ಕ್ರಿಕೆಟ್: ಉತ್ತಮ ಪ್ರದರ್ಶನ ನೀಡಿದ ಹೊನ್ನಾಳಿಯ ಕ್ರೀಡಾಪಟುಗಳು…

cricketN10p1

ಹೊನ್ನಾಳಿ: ಶಿವಮೊಗ್ಗದಲ್ಲಿ ನಡೆಯುತ್ತಿರುವ ೧೪ ವರ್ಷದೊಳಗಿನ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಮೆಂಟಲ್ಲಿ ಹೊನ್ನಾಳಿಯ ವೈಎಂಸಿ ಕ್ರಿಕೆಟ್ ಕ್ಲಬ್‌ನ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿzರೆ.
ಕೋಚ್ ಸತೀಶ್ ಭಾರ್ಗವ್ ನೇತೃತ್ವದಲ್ಲಿ ವೈಎಂಸಿ ಕ್ರಿಕೆಟ್ ತಂಡವು ಶಿವಮೊಗ್ಗದ ನವುಲೆ ಹತ್ತಿರವಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ೪ ಪಂದ್ಯಗಳನ್ನಾಡಿ ೨ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಉತ್ತಮ ಪ್ರದರ್ಶನವನ್ನು ತೋರಿದೆ. ಈ ಟೂರ್ನಿಯಲ್ಲಿ ಶಿವಮೊಗ್ಗ, ಹಾಸನ, ಭದ್ರಾವತಿ, ತೀರ್ಥಹಳ್ಳಿ ಸೇರಿದಂತೆ ಒಟ್ಟು ೨೪ ತಂಡಗಳು ಭಾಗವಹಿಸಿದ್ದವು.
ತಂಡದ ಕ್ಯಾಪ್ಟನ್ ಮಹ್ಮದ್ ಜೈನ್, ನಿಖಿಲ್ ಎ ಶೆಟ್ಟರ್, ಕುಶಾಲ್ ದೊಡ್ಮನಿ, ಸಾತ್ವಿಕ್, ಸ್ವಾಗತ್, ರಾಘವೇಂದ್ ಕೋರಿ, ಮೇಘರಾಜ್, ಸುಶತ್, ಧನುಷ್ ಪಟೇಲ್, ಸುಮನ್, ಹಾಲೇಶ್, ನಿತಿನ್, ದಿಗಂತ್, ತೇಜಸ್, ನಾಗರಾಜ, ಶ್ರೇಯಸ್,ಪ್ರೀತಂ, ಹೇಮಂತ್, ಆದಿ, ಮಂಜುನಾಥ್ ಮತ್ತಿತರರ ಆಟಗಾರರು ೧೪ ವರ್ಷದೊಳಗಿನ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಮೆಂಟಲ್ಲಿ ಭಾಗವಹಿಸಿದ್ದರು.
ಈ ಟೂರ್ನಿಮೆಂಟಲ್ಲಿ ಕ್ಯಾಪ್ಟನ್ ಮಹ್ಮದ್ ಜೈನ್ ೧೬೦ ರನ್ ಗಳಿಸಿ ಅತ್ಯಧಿಕ ರನ್ ಗಳಿಕೆಗೆ ಪಾತ್ರರಾಗಿರುವುದರ ಜೊತೆಗೆ ಬೌಲಿಂಗ್‌ನಲ್ಲಿಯೂ ೧೧ ವಿಕೆಟ್ ಪಡೆದು ೨ನೇ ಸ್ಥಾನ ಪಡೆದು ತಂಡಕ್ಕೆ ಉತ್ತಮ ಹೆಸರು ತಂದು ಕೊಟ್ಟಿzರೆ.