ವಿಕಿರಣಶಾಸ್ತ್ರಜ್ಞರ ಸೇವೆ ಅಪಾರ: ಡಾ.ಸುಧಾಕರ್

sudhakar

ಹೊನ್ನಾಳಿ: ಬೆನಕನಹಳ್ಳಿಯ ಶ್ರೀ ವಿನಾಯಕ ಪ್ರೌಢಶಾಲೆಯ ಆರೋಗ್ಯ ಕ್ಲಬ್ ವತಿಯಿಂದ ‘ವಿಶ್ವ ರೇಡಿಯೋಗ್ರಫಿ ದಿನ’ ಆಚರಿಸಲಾಯಿತು.
ಶಾಲಾ ಆರೋಗ್ಯ ಕ್ಲಬ್ಬಿನ ಸಂಚಾಲಕ ಡಾ. ಸುಧಾಕರ. ಜಿ.ಲಕ್ಕವಳ್ಳಿ ಅವರು ಮಾತನಾಡಿ, ಆರೋಗ್ಯ ವ್ಯವಸ್ಥೆಯಲ್ಲಿ ರೇಡಿಯೊ ಗ್ರಾಫರ್ ಮತ್ತು ವಿಕಿರಣಶಾಸ್ತ್ರ ತಂತ್ರಜ್ಞರ ಪ್ರಮುಖ ಪಾತ್ರವನ್ನು ಗುರುತಿಸಲಿರುವ ದಿನವೇ ವಿಶ್ವ ರೇಡಿಯೋಗ್ರಫಿ ದಿನ ಎಂದರು.
೧೮೯೫ರಲ್ಲಿ ಜರ್ಮನಿಯ ಭೌತಶಾಸ್ತ್ರಜ್ಞ ವಿಲ್ಹೆಲ್ಮ್ ಕಾನ್ರಾಡ್ ರೋಂಟ್ಜೆನ್‌ರವರಿಂದ ಎಕ್ಸರೆ ಕಿರಣಗಳ ಆವಿಷ್ಕಾರವಾಗಿ ವೈದ್ಯಕೀಯ ಚಿತ್ರಣದಲ್ಲಿನ ಪ್ರಗತಿಗೆ ದಾರಿ ಮಾಡಿಕೊಟ್ಟಿತು ಇದು ಆಧುನಿಕ ಆರೋಗ್ಯ ರಕ್ಷಣೆಯ ಅತ್ಯಗತ್ಯ ಅಂಶವಾಗಿದೆ. ಶಸ್ತ್ರಚಿಕಿತ್ಸೆ ಇಲ್ಲದೆ ಮಾನವ ದೇಹದೊಳಗೆ ನೋಡಲು ಹಾಗೂ ವಿವಿಧ ವೈದ್ಯಕೀಯ ಪರಿಸ್ಥಿತಿಗಳನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ವೈದ್ಯರಿಗಿದು ಸಹಾಯಕ ಇದರ ಹಾಗೂ ಈ ಕೆಲಸ ನಿರ್ವಹಿಸು ವವರ ಸೇವೆ ಅಪಾರ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀಮತಿ ಮಮತ, ಪ್ರವೀಣ್, ಶಾಲಾ ವಿದ್ಯಾರ್ಥಿಗಳು ಹಾಜರಿದ್ದು ಸಂಘದ ಪದಾಧಿಕಾರಿಗಳಾದ ಕು.ವಿದ್ಯಾ ಸ್ವಾಗತಿಸಿ, ಕು. ಮನೋಜ್ ಕುಮಾರ್ ನಿರೂಪಿಸಿ ಹಾಗೂ ಕು.ಲಕ್ಷ್ಮೀಬಾಯಿ ವಂದಿಸಿದರು.