ನ.೧೪ರಿಂದ ೪ದಿನ ಬಾಕ್ಸ್ ಕ್ರಿಕೆಟ್ ಟೂರ್ನಿ; ೨.೯ ಲಕ್ಷ ನಗದು -ಯಮಹಾ ಆರ್ಡಿಎಕ್ಸ್ ಬೈಕ್ ಬಹುಮಾನ: ವಿನ್ಸೆಂಟ್…
ಶಿವಮೊಗ್ಗ : ಸ್ಮಾರ್ಟ್ ಶಿವಮೊಗ್ಗ ಡೆವಲಪರ್ಸ್ ಅಂಡ್ ಬಿಲ್ಡರ್ಸ್ ಪ್ರಾಯೋಜಕತ್ವದಲ್ಲಿ, ಸಿಹಿಮೊಗ್ಗೆ ಕ್ರೀಡಾ ಮತ್ತು ಸಾಂಸ್ಕತಿಕ ಕ್ಲಬ್ ಹಾಗೂ ಬಾಂಡ್ ಇಲೆವೆನ್ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ನ.೧೪,೧೫,೧೬ ಮತ್ತು ೧೭ರಂದು ಗೋಪಾಳ ಮೈದಾನದಲ್ಲಿ ೧೪ನೇ ಬಾಕ್ಸ್ ಕ್ರಿಕೆಟ್ ೩೦ (ಯಾರ್ಡ್) ಮಿನಿ ಪಿಚ್ ಹೊನಲು ಬೆಳಕಿನ ಪಂದ್ಯಕೂಟವನ್ನು ಆಯೋಜಿಸಿದೆ ಎಂದು ಜಿ ಬಿಜೆಪಿ ಮುಖಂಡ ವಿನ್ಸೆಂಟ್ ರೋಡ್ರಿಗಸ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಈ ಪಂದ್ಯಾವಳಿಯಲ್ಲಿ ರಾಜ್ಯದ ೧೮ ತಂಡ, ಹೊರ ರಾಜ್ಯದ ೬ ತಂಡ ಹಾಗೂ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಯ ೨೦ ತಂಡ ಸೇರಿದಂತೆ ಒಟ್ಟು ೪೪ ತಂಡಗಳು ಭಾಗವಹಿಸುತ್ತಿವೆ ಎಂದರು.
ಪ್ರಥಮ ಬಹುಮಾನ ೧,೭೭,೭೭೭, ದ್ವಿತೀಯ ೭೭,೭೭೭ ಹಾಗೂ ತೃತೀಯ ೩೭,೭೭೭ ನಗದು ಬಹುಮಾನದ ಜೊತೆಗೆ ಟ್ರೋಫಿ ನೀಡಲಾಗುವುದು. ಮ್ಯಾನ್ ಆಫ್ ದಿ ಸೀರಿಸ್ಗೆ ಯಮಹಾ ಆರ್ಡಿಎಕ್ಸ್ ಬೈಕ್ನ್ನು ಬಹುಮಾನವಾಗಿ ನೀಡಲಾಗುತ್ತಿದೆ ಎಂದರು.ಪ್ರವೇಶ ಉಚಿತವಿರುತ್ತದೆ ಎಂದರು.
ನ.೧೪ರ ಸಂಜೆ ೫ಕ್ಕೆ ಪಂದ್ಯಾವಳಿಯ ಉದ್ಘಾಟನೆ ಬೆಕ್ಕಿನ ಕಲ್ಮಠದ ಡಾ.ಶ್ರೀಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಮಲಾನ ಅಬ್ದುಲ್ ರೆಹಮಾನ್, ಸ್ಟಿಫನ್ ಅಲ್ಬೂಕರ್ಕ್ ಅವರ ಸಾನಿಧ್ಯದಲ್ಲಿ ಜರುಗಲಿದೆ.
ಜಿ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕರಾದ ಎಸ್.ಎನ್.ಚನ್ನಬಸಪ್ಪ ಇನ್ನಿತರ ಗಣ್ಯರಿರುತ್ತಾರೆ ಎಂದರು.
ನ.೧೭ರಂದು ಪಂದ್ಯದ ವೇಳೆ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರ ಹುಟ್ಟುಹಬ್ಬ ಆಚರಿಸುವ ಮೂಲಕ ಶುಭಾಶಯ ಸಲ್ಲಿಸಲಾಗುವುದು ಎಂದರು.
ಪ್ರಮುಖರಾದ ತರುಣ್ಶೆಟ್ಟಿ, ಯೋಗೇಶ್ ಗೌಡ, ಚಿರಂಜೀವಿ ಬಾಬು, ಗೀತೇಂದ್ರ ಗೌಡ, ಸೈಪು, ಪ್ರದೀಪ್ ಕಾವಡ್ ಇನ್ನಿತರರಿದ್ದರು.