ರೋಟರಿ ಸಂಸ್ಥೆ ಸೇವೆಯ ವಿವಿಧ ಮುಖವನ್ನೂ ಗುರುತಿಸಲಿ: ಕಸಬಿ

ಸಾಗರ: ಸಮಾಜಕ್ಕೆ ಸೇವೆಯ ವಿವಿಧ ಮುಖಗಳಲ್ಲಿ ಸೇವಾ ಕಾರ್ಯಗಳು ಸಲ್ಲುತ್ತಿವೆ. ರೋಟರಿ ಸಂಸ್ಥೆಯೂ ವಿವಿಧ ಸೇವಾ ಕಾರ್ಯದಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿರುವವರನ್ನು ಗುರುತಿಸಿ ಗೌರವಿಸಬೇಕು ಎಂದು ರೋಟರಿ ಉಪ ರಾಜ್ಯಪಾಲ ಗುಡದಪ್ಪ ಕಸಬಿ ಹೇಳಿದರು.
ಇಲ್ಲಿನ ರೋಟರಿ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸೇವೆಗೆ ನಿರ್ಧಿಷ್ಟ ಹುz ಇರಬೇಕು ಎಂಬುದಿಲ್ಲ. ಬಾಣಸಿಗರೂ ಹಸಿದವರಿಗೆ ಅನ್ನ ನೀಡುವ ಮಹತ್ಕಾರ್ಯದಲ್ಲಿ ತೊಡಗಿಕೊಂಡಿ ರುತ್ತಾರೆ. ರುಚಿಕರ ಭೋಜನವನ್ನು ಸಿದ್ಧಪಡಿಸಿ, ಹಸಿವು ನಿವಾರಿಸುವ ಅವರ ಸೇವೆಯನ್ನು ಮರೆಯುವಂತಿಲ್ಲ. ಇಂಥವರನ್ನು ಗುರುತಿಸಿರುವುದು ಶ್ಲಾಘನೀಯ ಎಂದರು.
ಹಿರಿಯ ಬಾಣಸಿಗರಾದ ಮಹಾಬಲೇಶ್ವರ ಕೆ.ಎನ್., ಗಣಪತಿ ಸಿ.ವಿ. ದಂಪತಿ ಮತ್ತು ಸುಬ್ಬರಾವ್ ಎಲ್.ಸಿ. ದಂಪತಿ ಅವರನ್ನು ಅವರ ಉತ್ತಮ ಸೇವೆ ಪರಿಗಣಿಸಿ ಸನ್ಮಾನಿಸಲಾಯಿತು.
ರೋಟರಿ ಸಂಸ್ಥೆ ಅಧ್ಯಕ್ಷ ಆದಿತ್ಯ ಬಿ.ಸಿ. ಅಧ್ಯಕ್ಷತೆ ವಹಿಸಿ ಮಾತ ನಾಡಿ, ರೋಟರಿ ಸಂಸ್ಥೆಯು ಜನಪರವಾದ ಹಲವಾರು ಸೇವಾ ಕಾರ್ಯಗಳನ್ನು ನಡೆಸುತ್ತ ಬಂದಿದೆ. ಸಮಾಜದ ಎಲ್ಲ ವರ್ಗದವರಿಗೂ ನಮ್ಮ ಸೇವೆಯ ಫಲ ಸಿಗುವಂತಾಗ ಬೇಕು. ನಿಸ್ವಾರ್ಥ ಸೇವೆಯಲ್ಲಿ ಧನ್ಯತೆಯ ಅನುಭೂತಿ ದೊರಕುತ್ತದೆ ಎಂದರು.
ವೆಂಕಟೇಶ್ ಜಿ.ಎಸ್. ಸನ್ಮಾನಿತರನ್ನು ಪರಿಚಯಿಸಿದರು. ಸನ್ಮಾನಿತರು ಅನಿಸಿಕೆ ತಿಳಿಸಿದರು.
ರೋಟರಿ ಸಂಸ್ಥೆಯ ಪ್ರಮುಖ ರಾದ ಕೆ.ಎನ್.ಶ್ರೀಧರ್, ಶಾಂತಕುಮಾರ್, ಡಾ.ಪುಟ್ಟಪ್ಪ ಬೇತೂರು, ಡಾ.ಬಿ.ಜಿ.ಸಂಗಮ್, ಗುರುಪ್ರಸಾದ್, ಮಹೇಶ್ ಅಂಕದ, ಎಂ.ಕೆ.ಅಶ್ವಥ್ ನಾರಾಯಣ, ಶಾರೀಶ್ ಬೀ.ಈ., ಹರೀಶ್ ಎ.ಎಸ್., ನರೇಂದ್ರ, ಪ್ರಕಾಶ್, ರಾಜೀವ್, ಗೌತಮ್ ಕೆ.ಎಸ್., ಸಂತೋಷ್ ಪ್ರಭು, ರೋಟರಿ ಇನ್ಹರ್‌ವೀಲ್ ಸಂಸ್ಥೆ ಅಧ್ಯಕ್ಷೆ ಪೂರ್ಣಿಮಾ ಗುರುಪ್ರಸಾದ್, ಶಶಿಕಲಾ ಮತ್ತಿತರರು ಹಾಜರಿದ್ದರು.
ಪ್ರವೀಣ ವೆಂಕಟರಾವ್ ಪ್ರಾರ್ಥಿಸಿದರು. ವೆಂಕಟರಾವ್ ಸ್ವಾಗತಿಸಿದರು. ಜಗದೀಶ್ ವಂದಿಸಿ ದರು. ಸುಶೀಲಾ ವೆಂಕಟೇಶ್ ನಿರೂಪಿಸಿದರು.