ಎನ್‌ಇಎಸ್ ನೌಕರರಿಗಾಗಿ ಅಮೃತ ಕ್ರೀಡೋತ್ಸವ…

ಶಿವಮೊಗ್ಗ: ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತ ಮಹೋತ್ಸವದ ಪ್ರಯುಕ್ತ ನೌಕರರಿಗಾಗಿ ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ‘ಅಮೃತ ಕ್ರೀಡೋತ್ಸವ’ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೋಣಂದೂರಿನ ನ್ಯಾಷನಲ್ ಕಾಲೇಜಿನ ತಂಡ ಗೆಲುವು ಸಾಧಿಸಿದ್ದು, ಎಸ್.ಆರ್.ಎನ್.ಎಂ ಕಾಲೇಜಿನ ತಂಡ ರನ್ನರ್ ಅಪ್ ಗಳಾಗಿ ಸಂಭ್ರಮಿಸಿದರು.
ಪುರುಷ ವಾಲಿಬಾಲ್ ಸ್ಪರ್ಧೆ ಯಲ್ಲಿ ಜೆ.ಎನ್.ಎನ್.ಸಿ.ಇ ಟ್ರಾನ್ಸ್‌ಪೋರ್ಟ್ ವಿಭಾಗ (ಪ್ರಥಮ) ಹಾಗೂ ಎನ್‌ಇಎಸ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜು (ದ್ವಿತೀಯ), ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ನ್ಯಾಷನಲ್ ಫಾರ್ಮಸಿ ಕಾಲೇಜು (ಪ್ರಥಮ) ಹಾಗೂ ಜೆ.ಎನ್.ಎನ್.ಸಿ.ಇ ತಂಡ (ದ್ವಿತೀಯ), ಹಗ್ಗ ಜಗ್ಗಾಟ ಸ್ಪರ್ಧೆ ಯಲ್ಲಿ ಹುಂಚಾದ ರಾಷ್ಟ್ರೀಯ ಪ್ರೌಢಶಾಲೆ (ಪ್ರಥಮ), ಜೆ.ಎನ್. ಎನ್.ಸಿ.ಇ ಟ್ರಾನ್ಸ್‌ಪೋರ್ಟ್ ವಿಭಾಗದ ತಂಡ (ದ್ವಿತೀಯ) ಸ್ಥಾನ ಪಡೆದಿದೆ.


ಮಹಿಳಾ ಥ್ರೋಬಾಲ್ ಸ್ಪರ್ಧೆ ಯಲ್ಲಿ ಜೆ.ಎನ್.ಎನ್.ಸಿ.ಇ ಮಹಿಳಾ ತಂಡ (ಪ್ರಥಮ), ನ್ಯಾಷನಲ್ ಪಬ್ಲಿಕ್ ಶಾಲೆ ಮಹಿಳಾ ತಂಡ (ದ್ವಿತೀಯ), ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಬಿಆರ್ ಪ್ರಾಜೆಕ್ಟ್ ನ್ಯಾಷನಲ್ ಹೈಸ್ಕೂಲ್ (ಪ್ರಥಮ), ಜೆ.ಎನ್.ಸಿ.ಇ ತಂಡ (ದ್ವಿತೀಯ), ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ನ್ಯಾಷನಲ್ ಪಬ್ಲಿಕ್ ಶಾಲೆ (ಪ್ರಥಮ), ಕಸ್ತೂರಬಾ ಪಿಯು ಕಾಲೇಜು (ದ್ವಿತೀಯ), ಟೆನಿಕಾಯಿಟ್ ಸ್ಪರ್ಧೆಯಲ್ಲಿ ಕಸ್ತೂರಬಾ ಹೈಸ್ಕೂಲ್ (ಪ್ರಥಮ), ಹೆಚ್.ಎಸ್.ರುದ್ರಪ್ಪ ಪಿಯು ಕಾಲೇಜು (ದ್ವಿತೀಯ) ಸ್ಥಾನ ಪಡೆದಿದೆ.
ಇದರೊಂದಿಗೆ ಅಥ್ಲೆಟಿಕ್ಸ್ ಸ್ಪರ್ಧೆಗಳಾದ ನೂರು ಮತ್ತು ಇನ್ನೂರು ಮೀಟರ್ ಓಟದ ಸ್ಪರ್ಧೆ, ಉದ್ದ ಜಿಗಿತ, ಗುಂಡು ಎಸೆತ ಸ್ಪರ್ಧೆಗಳು ನಡೆಯಿತು. ಎ ವಯೋಮಾನದವರಿಗೆ ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಕ್ರೀಡೋತ್ಸವಕ್ಕೆ ಚಾಲನೆ ನೀಡಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಮಾತನಾಡಿ, ಹಿರಿಯರ ಆದರ್ಶದ ಹಾದಿಯಲ್ಲಿ ನಾವೂ ನಡೆಯ ಬೇಕಿದೆ. ಕ್ರೀಡೆಗಳಲ್ಲಿ ಭಾಗವಹಿಸು ವಿಕೆಗೆ ವಯಸ್ಸಿನ ಮಿತಿಯಿಲ್ಲ. ಕ್ರೀಡಾತ್ಮಕ ಮನೋಭಾವ ನಿಮ್ಮದಾಗಲಿ ಎಂದು ಆಶಿಸಿದರು.
ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ ಸ್ವಾಗತಿಸಿದರು, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಪ್ರಮಾಣ ವಚನ ಬೋಧಿಸಿದರು. ಉಪಾಧ್ಯಕ್ಷ ಸಿ.ಆರ್.ನಾಗರಾಜ, ಖಜಂಚಿಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಅನಂತದತ್ತಾ, ಎನ್.ಟಿ. ನಾರಾಯಣರಾವ್, ಹೆಚ್.ಸಿ. ಶಿವಕುಮಾರ್, ಮಧುರಾವ್, ಸೀತಾಲಕ್ಷ್ಮೀ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.