ಮತದಾನದ ಮಹತ್ವ ತಿಳಿಸಿದ ಸಂವಿಧಾನ ಶಿಲ್ಪಿ ಡಾ| ಬಿ. ಆರ್. ಅಂಬೇಡ್ಕರ್…

ಎಡಯಲ್ಲಿಯೂ ಚುನಾವಣೆಯ ಕಾವೇರಿದೆ ಒಂದು ಕಡೆ ಬಿಸಿಲಿನ ತಾಪ ಹೆಚ್ಚಾದರೆ ಮತ್ತೊಂದು ಕಡೆ ಜನರನ್ನು ಆಕರ್ಷಿಸಲು ಹಣ , ಸೀರೆ , ಮಧ್ಯದ ಜೋರು ನಡುವೆ ೫ ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುವ ರಾಜಕಾರಣಿಗಳಿಗೆ ಜನರ ನೋವಿಗೆ ಸ್ಫಂದಿಸುವುದೇ ಕಡಿಮೆ ಎಂದು ಹಿಡಿ ಶಾಪ ಹಾಕುವ ಜನರು , ಇದರ ಮಧ್ಯೆ ಮಾದ್ಯಮದ ಅಣುಕುಗಳು ಚುನಾವಣೆಯ ಅಖಾಡಕ್ಕೆ ಇಳಿಯಲು ಹೊರಟಿರುವ ರಾಜಕಾರಣಿಗಳು ಯಾವುದೇ ಅಪಮಾನಕ್ಕೆ ಬಗ್ಗದೆ ಜನರ ನಡುವೆ ಬಂದು ಓಟು ಕೇಳಲು ಬರುವ ನೀವೇ ನಿಜವಾದ ದೇವರು ಎಂದು ಹೇಳುವ ಜನರಿಗೆ ಮತ್ತೊಮ್ಮೆ ಗೆದ್ದು ಮತ್ತದೇ ೫ ವರ್ಷಗಳಿಗೊಮ್ಮೆ ಬರುವ ಇಂತಹ ಬಹುತೇಕ ನಾಲಾಯಕ್ ರಾಜಕಾರಣಿಗಳಿಗೆ ಯಾವಾಗ ಜನರ ಕಷ್ಟ – ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ.
ಈಗ ಕರ್ನಾಟಕದಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಪ್ರಜಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರ ಮತ್ತು ಪ್ರಭುತ್ವ ಪಡೆಯುವ ಆಕಾಂಕ್ಷಿಗಳಲ್ಲಿ ಹೊಸ ಹುರುಪು ಗರಿಗೆದರಿದೆಂತಾಗಿದೆ.
ಉತ್ತಮ ಭಾರತಕ್ಕಾಗಿ ಮತ ಚಲಾಯಿಸುವ ಮೂಲಕ ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಮತ್ತು ನಮ್ಮ ಹಿಂದಿನ ತಲೆಮಾರುಗಳ ಹೋರಾಟವನ್ನು ಗೌರವಿಸಬೇಕು. ಅಲ್ಲದೆ ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಇದು ನಮ್ಮ ರಾಷ್ಟ್ರದ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ.
ಭಾರತೀಯರು ನಮ್ಮ ಸ್ವಾತಂತ್ರ್ಯವನ್ನು ಗೆಲ್ಲಲು ಹೋರಾಡಿದರು ಮತ್ತು ಅವರ ಕಾರಣದಿಂದಾಗಿ ನಾವು ಮತದಾನದ ಹಕ್ಕನ್ನು ಹೊಂದಿದ್ದೇವೆ. ನಮ್ಮ ಮತದಾನದ ಹಕ್ಕನ್ನು ಚಲಾಯಿಸುವುದು ನಮ್ಮ ಸ್ವಾತಂತ್ರ ಹೋರಾಟಗಾರರು ಭಾರತಕ್ಕಾಗಿ ಏನನ್ನು ರೂಪಿಸಿದ್ದರೋ ಅದನ್ನು ಎತ್ತಿಹಿಡಿಯುತ್ತದೆ.
ಉತ್ತಮ ಭಾರತಕ್ಕಾಗಿ ಮತ ಚಲಾಯಿಸುವ ಮೂಲಕ ನಾವು ನಮ್ಮ ಸ್ವಾತಂತ್ರ ಹೋರಾಟಗಾರರನ್ನು ಮತ್ತು ನಮ್ಮ ಹಿಂದಿನ ತಲೆಮಾರುಗಳ ಹೋರಾಟವನ್ನು ಗೌರವಿಸಬೇಕು. ಪ್ರಜಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪ್ರಜೆಯ ಸಹಭಾಗಿತ್ವದ ಅಂಗವಾಗಿ ದೇಶದ ಪ್ರತಿಯೊಬ್ಬ ಪ್ರಜೆಗೂ ಮತದಾನದ ಅಮೂಲ್ಯ ಕೊಡುಗೆಯನ್ನು ಕೊಡ ಮಾಡಿದೆ.


ಮತದಾನ ಎಂಬುದು ನಮ್ಮ ಪ್ರಜಪ್ರಭುತ್ವ ವ್ಯವಸ್ಥೆಯಲ್ಲಿನ ಪ್ರಜೆಗಳು ತಮಗಾಗಿ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿ ತಮ್ಮದೆ ಆದ ಸರ್ಕಾರವನ್ನು ರಚಿಸಿಕೊಳ್ಳಲು ಇರುವ ಒಂದು ಪ್ರಾತಿನಿಧಿಕ ವ್ಯವಸ್ಥೆಯಾಗಿದ್ದು, ಅದನ್ನು ಪ್ರತಿಯೊಬ್ಬ ಪ್ರಜೆಯು ಸೂಕ್ತ ರೀತಿಯಲ್ಲಿ ಚಲಾಯಿಸಿದಾಗ ದೇಶ ಮತ್ತು ಜನರ ಕಲ್ಯಾಣಕ್ಕೆ ಹಾಗೂ ಮತದ ಮಲ್ಯ ಹೆಚ್ಚಾಗುತ್ತದೆ ನಮ್ಮ ಒಂದು ಮತ ಎಷ್ಟು ಅಮೂಲ್ಯವಾಗಿರುತ್ತದೆ ಮತ್ತು ಮತದಾನದ ಅವಕಾಶ ನಮಗೆ ಹೇಗೆ ಬಂತು ಎಂದು ಅರಿವಾದಾಗ ಮತದಾನ ಎಂಬುದು ಎಷ್ಟು ಪವಿತ್ರ ಎಂದು ತಿಳಿಯುತ್ತದೆ. ಅಲ್ಲದೆ ಇಂದಿನ ಯುವ ಪೀಳೀಗೆಗೆ ಹೆಚ್ಚಿನ ಅರಿವಾಗಬೇಕಾಗಿದೆ.
ಇಂದು ನಾವೆಲ್ಲರೂ ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಅವರ ೧೩೨ನೇ ಜನ್ಮ ದಿನಚಾರಣೆಯನ್ನು ಆಚರಿಸುತ್ತಿದ್ದೇವೆ. ಡಾ ಬಿ. ಆರ್ ಅಂಬೇಡ್ಕರ್ ಅವರು ೧೪ನೇ ಏಪ್ರಿಲ್, ೧೮೯೧ ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್‌ನಲ್ಲಿ ಹುಟ್ಟಿದರು. ಅವರು ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಯ ಖೇಡಾ ತಾಲ್ಲೂಕಿನ ಅಂಬೆವಾಡ ಗ್ರಾಮದವರು. ಇವರು ಮಹಾರ ಜತಿಯಲ್ಲಿ ಹುಟ್ಟಿದರು ಎಂದು ಎಲ್ಲರಿಗೂ ತಿಳಿದಿರುವ ಸಂಗತಿ. ಸ್ವಾತಂತ್ರ ಪೂರ್ವ ಭಾರತದಲ್ಲಿ ಬಹುಜನರು ಸಾವಿರಾರು ವರ್ಷಗಳು ತಮ್ಮವರಿಂದಲೇ ಕನಿಷ್ಠ ಹಕ್ಕುಗಳಿಲ್ಲದೆ ಪ್ರಾಣಿ ಗಳಂತೆ ಬದುಕಿದ ಜನರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದು ಇತಿಹಾಸವೇ.
ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ನಡುವೆ ನಡೆದ ಚರ್ಚೆಗಳನ್ನು ಸುದೀರ್ಘವಾಗಿ ಮತ್ತು ಸಂಯಮದಿಂದ ವಿವೇಚನೆಯಿಂದ ನೋಡಿದಾಗ, ಅಂದು ಅಂಬೇಡ್ಕರ್ ಭಾರತದಲ್ಲಿರುವ ೧೮ ವರ್ಷ ಮೇಲ್ಪಟ್ಟ ಎ ಗಂಡು ಹೆಣ್ಣು ಎಂಬ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಮತ ಹಾಕುವ ಅವಕಾಶದ ಹಕ್ಕು ಇರಲಿ ಎಂದು ಹೇಳಿದಾಗ ಗಾಂಧೀಜಿ ವಿರೋಧಿಸುತ್ತಾರೆ ಎನ್ನಲಾಗಿದೆ. ಸಾವಿರಾರು ವರ್ಷಗಳಿಂದ ವಿದ್ಯೆ, ಆಸ್ತಿ, ಅಧಿಕಾರದಿಂದ ವಂಚಿತರಾಗಿ ಪ್ರಾಣಿ ಪಶುಗಳಿಗಿಂತ ಕಡೆಯದಾಗಿ ಬದುಕುತ್ತಿರುವ ನನ್ನ ದೇಶದ ಮೂಲ ನಿವಾಸಿ ಬಹುಸಂಖ್ಯಾತರ ಬದುಕು ಹಸನಾಗುವುದು ಗಾಂಧೀಜಿಯವರಿಗೆ ಬೇಡವಾಗಿತ್ತು. ಇದನ್ನು ತಿರಸ್ಕರಿಸಿದಾಗ ಇಂಗ್ಲೆಂಡಿನ ಪ್ರಧಾನ ಮಂತ್ರಿ ರಾಮ್ಸೇ ಮ್ಯಾಕ್ ಡೊನಾಲ್ಡ್ ನ್ಯಾಯ ಸಮ್ಮತವಾಗಿ ೧೮ ವರ್ಷ ತುಂಬಿದ ಭಾರತದ ಎ ಜನರಿಗೆ ಮತದಾನದ ಹಕ್ಕನ್ನು ನೀಡುತ್ತೇವೆಂದು ಘೋಷಿಸಿ ಅಸ್ಪೃಶ್ಯರಿಗೆ ಮತ ಚಲಾಯಿಸುವ ಹಕ್ಕು ನೀಡಿದರು.
ಆ ನಂತರ ಸಭೆ ಮುಗಿಸಿ ಹೊರಬಂದ ಅಂಬೇಡ್ಕರರಿಗೆ ಪತ್ರಕರ್ತರು ನೀವು ಭಾರತೀಯರೆಲ್ಲರಿಗೂ ಮತದಾನದ ಹಕ್ಕನ್ನು ಕೊಡಿಸಿದಿರಂತೆ ಏನದು? ಎಂದು ಪ್ರಶ್ನಿಸಿದಾಗ ಅದಕ್ಕೆ ಅಂಬೇಡ್ಕರ್ ತಮಗೆ ಬೇಕಾದ ರಾಜನನ್ನು ಆಯ್ಕೆ ಮಾಡಿಕೊಳ್ಳುವ ಈ ದಿನ ನನಗೆ ತುಂಬಾ ಸಂತೋಷವಾಗಿದೆ. ೨೫೦೦ ವರ್ಷಗಳ ಹಳೆಯ ಕಾಲದ ಮನುಸ್ಮೃತಿ ಆಧಾರಿತ ಮನುವ್ಯವಸ್ಥೆಯನ್ನು ನುಚ್ಚು ನೂರು ಮಾಡಿ ಪ್ರಜಪ್ರಭುತ್ವ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ . ಅಂದು ಅವರು ಎಲ್ಲರ ಕಣ್ಣಿಗೆ ನಿಷ್ಠುರವ ವ್ಯಕ್ತಿಯಾಗಿ ಸಂವಿಧಾನದ ಪ್ರತಿಯೊಂದು ಮೂಲಭೂತ ಸೌಕರ್ಯಗಳನ್ನು ಜನರಿಗೆ ತಲುಪಿಸಿ ಆಧುನಿಕ ಸಂವಿಧಾನದ ಶಿಲ್ಪಿ ಎನಿಸಿದರೆ, ಇಂದು ಆ ಮಹಾನ್ ವ್ಯಕ್ತಿ ಕೊಡಿಸಿದ ಮತವನ್ನು ಹೆಂಡ, ಹಣಕ್ಕಾಗಿ ಮಾರಿಕೊಳ್ಳುವ ಬಹುಸಂಖ್ಯಾತರು ಗಾಂಧೀಜಿಯವರು ಬಹುಜನರಿಗೆ ಶಿಕ್ಷಣವಿಲ್ಲ ಮತ್ತು ಮತದಾನದ ಅರಿವಿಲ್ಲ ಅದರಿಂದ ಅವರಿಗೆ ಮತದಾನದ ಹಕ್ಕು ನೀಡಬಾರದೆಂಬ ವಾದಕ್ಕೆ ಪುಷ್ಟಿ ನೀಡುವಂತೆ ವರ್ತಿಸುತ್ತಿರುವುದು ವಿಪರ್ಯಾಸವೇ ಸರಿ.
ಅದರಲ್ಲೂ ವಿದ್ಯಾವಂತರೆನಿಸಿಕೊಂಡ ನಮ್ಮಂತಹವರ ಅಸಡ್ಡೆ ಮನೋಭಾವ ಎದ್ದು ಕಾಣುತ್ತಿದೆ. ಇದಕ್ಕಾಗಿ ಚುನಾವಣಾ ಆಯೋಗವು ಮತದಾನವನ್ನು ಹೆಚ್ಚಿಸಲು ಮತದಾರರ ನೋಂದಣಿ ಮತ್ತು ಮತದಾನಕ್ಕೆ ಪ್ರೇರಣೆ ನೀಡುವಂತಹ ಕಾರ್ಯಕ್ರಮಗಳನ್ನು ಮಾಡುತ್ತಿದೆ . ಅದರಿಂದ ನಾವು ನೀಡುವ ಒಂದು ಮತವು ದೇಶಕ್ಕೆ ಹಿತ, ಎನ್ನುತ್ತಾ ಮತವನ್ನು ಚಲಾಯಿಸುವಾಗ ಯೋಗ್ಯ ವ್ಯಕ್ತಿಯನ್ನಷ್ಟೆ ನಿಮ್ಮ ಪ್ರತಿನಿಧಿಯನ್ನು ಆರಿಸಿ ಕಳಿಸಿ ಎಂಬುದಷ್ಟೆ ಕಳಕಳಿ. ಓದುಗ ಬಂಧುಗಳೇ ಯಾರೇ ಬಂದರು ನೀವು ದುಡಿಯಲೇಬೇಕು, ಆದರೆ ನಾವು ದುಡಿದ ಹಣ ಸೂಕ್ತ ಮತ್ತು ನ್ಯಾಯೋಚಿತ ರೀತಿಯಲ್ಲಿ ಬಳಸಿ ಸಮಾಜ ಮತ್ತು ದೇಶವನ್ನು ಅಭಿವೃದ್ದಿ ಮಾಡುವಂತಹ ನೇತಾರರನ್ನು ಆರಿಸುವ ಹೊಣೆಗಾರಿಕೆ ನಮ್ಮದು. ಇಂದು ಸರ್ಕಾರವು ಅಂಬೇಡ್ಕರ್ ಜಯಂತಿ ಆಚರಿಸಲು ಯೋಚಿಸುತ್ತಿರುವಾಗ ಎಲ್ಲವೂ ನೀವು ನೀಡುವ ಒಂದು ಮತದ ಮೇಲೆ ದೇಶದ ಮತ್ತು ಮುಂದಿನವರ ಭವಿಷ್ಯ ನಿಂತಿರುವುದು ಮಾತ್ರ ಸತ್ಯ…

-ಜ್ಯೋತಿ ಜಿ,
(ಸಾಮಾಜಿಕ ಹೋರಾಟಗಾರ್ತಿ ಹಾಗೂ ಉಪನ್ಯಾಸಕರು, ಮೈಸೂರು)