವನ ಸುಖಮಯ ವಾಗಿರಲಿದೆ. ವ್ಯಕ್ತಿಗೆ ವಿದ್ಯೆಯೊಂ ದಿಗೆ ವಿನಮ್ರತೆಯೂ ಭೂಷಣ ತರಲಿದೆ. ಅಶಿಕ್ಷಿತ ಹೆಚ್ಚು ಸಂಕಷ್ಟ ಕ್ಕೊಳಗಾಗುತ್ತಾನೆ. ಶಿಕ್ಷಣ ಎಲ್ಲರ ಬಲಿಷ್ಟ ಅಸ್ತ್ರವಾಗಿದೆ. ಅದರಲ್ಲೂ ಕೆಲವು ಸಾಮಾಜಿಕ ಹೊಣೆಗಾರಿಕೆ ಮರೆತ ವಿದ್ಯಾವಂತರಿಂದಲೇ ಮೋಸ-ವಂಚನೆ ನಡೆಯುತ್ತಿರು ವುದು ಆತಂಕಕಾರಿ ಬೆಳವಣಿಗೆ ಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಧಾನ ಜಿ ಸತ್ರ ನ್ಯಾಯಾಧೀಶ ಮಲ್ಲಿ ಕಾರ್ಜುನಗೌಡ, ಜಿಧಿಕಾರಿ ಡಾ|| ಆರ್.ಸೆಲ್ವಮಣಿ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್, ಜಿ ಪೊಲೀಸ್ ವರಿಷ್ಠಾಧಿಕಾರಿ ಮಿಥು ನ್‌ಕುಮಾರ್,ಜಿಪಂ,ಮುಖ್ಯ ಕಾರ್ಯನಿ ರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ವಕೀಲರ ಸಂಘದ ಅಧ್ಯಕ್ಷ ಬಿ.ಜಿ.ಶಿವ ಮೂರ್ತಿ, ಸಿಮ್ಸ್ ನಿರ್ದೇಶಕ ಡಾ|| ವಿರೂಪಾಕ್ಷಪ್ಪ, ಎಸ್.ಎಸ್.ಎಸ್. ಎಂ.ಎಸ್.ಸಂಸ್ಥೆಯ ನಿರ್ದೇಶಕ ಫಾ|| ಕ್ಲಿಫೋರ್ಡ್ ರೋಷನ್ ಪಿಂಟೋ, ಜಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್‍ಯದರ್ಶಿ ರಾಜಣ್ಣ ಸಂಕಣ್ಣನವರ ಸೇರಿದಂತೆ ಅನೇಕ ಗಣ್ಯರು, ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆ ಗಳ ಪ್ರತಿನಿಧಿಗಳು, ಲಿಂಗತ್ವ ಅಲ್ಪ ಸಂಖ್ಯಾತರು ಉಪಸ್ಥಿತರಿದ್ದರು.
ಕಾರ್‍ಯಕ್ರಮಕ್ಕೂ ಮುನ್ನ ಕುವೆಂಪು ರಂಗಮಂದಿರದ ಆವರ ಣದಲ್ಲಿ ಸ್ಥಾಪಿಸಲಾಗಿದ್ದ ಮಹಿಳಾ ಸ್ವಸಹಾಯ ಗುಂಪುಗಳ ಪ್ರತಿನಿಧಿಗಳು ಉತ್ಪಾದಿಸುತ್ತಿರುವ ಉತ್ಪನ್ನ ಗಳು, ಸರ್ಕಾರದ ವಿವಿಧ ಇಲಾಖಾ ಯೋಜನೆಗಳ ಕುರಿತು ಮಾಹಿತಿ ಒದಗಿಸುವ ಸ್ಟಾಲ್‌ಗಳನ್ನು ಹೈಕೊ ರ್ಟ್‌ನ ಹಿರಿಯ ನ್ಯಾಯಾಧೀಶ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಕಾರ್ಯಾಧ್ಯಕ್ಷ ಬಿ.ವೀರಪ್ಪ ಅವರು ಗಣ್ಯರೊಂ ದಿಗೆ ವೀಕ್ಷಿಸಿ,ಮಾಹಿತಿ ಪಡೆದರು.