ಏ.16: ವಿದ್ಯಾರ್ಥಿಗಳಿಗೆ ಎಂಎಸ್ಎಸ್ ಕ್ವಿಜ್…
ದಾವಣಗೆರೆ: ಇಲ್ಲಿನ ಪ್ರತಿಷ್ಠಿತ ಸಿದ್ಧಗಂಗಾ ಸಂಸ್ಥೆಯ ಸಂಸ್ಥಾಪಕ ಶಿಕ್ಷಣಶಿಲ್ಪಿ ಡಾ. ಎಂ. ಎಸ್. ಶಿವಣ್ಣನವರ ಗೌರವಾರ್ಥ ಕಳೆದ ೯ ವರ್ಷಗಳಿಂದ ನಡೆಸುತ್ತಿರುವ ರಾಜ್ಯಮಟ್ಟದ ಎಂ. ಎಸ್.ಎಸ್ ೨೦೨೩ ಕ್ವಿಜ್ ಏ- ೧೬ರ ಭಾನುವಾರ ದಾವಣಗೆರೆಯ ಸಿದ್ಧಗಂಗಾ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ| ಡಿ. ಎಸ್. ಜಯಂತ್ ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಈ ವರ್ಷ ಎಸ್ಎಸ್ಎಲ್ಸಿ ಮತ್ತು ಕೇಂದ್ರ ಪಠ್ಯಕ್ರಮದಲ್ಲಿ ಎಸ್ಎಸ್ಸಿ ಪರೀಕ್ಷೆ ಬರೆದಿರುವ ಮಕ್ಕಳು ಈ ಕ್ವಿಜ್ನಲ್ಲಿ ಭಾಗವಹಿಸುವರು. ಲಿಖಿತ ಕ್ವಿಜ್ ೧೦ನೇ ತರಗತಿ ವಿeನ ಮತ್ತು ಗಣಿತ ಎನ್ಸಿಇಆರ್ಟಿ ಪಠ್ಯಪುಸ್ತಕ ಆಧಾರಿತ ಬಹು ಆಯ್ಕೆಯ ೬೦ ಪ್ರಶ್ನೆಗಳನ್ನೊಳಗೊಂಡಿರುತ್ತದೆ.
ಈಗಾಗಲೇ ರಾಜ್ಯದ ವಿವಿಧ ಪ್ರೌಢಶಾಲೆಗಳಿಂದ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿzರೆ. ಕ್ವಿಜ್ಗೆ ಆಗಮಿಸುವ ದೂರದೂರಿನ ಮಕ್ಕಳಿಗೆ ವಿದ್ಯಾಸಂಸ್ಥೆಯ ಹಾಸ್ಟೆಲ್ನಲ್ಲಿ ವ್ಯವಸ್ಥೆ ಮಾಡಿಕೊಡಲಾಗುವುದು. ಬೆಳಿಗ್ಗೆ ೯ ರಿಂದ ೧೦.೩೦ ರವರೆಗೆ ರೈಲ್ವೇ ನಿಲ್ದಾಣ, ಬಸ್ ನಿಲ್ದಾಣಗಳಿಂದ ಪರ ಊರಿನಿಂದ ಬರುವ ಮಕ್ಕಳನ್ನು ಮತ್ತು ಪೋಷಕರನ್ನು ಕರೆತರಲು ಸಿದ್ಧಗಂಗಾ ಶಾಲಾ- ಕಾಲೇಜಿನ ವಾಹನಗಳ ವ್ಯವಸ್ಥೆ ಇದೆ. ಕ್ವಿಜ್ ಮುಗಿದ ನಂತರ ಲಘು ಉಪಹಾರವಿರುತ್ತದೆ.
ಏ.೧೬ರ ಭಾನುವಾರ ಬೆಳಿಗ್ಗೆ ೯ರಿಂದ ನೊಂದಣಿ ಮತ್ತು ಪ್ರವೇಶಪತ್ರ ನೀಡಲಾಗುತ್ತದೆ. ೧೧ ಗಂಟೆಗೆ ಪ್ರಾರಂಭವಾಗುವ ಲಿಖಿತ ಕ್ವಿಜ್ಗೆ ಮಕ್ಕಳು ಓ. ಎಂ. ಆರ್ ಶೀಟ್ನಲ್ಲಿ ಉತ್ತರಿಸುವರು. ವಿeನದ ೩೦, ಗಣಿತದ ೩೦ ಪ್ರಶ್ನೆಗಳಿಗೆ ಉತ್ತರಿಸಲು ೬೦ ನಿಮಿಷಗಳ ಕಾಲಾವಕಾಶವಿರುತ್ತದೆ. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಪ್ರಶ್ನೆಪತ್ರಿಕೆಗಳು ಪ್ರತ್ಯೇಕವಾಗಿರುತ್ತವೆ.
ಪ್ರಥಮ ೨೫,೦೦೦, ದ್ವಿತೀಯ ೧೫,೦೦೦ ಮತ್ತು ತೃತೀಯ ೧೦,೦೦೦ ರೂ. ಗಳ ನಗದು ಬಹುಮಾನ, ಆಕರ್ಷಕ ಸ್ಮರಣಿಕೆ, ಮೆಡಲ್ ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿ ರುತ್ತದೆ. ಜೊತೆಗೆ ತಲಾ ೧,೦೦೦ ರೂ. ಗಳ ೧೦ ಸಮಾಧಾನಕರ ಬಹುಮಾನ ಮತ್ತು ೧,೦೦೦ ಮಕ್ಕಳು ಎಂ. ಎಸ್.ಎಸ್ ಕ್ವಿಜ್ ಮೆಡಲ್ ಪಡೆಯುವರು.
ಮಕ್ಕಳ ಪ್ರತಿಭಾ ಅನ್ವೇಷಣೆಗೆ ಇದೊಂದು ಮುಕ್ತ ಅವಕಾಶವಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ| ಡಿ. ಎಸ್. ಜಯಂತ್ ಅವರು ತಿಳಿಸಿದ್ದಾರೆ. ಆಸಕ್ತರು ಮೊ: ೮೦೭೩೦೫೪೨೯೫ಗೆ ವಾಟ್ಸಾಪ್ ಮಾಡುವ ಮೂಲಕ ತಮ್ಮ ಹೆಸರು ನೊಂದಾಯಿಸ ಬಹುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೋಜ, ಕಾರ್ಯದರ್ಶಿ ಡಿ. ಎಸ್. ಹೇಮಂತ್, ಸಿಬಿಎಸ್ಇ ಶಾಲೆಯ ಪ್ರಾಚಾರ್ಯೆ ಗಾಯತ್ರಿ ಚಿಮ್ಮಡ್, ಸಿದ್ಧಗಂಗಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೇಖಾರಾಣಿ, ಹಿರಿಯ ವಿದ್ಯಾರ್ಥಿ ಹರ್ಷ, ಮನೋಹರ ಉಪಸ್ಥಿತರಿದ್ದರು.