ಶ್ರೀ ಶಿವಶರಣೆ, ಭೀಮಾಂಬಿಕಾ ದೇವಿಯ ಪುರಾಣ ಪ್ರವಚನ..
ಬಟಪ್ಪನಹಳ್ಳಿ ಗ್ರಾಮದಲ್ಲಿ ಶ್ರೀ ಶಿವಶರಣೆ, ಭೀಮಾಂಬಿಕಾ ದೇವಿಯ ಪುರಾಣ ಪ್ರವಚನ ಕುಕನೂರು ತಾಲೂಕಿನ ಬಟಪನ ಹಳ್ಳಿ ಗ್ರಾಮದಲ್ಲಿ ಏ.೧ ರಿಂದ ಪ್ರಾರಂಭವಾಗಿದ್ದು ಪ್ರತಿದಿನ ಸಹಸ್ರಾರು ಭಕ್ತರು ಪುರಾಣ ಪ್ರವಚ ನದಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುತ್ತಿzರೆ.
ಪ್ರತಿದಿನ ಸಾಯಂಕಾಲ ಶ್ರೀ ಭೀಮಾಂಬಿಕಾ ದೇವಿ ದೇವಸ್ಥಾನ ದಲ್ಲಿ ಆಯೋಜಿಸಿರುವ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಶುಕ್ರವಾರ ರಾತ್ರಿ ಪುರಾಣ ಪ್ರವಚನದಲ್ಲಿ ಶ್ರೀ ಭೀಮಾಂಬಿಕಾ ದೇವಿ ಹಾಗೂ ಹೋಗದಾಡಪ್ಪ ಇವರ ಮದುವೆ ಸಂದರ್ಭ ದೇವಸ್ಥಾನದಲ್ಲಿ ಆಯೋಜಿಸಿದ್ದು ಗ್ರಾಮಸ್ಥರಲ್ಲ ಸೇರಿಕೊಂಡು ಭೀಮಾಂಬಿಕಾ ದೇವಿಯ ಮದುವೆ ಸಮಾರಂಭದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದ್ದೂರಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಇಡೀ ದಿನ ತಮ್ಮ ಮನೆಯ ಮದುವೆಯಂತೆ ಈ ಧಾರ್ಮಿಕ ಕಾರ್ಯಕ್ರಮ ನೆರವೇರಿದ್ದು ಗ್ರಾಮದ ಮುತ್ತೈದೆರೆಲ್ಲ ಸೇರಿ ವಿವಿಧ ರೀತಿಯ ಸಂಪ್ರದಾಯಗಳನ್ನು ಆಚರಣೆ ಮಾಡುವುದರೊಂದಿಗೆ ವಿಜಂಭಣೆಯಿಂದ ಭೀಮಾಂಬಿಕಾ ದೇವಿಯ ಮದುವೆಯ ಧಾರ್ಮಿಕ ಕಾರ್ಯಕ್ರಮವನ್ನು ಪುರಾಣ ಪ್ರವಚನ ಸಂದರ್ಭದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಈ ಸಂದರ್ಭದಲ್ಲಿ ನಡೆದಿದ್ದ ಜನರಿಗೆಲ್ಲ ವಿಶೇಷ ಸಿಹಿ ತಿನಿಸುಗಳ ಭೋಜನ ವ್ಯವಸ್ಥೆಯನ್ನು ಆಯೋಜನೆ ಮಾಡಲಾಗಿತ್ತು .