ಭದ್ರಾವತಿ ತಾಲೂಕು ಕಛೇರಿ ಅಧಿಕಾರಿ- ಸಿಬ್ಬಂದಿಗಳಿಂದ ಮಿತಿಮೀರಿದ ಭ್ರಷ್ಟಾಚಾರ: ಷಡಾಕ್ಷರಪ್ಪ
ಭದ್ರಾವತಿ: ಭದ್ರಾವತಿ ತಾಲ್ಲೂಕು ಕಚೇರಿಯ ಅಧಿಕಾರಿ ಸಿಬ್ಬಂದಿಗಳು ಭ್ರಷ್ಟಾಚಾರ ದಲ್ಲಿ ಮುಳುಗಿದ್ದು, ಭೂಮಿಯ ಸ್ವಾಧೀನಾನುಭವ ಹೊಂದಿರದ ವರಿಗೆ ಭೂ ಮಂಜೂರಾತಿ ಮಾಡುವುದು, ಮಂಜೂರಾತಿಯ ದಾಖಲೆಗಳೇ ಇಲ್ಲದಿದ್ದರೂ ಅಕ್ರಮ ವಾಗಿ ಪೋಡು ಮಾಡಿ, ಖಾತೆ ಮಾಡಿ ಕೊಟ್ಟಿರುತ್ತಾರೆ ಎಂದು ನ್ಯಾಯವಾದಿ ಜಿ.ಆರ್. ಷಡಾಕ್ಷರಪ್ಪ ಸುದ್ದಿಗೋಷ್ಟಿಯಲ್ಲಿ ಗಂಭೀರ ಆರೋಪ ಮಾಡಿದರು.
ತಾಲ್ಲೂಕಿನಲ್ಲಿ ಇಂತಹ ಹಲವು ಪ್ರಕರಣಗಳಿವೆ. ಹೊಳೆಹೊನ್ನೂರು ಹೋಬಳಿಯ ಜಂಬರಗಟ್ಟ ಗ್ರಾಮದ ಸರ್ವೆ ನಂ.೭೬/೧ರಲ್ಲಿ ಹಿಂದಿನಿಂದಲೂ ಗ್ರಾಮಸ್ಥರು ಶವಸಂಸ್ಕಾರ ಮಾಡುತ್ತಾ ಬರುತ್ತಿ zರೆ. ಸದರಿ ಜಗವನ್ನು ಸ್ಮಶಾನಕ್ಕೆ ಮಂಜೂರು ಮಾಡುವಂತೆ ಗ್ರಾಮಸ್ಥರು ಅರ್ಜಿ ಸಲ್ಲಿಸಿದರೆ, ಈ ಜಗವನ್ನು ಬಗರ್‌ಹುಕುಂ ಮಂಜೂರಾತಿ ಮಾಡಲಾಗಿದೆ ಎಂದು ಹಿಂಬರಹ ನೀಡಿರುತ್ತಾರೆ. ಸಾರ್ವಜನಿಕ ಉzಶಕ್ಕೆ ಬಳಸುತ್ತಿದ್ದ ಜಗವನ್ನು ಅನಧಿಕೃತವಾಗಿ ಪೋಡು ಮಾಡಿ ಕ್ರಯ ಮಾಡಲಾ ಗಿದೆ. ನಂತರ ಖಾತೆ ಮಾಡಲಾಗಿದೆ. ಆದರೆ, ತಾಲ್ಲೂಕು ಕಚೇರಿಯಲ್ಲಿ ಸದರಿ ಜಮೀನು ಮಂಜೂರಾತಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಲಭ್ಯ ಇರುವುದಿಲ್ಲ. ಸದರಿ ಜಗವನ್ನು ಗ್ರಾಮಸ್ಥರು ನೂರಾರು ವರ್ಷಗಳಿಂದ ಸ್ಮಶಾನವನ್ನಾಗಿ ಬಳಸಿಕೊಳ್ಳುತ್ತಿzರೆ ಎಂದರು.
ಸದರಿ ಜಗದಲ್ಲಿ ಯಾವುದೇ ವ್ಯಕ್ತಿ ಕೃಷಿ ಚಟುವಟಿಕೆ ನಡೆಸುತ್ತಿಲ್ಲ, ಅಥವಾ ಸ್ವಾಧೀನಾನುಭವದಲ್ಲೂ ಇಲ್ಲ. ಆದರೆ, ತಾಲ್ಲೂಕು ಕಚೇರಿಯ ಅಧಿಕಾರಿ ಸಿಬ್ಬಂದಿಗಳು ಮನ ಬಂದಂತೆ ದಾಖಲೆ ಸೃಷ್ಟಿಸಿ ಸರ್ಕಾರದ ಜಗಗಳನ್ನು ಕಬಳಿಸುವ ವ್ಯಕ್ತಿಗಳಿಗೆ ಸಹಕಾರ ನೀಡುತ್ತಿzರೆ ಎಂದರು.
ಭದ್ರಾವತಿ ತಾಲ್ಲೂಕಿನ ಕಸಬಾ ೧ನೇ ಹೋಬಳಿ ಮಜ್ಜಿಗೇನಹಳ್ಳಿಯ ಸರ್ವೆ ನಂ.೨೨ರಲ್ಲಿ ೫೪ ಎಕರೆ ೨೫ ಗುಂಟೆ ೧೦ ಸೆಂಟ್ ಜಮೀನಿದ್ದು, ಇದರಲ್ಲಿ ದನಗಳ ಮುಫತ್ತು ೯ ಎಕರೆ ೧೮ ಗುಂಟೆ ಇತ್ತು. ಸರ್ವೆ ನಂ.೨೨ನ್ನು ೨೦೨೨ರಲ್ಲಿ ಪೋಡಿ ಮಾಡಿ ಒಟ್ಟುಗೂಡಿಸುವ ಸಂದರ್ಭದಲ್ಲಿ ದನಗಳ ಮುಫತ್ತು ಜಗವನ್ನು ಈ ಹಿಂದಿನ ತಹಶೀಲ್ದಾರ್‌ವೋರ್ವರು ಖಾಸಗಿ ವ್ಯಕ್ತಿಗಳಿಗೆ ಕಾನೂನು ಬಾಹಿರವಾಗಿ ಖಾತೆ-ಪಹಣಿ ಮಾಡಿ ಕೊಟ್ಟಿzರೆ ಎಂದು ಆರೋಪಿಸಿದರಲ್ಲದೇ, ಗುಡುಮ ಘಟ್ಟೆ ಸರ್ವೆ ನಂ.೪೩ರಲ್ಲೂ ಕೂಡ ಅಕ್ರಮ ನಡೆಸಲಾಗಿದೆ ಎಂದು ದೂರಿದರು.
ಭದ್ರಾವತಿ ತಾಲ್ಲೂಕು ಬಿಳಿಕಿ ಗ್ರಾಮದ ಸರ್ವೆ ನಂ.೬೨ರಲ್ಲಿ ೨೮ ಎಕರೆ ೧ ಗುಂಟೆ ಕೆರೆ ಇದ್ದು, ಈ ಕೆರೆಯ ಸುಮಾರು ೧ ಎಕರೆ ಜಗವನ್ನು ಒತ್ತುವರಿ ಮಾಡಿ ಖಾಸಗಿ ಶಾಲಾ ಕಟ್ಟಡವನ್ನು ನಿರ್ಮಾಣ ಮಾಡಲು ಅವಕಾಶ ಕೊಡಲಾಗಿದೆ. ಈ ಬಗ್ಗೆ ಹಲವಾರು ಬಾರಿ ಸಾರ್ವಜನಿಕರು, ಗ್ರಾಮಸ್ಥರು ದೂರು ನೀಡಿದರೂ ಒತ್ತುವರಿ ತೆರವುಗೊಳಿಸಿಲ್ಲ. ಸರ್ವೆ ಮಾಡಿದ ಸರ್ವೇಯರುಗಳು ಒತ್ತುವರಿಯಾ ಗಿಲ್ಲ ಎಂದು ಸುಳ್ಳು ವರದಿ ನೀಡಿ zರೆ. ಇತ್ತೀಚೆಗೆ ಪುನರ್ ಸರ್ವೆ ಮಾಡಿಸಿದಾಗ ಒತ್ತುವರಿಯಾಗಿ ರುವುದು ಕಂಡುಬಂದಿರುತ್ತದೆ ಎಂದು ದೂರಿದರು.
ಈ ರೀತಿ ತಾಲ್ಲೂಕಿನಲ್ಲಿ ಸರ್ಕಾರಿ ಭೂಮಿ ಕಬಳಿಕೆಗೆ ಪ್ರತ್ಯಕ್ಷವಾಗಿ ಬೆಂಬಲವಾಗಿ ನಿಂತಿದ್ದ ಅಂದಿನ ತಹಶೀಲ್ದಾರ್ ಮತ್ತು ತಾಲ್ಲೂಕು ಕಚೇರಿಯ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಅಕ್ರಮವಾಗಿ ಭೂ ಮಂಜೂರಾತಿ, ಖಾತೆ-ಪಹಣಿ ಮಾಡಿರುವುದನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಬಿ.ಎನ್. ರಾಜು, ಚಿತ್ರಪ್ಪ ಯರಬಾಳ, ಎಂ.ಅಣ್ಣಪ್ಪ ಉಪಸ್ಥಿತರಿದ್ದರು.