ಶೋಷಿತರ ಮತ್ತು ಮಹಿಳೆಯರ ಬದುಕಿಗೆ ಆಶಾಕಿರಣವಾದ ಮಹಾನ್ ನಾಯಕ…

ಇದು ಜೀವನದ ಪ್ರತಿ ಹಂತದಲ್ಲೂ ಅಸ್ಪಶ್ಯತೆಯ ನೋವು ಅನುಭವಿಸಿ, ಸಮಾಜ ತಮಗೆ ಏನು ಕೊಡದಿದ್ದರೂ ಸಮಾಜಕ್ಕಾಗಿ ಬದುಕನ್ನೇ ಮೀಸಲಿಟ್ಟು ಸಮಾನತೆ ಮತ್ತು ಅಸ್ಪಶ್ಯತೆ ನಿವಾರಣೆಗಾಗಿ ಹೋರಾಡಿದ ಮಹಾ ನಾಯಕನ ಯಶೋಗಾಥೆ.
ಹೌದು, ಸಂವಿಧಾನ ಶಿಲ್ಪಿ ಡಾ | ಬಿ.ಆರ್ ಅಂಬೇಡ್ಕರ್ ಭಾರತ ಕಂಡ ಶ್ರೇಷ್ಠ ನಾಯಕರು. ಸಾವಿರಾರು ವರ್ಷಗಳಿಂದ ಶೋಷಣೆಗೆ ಗುರಿಯಾಗಿದ್ದವರಿಗೆ ಬೆಳಕಿನ ಸನ್ಮಾರ್ಗ ತೋರಿಸಿ, ದೇಶದ ಭವ್ಯ ಭವಿಷ್ಯವನ್ನು ಬರೆದ, ದಲಿತರ, ಶೋಷಿತರ, ಬಡವರ ಪಾಲಿನ ಆಶಾಕಿರಣ, ಸಂವಿಧಾನದ ಮೂಲಕ ನಮ್ಮಂತ ಕೋಟ್ಯಾಂತರ ಜನರಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸದೃಢರಾಗಲು ಅವಕಾಶ ಮಾಡಿಕೊಟ್ಟು. ಧ್ವನಿ ಇರದವರ ಧೈರ್ಯವಾಗಿ, ಮೇಲ್ವರ್ಗದವರಿಂದ ಜೀವನದುದ್ದಕ್ಕೂ ನೋವನ್ನುಂಡು, ಭಾರತಕ್ಕೆ ಮಹಾಶಾಪವಾಗಿ ಕಾಡುತ್ತಿದ್ದ ಅಸ್ಪೃಶ್ಯತೆಯನ್ನು ಮೆಟ್ಟಿನಿಂತು, ಮೇರಪರ್ವತವಾಗಿ ಬೆಳೆದುನಿಂತ ಮಹಾನ್ ದಾರ್ಶನಿಕ. ಭಾರತ ಭಾಗ್ಯವಿಧಾತ, ಭಾರತ ರತ್ನ, ಸಂವಿಧಾನ ಶಿಲ್ಪಿ, ವಿಶ್ವ eನಿ ಡಾ| ಬಿ.ಆರ್.ಅಂಬೇಡ್ಕರ್ ಇವರನ್ನು ಸಾಮಾನ್ಯವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಕರೆಯಲಾಗುತ್ತಿತ್ತು. ಇವರು ಅತ್ಯಂತ ಪ್ರಸಿದ್ಧ ರಾಜಕೀಯ ನಾಯಕ, ಪ್ರಖ್ಯಾತ ನ್ಯಾಯಶಾಸ್ತ್ರಜ್ಞ, ಬೌದ್ಧ ಕಾರ್ಯಕರ್ತ, ತತ್ವeನಿ, ಮಾನವಶಾಸ್ತ್ರಜ್ಞ, ಇತಿಹಾಸಕಾರ, ವಾಗ್ಮಿ, ಬರಹಗಾರ, ಅರ್ಥಶಾಸ್ತ್ರಜ್ಞ, ವಿದ್ವಾಂಸ ಮತ್ತು ಸಂಪಾದಕರಾಗಿದ್ದರು.
ಡಾ. ಭೀಮ್ ರಾವ್ ರಾಮ್ ಜಿ ಅಂಬೇಡ್ಕರ್ ಅವರು ೧೮೯೧ರ ಏಪ್ರಿಲ್ ೧೪ ರಂದು ರಾಮ್‌ಜಿ ಸಕ್ಪಾಲ್ ಮತ್ತು ಭೀಮಾಬಾಯಿ ದಂಪತಿಯ ೧೪ನೆಯ ಮಗನಾಗಿ ಮಧ್ಯಪ್ರದೇಶದ ಮೊವ್ ಸೇನಾ ಕ್ಯಾಂಪ್‌ನಲ್ಲಿ ಜನಿಸುತ್ತಾರೆ. ಅಂಬೇಡ್ಕರವರ ತಂದೆ ರಾಮ್‌ಜಿ ಭಾರತೀಯ ಸೇನೆಯಲ್ಲಿ ಸುಬೇದಾರರಾಗಿದ್ದರು. ೧೮೯೪ರಲ್ಲಿ ಸೇನೆಯ ನಿವೃತ್ತಿಯ ನಂತರ, ಅವರ ಕುಟುಂಬವು ಸತಾರಾಕ್ಕೆ ಸ್ಥಳಾಂತರ ಗೊಂಡರು.
ಅಂಬೇಡ್ಕರ್ ರವರು ಚಿಕ್ಕವರಿರುವಾಗಲೇ ಅವರ ತಾಯಿ ಮರಣ ಹೊಂದುತ್ತಾರೆ. ನಾಲ್ಕು ವರ್ಷಗಳ ನಂತರ ಅಂಬೇಡ್ಕರ್ ರವರ ತಂದೆ ಮರು ಮದುವೆಯಾಗುತ್ತಾರೆ ನಂತರ ಪೂರ್ತಿ ಕುಟುಂಬ ಬಾಂಬೆಗೆ ಸ್ಥಳಾಂತರಗೊಳ್ಳುತ್ತಾರೆ. ೧೯೦೬ರಲ್ಲಿ, ೧೫ ವರ್ಷದ ಭೀಮರಾವ್ ೯ ವರ್ಷದ ಬಾಲಕಿ ರಮಾಬಾಯಿಯನ್ನು ಮದುವೆ ಆಗುತ್ತಾರೆ. ೧೯೧೨ರಲ್ಲಿ ತಂದೆ ರಾಮ್ಜಿ ಸಕ್ಪಾಲ್ ಮುಂಬೈನಲ್ಲಿ ನಿಧನ ಹೊಂದುತ್ತಾರೆ.
ಬಾಲ್ಯದಲ್ಲಿಯೇ ಬಾಬಾ ಸಾಹೇಬ್ ಅಂಬೇಡ್ಕರ್ ಅತಿ ಹೆಚ್ಚು ಜತಿ ತಾರತಮ್ಯವನ್ನು ಎದುರಿಸಿದರು. ಮರ್ ಜತಿಯ ಹೆಸರಿನಿಂದ ಅವರ ಕುಟುಂಬವನ್ನು ಮೇಲ್ವರ್ಗದವರು ಅಸ್ಪೃಶ್ಯದ ರೀತಿಯಲ್ಲಿ ನೋಡಲು ಪ್ರಾರಂಭ ಮಾಡಿದರು. ಅಂಬೇಡ್ಕರ್ ಅವರು ಸೇನಾ ಶಾಲೆಯಲ್ಲಿ ತಾರತಮ್ಯ ಅವಮಾನವನ್ನು ಎದುರಿಸಿದರು, ಶಿಕ್ಷಕರು ಮತ್ತು ಇತರ ಮೇಲ್ವರ್ಗದ ವಿದ್ಯಾರ್ಥಿಗಳು ಕೆಳವರ್ಗದ ವಿದ್ಯಾರ್ಥಿಗಳಿಗೆ ಹೆಚ್ಚು ತಾರತಮ್ಯ ಮಾಡುತ್ತಿದ್ದರು.


ಸಾಮಾನ್ಯವಾಗಿ ಅಸ್ಪೃಶ್ಯ ವಿದ್ಯಾರ್ಥಿಗಳನ್ನು ತರಗತಿಯ ಹೊರಗೆ ಕುಳಿತುಕೊಳ್ಳಲು ಹೇಳುತ್ತಿದ್ದರು. ಸತಾರಾಕ್ಕೆ ಸ್ಥಳಾಂತರಗೊಂಡ ನಂತರ ಅವರು ಸ್ಥಳೀಯ ಶಾಲೆಗೆ ಹೋದರು, ಶಾಲೆಯನ್ನು ಬದಲಾಯಿಸಿದ್ದರು. ಭೀಮರಾವ್ ಅವರ ಅದೃಷ್ಟ ಬದಲಾಗಿರಲಿಲ್ಲ ಏಕೆಂದರೆ ಅಲ್ಲಿಯೂ ಕೂಡಾ ಅವರು ತಾರತಮ್ಯ ಅಸ್ಪೃಶ್ಯತೆಯ ಅವಮಾನವನ್ನು ಅನುಭವಿಸಬೇಕಾಯಿತು.
ಅಂಬೇಡ್ಕರ್ ಅವರು ಬಾಲ್ಯದಲ್ಲಿ ಅನುಭವಿಸಿದ ನೋವುಗಳು ಒಂದೆರಡಲ್ಲ. ಒಮ್ಮೆ ಅಂಬೇಡ್ಕರ್ ಏಳೆಂಟು ವರ್ಷದ ಪುಟ್ಟ ಬಾಲಕನಾಗಿzಗ ತಂದೆಯನ್ನು ನೋಡಲು ಎತ್ತಿನಗಾಡಿಯಲ್ಲಿ ಕುಳಿತು ಸಾಗುತ್ತಿದ್ದರು, ಗಾಡಿ ಸ್ವಲ್ಪ ದೂರ ಸಾಗಿತ್ತಷ್ಟೆ, ಎತ್ತಿನ ಗಾಡಿಯವನಿಗೆ ಈ ಹುಡುಗ ದಲಿತ ಎಂಬುದು ತಿಳಿದು ಕೂಡಲೇ ಗಾಡಿಯನ್ನು ನಿಲ್ಲಿಸಿ ಆ ಪುಟ್ಟ ಬಾಲಕನನ್ನು ಕೆಳಕ್ಕೆ ತಳ್ಳಿ ಮುಂದೆ ಸಾಗಿಬಿಟ್ಟ. ಇನ್ನೊಮ್ಮೆ ಕೆರೆಯಲ್ಲಿ ನೀರು ಕುಡಿದ ಎಂಬ ಕಾರಣಕ್ಕೆ ಗ್ರಾಮಸ್ಥರೆಲ್ಲ ಸೇರಿ ಅಂಬೇಡ್ಕರ್‌ಗೆ ಥಳಿಸಿದರು. ಒಮ್ಮೆ ಕ್ಷೌರಿಕ ಕ್ಷೌರ ಮಾಡದೆ ಹಿಂದೆ ಕಳಿಸಿದ್ದನಂತೆ. ಮಳೆ ಬಂದ ಕಾರಣಕ್ಕೆ ರಸ್ತೆ ಬದಿಯಲ್ಲಿದ್ದ ಮನೆಯೊಂದರ ಜಗಲಿಯ ಮೇಲೆ ನಿಂತಿದ್ದಕ್ಕೆ ಮನೆಯ ಯಜಮಾನಿ ಕೋಪದಿಂದ ಜಗಲಿಯಿಂದ ತಳ್ಳಿದ್ದಳಂತೆ. ಹೀಗೆ ನೂರಾರು ಅವಮಾನ, ಹಿಂಸೆಯನ್ನು ಅಂಬೇಡ್ಕರ್ ಬಾಲ್ಯದಲ್ಲಿ ಸಹಿಸಿದವರು.
ಬಹುಶಃ ಅಂದು ಆ ಬಾಲಕ ಅಸ್ಪೃಶ್ಯತೆ, ಬಡತನ, ಅವಮಾನ, ಹಿಂಸೆಯನ್ನು ಮೆಟ್ಟಿ ನಿಂತು ವಿದ್ಯಾಭ್ಯಾಸ ಮಾಡದೆ ಹೋಗಿದ್ದರೆ ಇವತ್ತು ಈ ಅಖಂಡ ಭಾರತದಲ್ಲಿ ಮರೆಯಲಾರದ ಚೇತನವೊಂದು ಸೃಷ್ಟಿಯಾಗುತ್ತಿರಲಿಲ್ಲವೇನೋ ಎಂದೆನಿಸುತ್ತದೆ.
ಅಂದಿನ ದಿನದಲ್ಲಿ ಕೆಳಜತಿಯ ಹುಡುಗನೊಬ್ಬ ಶಾಲೆಗೆ ಹೋಗಿ ಅಕ್ಷರ ಕಲಿಯುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಆದರೆ ಅಂಬೇಡ್ಕರ್ ಅವರಿಗೆ ಬಾಲ್ಯದಲ್ಲಿಯೆ ಓದಬೇಕು, ಸಾಧಿಸ ಬೇಕು ಎಂಬ ಛಲ ಇತ್ತು. ಇದಕ್ಕೆ ಹೆತ್ತವರು ನೀರೆರೆದು ಪೋಷಿಸಿದರು. ಮುಂದೆ ವಿದೇಶದಲ್ಲಿ ಕಲಿತು, ತಮ್ಮ ಸತತ ಅಧ್ಯಯನದ ಮೂಲಕ ಹಲವಾರು ಡಾಕ್ಟರೇಟ್ ಪದವಿಗಳನ್ನು ಗಳಿಸಿದರು.
ಅಂಬೇಡ್ಕರ್ ಉನ್ನತ ಶಿಕ್ಷಣ ಪಡೆದು ಭಾರತಕ್ಕೆ ಬಂದ ನಂತರವೂ ಇಲ್ಲಿ ಅದೇ ಅಸ್ಪೃಶ್ಯತೆ ಅವರನ್ನು ಅಪಮಾನಿಸಿತು. ನಂತರ ಅಂಬೇಡ್ಕರ್ ಮೂಕನಾಯಕ ಎಂಬ ಪತ್ರಿಕೆ ಆರಂಭಿಸಿ ಅದರ ಮೂಲಕ ಜನಜಗೃತಿಗೆ ಮುಂದಾದರು. ಬಹಿಷ್ಕೃತ ಹಿತಕಾರಿಣಿ ಸಭಾದಂತಹ ಸಂಘಟನೆಗಳನ್ನು ಕಟ್ಟಿ ಅಸ್ಪೃಶ್ಯತೆ ವಿರುದ್ಧ ಸಮಾನತೆಗಾಗಿ ಬೀದಿಗಿಳಿದು ಹಲವು ಹೋರಾಟ ಮಾಡಿದರು. ಇವರು ಮಾಡಿದ ಚೌದರ್ ಕೆರೆ ಚಳವಳಿಯಂತೂ ಭಾರತದ ಇತಿಹಾಸದಲ್ಲಿ ದಾಖಲಿಸುವಂಥದ್ದು. ೧೯೨೭ರ ಮಾರ್ಚ್‌ನಲ್ಲಿ ಮುಂಬೈನ ಕೋಲಾಬಾ ಜಿಯ ಮಹಾಡ್ ಕೆರೆಯ ನೀರನ್ನು ಮುಟ್ಡುವುದರ ಮೂಲಕವಾಗಿ ಜಡ್ಡುಗಟ್ಟಿದ ವ್ಯವಸ್ಥೆಗೆ ದೊಡ್ಡಪೆಟ್ಟು ಕೊಟ್ಟರು.
ನಂತರದಲ್ಲಿ ಮನುಸ್ಮೃತಿಯ ಎ ಭಾಗಗಳು ಖಂಡನರ್ಹಾವಾಗಿದೆ ಎಂದು ಮನುಸ್ಮೃತಿಯನ್ನು ಬಹಿರಂಗವಾಗಿಯೇ ಸುಟ್ಟರು. ದಲಿತರನ್ನು ಅಮಾನವೀಯ ವ್ಯವಸ್ಥೆಯಿಂದ ಹೊರ ತರಲು ದಲಿತರಿಗೆ ಕುಡಿಯಲು ನಿರಾಕರಿಸಿದ ಬಾವಿಯಿಂದ ನೀರು ತರುವುದು, ಪರಿಶಿಷ್ಟರಿಗೆ ನಿರಾಕರಿಸಿದ ದೇವಾಲಯ ಪ್ರವೇಶಿಸುವುದು ಇಂತಹ ಅಮೂಲಾಗ್ರ ಕ್ರಾಂತಿಗೆ ಮುನ್ನುಡಿ ಬರೆದರು.
ಮಹಿಳೆಯರ ಹಕ್ಕುಗಳ ರಕ್ಷಕ ಬಾಬಾ ಸಾಹೇಬ್ ಅಂಬೇಡ್ಕರ್:
ಯಾವುದೇ ಸಮುದಾಯದ ಏಳ್ಗೆಯನ್ನು ಅಳೆಯಬೇಕಾದರೆ ಆ ಸಮುದಾಯದ ಸ್ತ್ರೀಯರ ಏಳ್ಗೆಯನ್ನು ಪರಿಗಣಿಸಬೇಕು ಎಂದು ಮಹಿಳೆಯರ ಸ್ಥಿತಿಗತಿಯನ್ನು ಸಮಾಜದ ಏಳ್ಗೆಯ ಸೂಚ್ಯಂಕವಾಗಿ ಪರಿಗಣಿಸಿದ ಅಂಬೇಡ್ಕರ್, ಭಾರತದಲ್ಲಿ ಮಾನವ ಹಕ್ಕು ಹಾಗೂ ಮಹಿಳಾ ಹಕ್ಕು ಹೋರಾಟಗಳಿಗೆ ಕಾನೂನಿನ ಚೌಕಟ್ಟು ನೀಡಿದ ಮೊದಲ ನಾಯಕರಾಗಿzರೆ.
ಅವರು ಹೊರತರುತ್ತಿದ್ದ ಮೂಕನಾಯಕ ಹಾಗೂ ಬಹಿಷ್ಕೃತ ಭಾರತ ಪತ್ರಿಕೆಗಳಲ್ಲಿ ಮಹಿಳಾ ಸಮಸ್ಯೆ ಮುಖ್ಯವಾಗಿ ಚರ್ಚಿತವಾಗುತ್ತಿತ್ತು. ಮಹಾಡ್ ಸತ್ಯಾಗ್ರಹ ಮೆರವಣಿಗೆಯಲ್ಲಿ ೫೦೦ ಸ್ತ್ರೀಯರು ಪಾಲ್ಗೊಂಡಿದ್ದರು. ಕಾಳಾರಾಮ್ ದೇವಾಲಯ ಪ್ರವೇಶ ಸಂದರ್ಭದಲ್ಲಿ ಕೂಡಾ ಮಹಿಳೆಯರಿದ್ದರು ೧೯೨೭ರಲ್ಲಿ ಡಿಪ್ರೆಸ್ಟ್ ಕ್ಲಾಸ್ ವಿಮೆನ್ಸ್ ಅಸೋಸಿಯೇಷನ್ ಶುರುವಾಯಿತು. ಅದರ ಸಮಾವೇಶದಲ್ಲಿ ೩೦೦೦ ಹಿಂದುಳಿದ ಮಹಿಳೆಯರನ್ನುದ್ದೇಶಿಸಿ ಮಾತನಾಡುತ್ತಾ, ನಿಮ್ಮ ಬಟ್ಟೆ ತೇಪೆಯಿಂದ ಕೂಡಿದ್ದರೇನಾಯಿತು? ಸ್ವಚ್ಛವಾಗಿರಿ. ನಿಮ್ಮನ್ನು ನೀವೇ ಮುಟ್ಟಿಸಿಕೊಳ್ಳದವರೆಂದು ಭಾವಿಸಬೇಡಿ. ನಿಮ್ಮ ಮಕ್ಕಳನ್ನು ಅದರಲ್ಲೂ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಿ. ಮಕ್ಕಳ ಮನಸ್ಸಿನ ಕೀಳರಿಮೆ ತೆಗೆದು ಅವರಲ್ಲಿ ಆತ್ಮಗೌರವ ತುಂಬಿ. ಮಹಾನ್ ವ್ಯಕ್ತಿಗಳಾಗಲು ಹುಟ್ಟಿzರೆಂದು ಅವರನ್ನು ನಂಬಿಸಿ ಎಂದು ಕಿವಿಮಾತು ಹೇಳಿದ್ದರು.
ಅಂಬೇಡ್ಕರರ ತಾತ್ವಿಕ ಬೆಂಬಲ ಹಾಗೂ ಸಂಘಟನೆಗಳ ಬಲದೊಂದಿಗೆ ಮಹಿಳಾ ಜಗೃತಿಯ ಹೊಸ ಅಧ್ಯಾಯವೇ ಶುರುವಾಯಿತು. ಮಹಿಳೆಯರಿಗೆ ಇಂದು ಭರಪೂರ ಹಕ್ಕುಗಳಿವೆ. ಆಯೋಗವಿದೆ, ದೌರ್ಜನ್ಯಕ್ಕೆ ರಕ್ಷಣೆ ಇದೆ, ಆಸ್ತಿಯಲ್ಲಿ ಪಾಲೂ ಇದೆ. ಆಶ್ಚರ್ಯವೆಂದರೆ ಇದನ್ನೆಲ್ಲ ಭಾರತೀಯ ಮಹಿಳೆಯರಿಗೆ ನೀಡಿದ್ದು ಅದು ಬಾಬಾಸಾಹೇಬ್ ಅಂಬೇಡ್ಕರರಲ್ಲದೆ ಬೇರಾರು ಅಲ್ಲ. ಹಾಗಿದ್ದರೆ ಅಂಬೇಡ್ಕರರು ಯಾಕೆ ಮಹಿಳೆಯರಿಗೆ ಹಾಗೆ ಹಕ್ಕುಗಳನ್ನು ನೀಡಿದರು ಎಂಬ ಪ್ರಶ್ನೆ ಬರುತ್ತದೆ. ಈ ನಿಟ್ಟಿನಲ್ಲಿ ಅವರದೆ ಸ್ಪಷ್ಟನೆಯನ್ನು ಇಲ್ಲಿ ದಾಖಲಿಸುವುದಾದರೆ,
ನಮ್ಮ ಸಮಾಜದ ಆತ್ಮವಾಗಿರುವ ಲಿಂಗ ಅಸಮಾನತೆ, ವರ್ಗ ವರ್ಗಗಳ ನಡುವಿನ ಅಸಮಾನತೆ, ಇವುಗಳನ್ನು ಮುಟ್ಟದೆ ಹಾಗೆ ಬಿಟ್ಟು ಆರ್ಥಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಾನೂನು ರೂಪಿಸುವುದೆಂದರೆ ಸೆಗಣಿಯ ಗುಡ್ಡೆಯ ಮೇಲೆ ಅರಮನೆ ಕಟ್ಟಿದಂತೆ.
ಈ ದಿಸೆಯಲ್ಲಿ ಈ ದೇಶದ ಪ್ರಥಮ ಕಾನೂನು ಸಚಿವರಾಗಿ ಮಹಿಳೆಯರ ಹಕ್ಕುಗಳ ರಕ್ಷಣೆಯ ನಿಟ್ಟಿನಲ್ಲಿ ಅಂಬೇಡ್ಕರ್ ಅಂದು ರೂಪಿಸಿದ ಮಸೂದೆ ಬಗ್ಗೆ ತಿಳಿಯುವುದು ಅತ್ಯಗತ್ಯ. ಅಂಬೇಡ್ಕರ್‌ರವರು ರಚಿಸಿದ ಹಿಂದೂ ಕೋಡ್ ಬಿಲ್ ಮುಖ್ಯವಾಗಿ ೭ ಅಂಶಗಳನ್ನು ಒಳಗೊಂಡಿತ್ತು. ಅವುಗಳೆಂದರೆ;
೧.ಆಸ್ತಿಯ ಹಂಚಿಕೆ.
೨.ಆಸ್ತಿಗೆ ವಾರಸುದಾರರನ್ನು ಪಟ್ಟಿಮಾಡುವುದು.
೩.ಜೀವನಾಂಶ.
೪.ಮದುವೆ.
೫.ವಿಚ್ಛೇಧನ.
೬.ದತ್ತು ಸ್ವೀಕಾರ.
೭.ಅಪ್ರಾಪ್ತ ವಯಸ್ಕರ ಮದುವೆ.
(ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.೧೪, ಭಾಗ.೧, ಪು.೪೧). ಖಂಡಿತ, ಈ ಏಳು ಅಂಶಗಳ ಅಂಬೇಡ್ಕರರ ಅಂತಹzಂದು ಪ್ರಯತ್ನಕ್ಕೆ ಪ್ರಮುಖ ಕಾರಣ. ಈ ದೇಶದ ಮಹಿಳೆಯರು ಮತ್ತು ಮಕ್ಕಳ ಹಿತಚಿಂತನೆ ಎಂಬುದು ಮತ್ತೆ ಮತ್ತೆ ಇಲ್ಲಿ ಒತ್ತಿಹೇಳಬೇಕಾದ ಅಂಶ.
ಆಸ್ತಿಯಲ್ಲಿ ಮಹಿಳೆಯರಿಗೆ ಪಾಲು:
*ಆಸ್ತಿಯ ವಾರಸುದಾರಿಕೆ:
*ಮಹಿಳೆಯರಿಗೆ ಜೀವನಾಂಶ:
*ಮದುವೆ ಮತ್ತು ವಿಚ್ಛೇದನದ ಹಕ್ಕು:
ಹೀಗೆ ಮಹಿಳೆಯರ ರಕ್ಷಣೆಯ ನಿಟ್ಟಿನಲ್ಲಿ ಅಮೂಲಾಗ್ರ ಬದಲಾವಣೆಗಳನ್ನೊಳಗೊಂಡ ಮಸೂದೆಯನ್ನು ಅಂಬೇಡ್ಕರರು ರೂಪಿಸಿ ಸಂಸತ್ತಿನಲ್ಲಿ ಮಂಡಿಸಿದರು.
ಸಂವಿಧಾನದ ಕರಡನ್ನು ರಚಿಸುವ ಕಾರ್ಯವನ್ನು ಒಬ್ಬಂಟಿಯಾಗಿ
ನಿರ್ವಹಿಸಿದರು ಅಂಬೇಡ್ಕರ್:
ಸಂವಿಧಾನ ಕರಡು ಸಮಿತಿಗೆ ನೇಮಿಸಿದ ೭ ಜನ ಸದಸ್ಯರಲ್ಲಿ ಒಬ್ಬರು ಮಧ್ಯದಲ್ಲಿ ರಾಜೀನಾಮೆ ನೀಡಿದರು ಮತ್ತು ಆ ಜಗವನ್ನು ಮತ್ತೆ ತುಂಬಲಾಯಿತು ಎಂಬುದು ಈ ಸದನಕ್ಕೆ ತಿಳಿದಿರಬಹುದು. ಆದರೆ ಒಬ್ಬರು ಮರಣವನ್ನಪ್ಪಿದರು, ಮತ್ತೆ ಆ ಜಗಕ್ಕೆ ಯಾರನ್ನು ತುಂಬಲಿಲ್ಲ, ಮತ್ತೊಬ್ಬರು ಅಮೆರಿಕಾದ ಇದ್ದರೂ ಅವರ ಜಗವನ್ನು ಬೇರೆಯವರಿಂದ ತುಂಬಲಿಲ್ಲ, ಮತ್ತೊಬ್ಬರು ರಾಜ್ಯದ ಆಡಳಿತ ಕಾರ್ಯಗಳಲ್ಲಿ ನಿರತರಾಗಿದ್ದರು. ಮತ್ತೆ ಒಬ್ಬರು ಅಥವಾ ಇಬ್ಬರು ದೆಹಲಿಯಿಂದ ದೂರವೇ ಉಳಿದರು ಕಾರಣ ಅವರ ಆರೋಗ್ಯ ಅವರನ್ನು ಅನುಮತಿಸಲಿಲ್ಲ . ನಂತರ ಸಂವಿಧಾನದ ಕರಡನ್ನು ರಚಿಸುವ ಭಾರ ಡಾ. ಬಿ.ಆರ್ ಅಂಬೇಡ್ಕರ್ ಅವರ ಮೇಲೆ ಬಿತ್ತು ಮತ್ತು ಅವರು ಆ ಕಾರ್ಯವನ್ನು ಒಂಟಿಯಾಗಿ ನಿಭಾಯಿಸಿದ ರೀತಿ ಶ್ಲಾಘನೀಯ ಮತ್ತು ನಾವೆಲ್ಲ ಯಾವುದೇ ಅನುಮಾನಗಳಿಲ್ಲದೆ ಅವರಿಗೆ ಚಿರಋಣಿಯಾಗಿರಬೇಕು ಎಂದು ಸಂವಿಧಾನ ಸಭೆಯ ಉಪಾಧ್ಯಕ್ಷರು ಕರುಡು ರಚನಾ ಸಮಿತಿಯ ಸದಸ್ಯರು ಆಗಿದ್ದ ಶ್ರೀ ಟಿ. ಟಿ ಕೃಷ್ಣಮಾಚಾರಿ ಹೇಳಿದ್ದರು.
ಒಂದು ವರ್ಷ ಎರಡು ತಿಂಗಳ ಅವಧಿಯಲ್ಲಿ ರೂಪಗೊಂಡ ಸಂವಿಧಾನದ ಮೊದಲ ಕರಡನ್ನು ೧೯೪೮ರ ಫೆಬ್ರವರಿ ೨೧ರಂದು ಭಾರತದ ಜನತೆಯ ಮುಂದಿಟ್ಟು ಚರ್ಚೆಗೆ ಅವಕಾಶ ಕಲ್ಪಿಸಲಾಯಿತು. ಜನತೆ ಈ ಕರಡು ಸಂವಿಧಾನವನ್ನು ಚರ್ಚಿಸಿ ೭,೬೩೫ ತಿದ್ದುಪಡಿಗಳನ್ನು ಸೂಚಿಸಿದರು. ಈ ತಿದ್ದುಪಡಿಗಳನ್ನು ಪರಿಶೀಲಿಸಿ ಸೂಕ್ತವಾದಗಳನ್ನು ಒಪ್ಪಿ ೧೯೪೯ ನವೆಂಬರ್ ೨೬ರಂದು ಅಂತಿಮ ಕರಡನ್ನು ಭಾರತ ಸರ್ಕಾರಕ್ಕೆ ಸಲ್ಲಿಸಲಾಯಿತು.


ಲೇಖನ: ಲಿಂಗರಾಜು. ಡಿ
ಶಿವಮೊಗ್ಗ