ಎನ್‌ಜೆಆರ್‌ರಿಗೆ ಭಾವನಾತ್ಮಕ ನಮನ….

4-(3)

ಶಿವಮೊಗ್ಗ : ನಗರದ ವೀರಶೈವ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಿದ್ದ ವೀರಶೈವ ಸಮಾಜದ ಮುಖಂಡರು ಹಾಗೂ ಕುಟುಂಬದ ಆತ್ಮೀಯರಾದ ಎನ್.ಜೆ. ರಾಜಶೇಖರ್ ಅವರ ಶಿವಗಣರಾಧನೆ ಹಾಗೂ ಶ್ರದ್ಧಾಂಜಲಿ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಪಾಲ್ಗೊಂಡು ಭಾವನಾತ್ಮಕ ನಮನ ಸಲ್ಲಿಸಿದರು.
ಬಾಳೆಹೊನ್ನೂರಿನ ಪರಮ ಪೂಜ್ಯ ಶ್ರೀಮದ್ ರಂಭಾಪುರಿ ಜಗದ್ಗುರು ವೀರಸಿಂಹಾಸನಾದೀಶ್ವರ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ದಿವ್ಯ ಸಾನಿಧ್ಯ ವಹಿಸಿದ್ದು, ವಿವಿಧ ಮಠಾ ಧೀಶರುಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಹಾಜರಿದ್ದ ಸಮಸ್ತ ಮುಖಂಡರು ಹಾಗೂ ಗಣ್ಯಾತಿ ಗಣ್ಯ ರಿಂದ ದಿ. ಎನ್.ಜೆ. ರಾಜಶೇಖರ್ ಅವರ ಕುರಿತು ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು. ಪ್ರತಿಯೊಬ್ಬರ ಮಾತಿನಲ್ಲಿ ಅವರ ಗುಣ, ಸ್ವಭಾವ, ಸ್ಪಂದನೆ ಕುರಿತ ಅಂಶಗಳು ಹೆಚ್ಚಾಗಿ ಕೇಳಿ ಬಂದಿದ್ದು ಅವರು ಜನರ ನಡುವೆ ಬೆಳೆಸಿಕೊಂಡಿದ್ದ ಆತ್ಮೀಯತೆ ಮತ್ತು ನಿರಂತರ ಒಡನಾಟಕ್ಕೆ ಸಾಕ್ಷಿಯಾಯಿತು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಎನ್.ಜೆ. ರಾಜಶೇಖರ್ ಅವರ ಅಗಲಿಕೆ ವೀರಶೈವ ಸಮುದಾಯಕ್ಕೆ ಮಾತ್ರವಲ್ಲದೆ ಸಮಸ್ತ ಸಮಾಜಕ್ಕೆ ತುಂಬಲಾರದ ನಷ್ಟ ಎಂದಲ್ಲದೇ, ಅವರು ಪಕ್ಷಕ್ಕಾಗಿ ಮತ್ತು ಸಮಾಜದ ಏಳಿಗೆಗಾಗಿ ಅವಿರತ ಶ್ರಮಿಸಿರುವುದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.