ತರೀಕೆರೆ ಕ್ಷೇತ್ರದಿಂದ ಗೋಪಿಕೃಷ್ಣಗೆ ಕಾಂಗ್ರೆಸ್ಟಿಕೆಟ್ ನೀಡಿ: ಮಡಿವಾಳರ ಮನವಿ…

ತರೀಕೆರೆ: ತರೀಕೆರೆ ವಿಧಾನ ಸಭಾ ಕ್ಷೇತ್ರದಿಂದ ಹೆಚ್.ಎಂ. ಗೋಪಿಕೃಷ್ಣ ಅವರಿಗೆ ೨೦೨೩ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ದಾವಣಗೆರೆ ಜಿ ಮಡಿವಾಳ ಮಾಚಿದೇವ ಸಂಘದ ಪದಾಧಿಕಾರಿಗಳು ಕಾಂಗ್ರೆಸ್ ಮುಖಂಡರು, ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದರು.
ಗೋಪಿಕೃಷ್ಣ ಮೂಲತಃ ತರೀಕೆರೆ ತಾಲ್ಲೂಕು ಹುಣಸಘಟ್ಟದ ಗ್ರಾಮದ ವಾಸಿಗಳಾಗಿದ್ದು, ಸುಮಾರು ೧೬ ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಅಲ್ಲದೇ ಕಳೆದ ಎರಡು ಬಾರಿ ತರೀಕೆರೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅತ್ಯಲ್ಪ ಮತಗಳ ಅಂತರದಿಂದ ಪರಾಭವಗೊಂಡಿzರೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು ೧೫ ಲಕ್ಷಕ್ಕೂ ಹೆಚ್ಚು ಮಡಿವಾಳ ಸಮಾಜ ಬಾಂಧವರು ಇದ್ದು, ನಮ್ಮ ಸಮಾಜದವರು ಕರ್ನಾಟಕ ರಾಜ್ಯದ ಯಾವುದೇ ವಿಧಾನಸಭಾ ಕ್ಷೇತ್ರದಿಂದಲೂ ಸಹ ೨೦೨೩ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪರ್ಧಿಸಲು ಅವಕಾಶ ಕೇಳಿರುವುದಿಲ್ಲ. ಆದ್ದರಿಂದ ೨೨೪ ಕ್ಷೇತ್ರಗಳ ಪೈಕಿ ತರೀಕೆರೆ ವಿಧಾನಸಭಾ ಕ್ಷೇತ್ರದಿಂದ ಹೆಚ್.ಎಂ.ಗೋಪಿಕೃಷ್ಣ ಅವರಿಗೆ ೨೦೨೩ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.
ಎಸ್.ಎಸ್.ಮಲ್ಲಿಕಾರ್ಜುನ್ ಅವರು ಮಾತನಾಡಿ, ಈ ಕುರಿತು ಕೇಂದ್ರ ಮತ್ತು ರಾಜ್ಯದ ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚಿಸುವುದಾಗಿ, ಅಲ್ಲದೇ ಸೂಕ್ತ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರು.
ಮಡಿವಾಳ ಸಮುದಾಯದ ಜಿ ಘಟಕದ ಅಧ್ಯಕ್ಷ ಎಂ.ನಾಗೇಂದ್ರಪ್ಪ, ಉಪಾಧ್ಯಕ್ಷ ಪಿ.ಮಂಜುನಾಥ್, ಖಜಂಚಿ ಸುರೇಶ್ ಕೋಗುಂಡೆ, ಸಹ ಕಾರ್ಯದರ್ಶಿ ಆರ್.ಎನ್. ಧನಂಜಯ, ಪತ್ರಕರ್ತ ಎಂ.ವೈ.ಸತೀಶ್, ನಿರ್ದೇಶಕರಾದ ರವಿ ಚಿಕ್ಕಣ್ಣ, ರುದ್ರೇಶ್, ಗುಡ್ಡಪ್ಪ, ದುಗ್ಗಪ್ಪ, ಅಂಜಿನಪ್ಪ ಪೂಜರ್, ಸುಭಾಷ್, ಅಜ್ಜಯ್ಯ, ಎನ್.ಪರಶುರಾಮ, ರಾಜಕುಮಾರ, ಗೋಪಾಲ, ಬೊಮ್ಮಣ್ಣ ಇತರರು ಇದ್ದರು.