ಅ.೨೬: ಸೊರಬದಲ್ಲಿ ಮಾಜಿ ಸಿಎಂ ಬಂಗಾರಪ್ಪ ಜನ್ಮದಿನ ಆಚರಣೆ ; ಸಾಧಕರಿಗೆ ಬಂಗಾರ ಪ್ರಶಸ್ತಿ…

pm-1

ಶಿವಮೊಗ್ಗ: ಬೆಂಗಳೂರಿನ ಎಸ್.ಬಂಗಾರಪ್ಪ ವಿಚಾರ ವೇದಿಕೆ ಯಿಂದ ಅ.೨೬ರಂದು ಸೊರಬದಲ್ಲಿ ಮಾಜಿ ಸಿಎಂ ದಿ| ಎಸ್. ಬಂಗಾರಪ್ಪ ನವರ ೯೨ನೇ ಹುಟ್ಟುಹಬ್ಬ ಆಚರಣೆ ಆಚರಿಸಲಾಗುವುದು ಎಂದು ವೇದಿಕೆ ಅಧ್ಯಕ್ಷ ವೇಣುಗೋಪಾಲ್ ನಾಯ್ಕ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಂಗಾರಪ್ಪ ನವರನ್ನು ಬಿಟ್ಟು ಕರ್ನಾಟಕದ ರಾಜಕೀಯ ಚರಿತ್ರೆಯನ್ನು ಉಹಿಸಲು ಸಾಧ್ಯವಿಲ್ಲ. ಅವರು ಶೋಷಿತ ಸಮುದಾಯಗಳ ಧ್ವನಿಯಾಗಿದ್ದರು, ಸಾಂಸ್ಕೃತಿಕ ವಕ್ತಾರರು ಹಾಗೂ ಬಹುದೊಡ್ಡ ಸಮಾಜವಾದಿ ಚಿಂತಕರಾಗಿದ್ದರು. ಇಂತಹ ಮಹಾನ್ ವ್ಯಕ್ತಿಯ ಹುಟ್ಟುಹಬ್ಬವನ್ನು ಅಂದು ವಿವಿಧ ಕಾರ್ಯಕ್ರಮ ಮತ್ತು ಸಾಧಕರಿಗೆ ಪ್ರಶಸ್ತಿ ನೀಡುವ ಮೂಲಕ ಆಚರಿಸಲಾಗುವುದು ಎಂದರು.
ಪ್ರತಿಷ್ಠಾನವು ಬಂಗಾರಪ್ಪನವರ ಹೆಸರಿನಲ್ಲಿ ಬಂಗಾರ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಈ ಬಾರಿ ಸೇವಾ ಬಂಗಾರ ಪ್ರಶಸ್ತಿಯನ್ನು ಬೆಂಗಳೂರಿನ ಸಾಧಕಿ ಹೆಚ್.ಜಿ. ಸುಶೀಲಮ್ಮ ಅವರಿಗೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ, ಸಾಹಿತಿ ಕೋಂ ವೀರಭದ್ರಪ್ಪ ಅವರಿಗೆ ಸಾಹಿತ್ಯ ಬಂಗಾರ ಪ್ರಶಸ್ತಿ ಹಾಗೂ ರಂಗಭೂಮಿ ಸೇವೆಗಾಗಿ ನಾಟಕ ಕಲಾವಿದೆ. ಪ್ರತಿಭಾ ನಾರಾಯಣ್ ಅವರಿಗೆ ಕಲಾ ಬಂಗಾರ ಪ್ರಶಸ್ತಿಯನ್ನು ನೀಡಲಾಗು ವುದು. ಈ ಪ್ರಶಸ್ತಿಯು ೧ ಲಕ್ಷ ರೂ. ನಗದು ಹಾಗೂ ಫಲಕಗಳನ್ನು ಒಳಗೊಂಡಿರುತ್ತದೆ ಎಂದರು.
ಅ.೨೬ರ ಬೆಳಿಗ್ಗೆ ಸೊರಬದ ರಾಜಕುಮಾರ ರಂಗಮಂದಿರದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ಕೂಡ ಆಯೋಜಿಸಿದ್ದು, ಅಧ್ಯಕ್ಷತೆ ಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ವಹಿಸುವರು. ಶಿರಾಜ್ ಅಹ್ಮದ್ ಹಾಗೂ ರವಿಕುಮಾರ್ ಅವರು ವಿಚಾರ ಮಂಡನೆ ಮಾಡಲಿzರೆ. ಅಂದು ಸಂಜೆ ೫ಗಂಟೆಗೆ ರಾಜಕುಮಾರ್ ರಂಗಮಂದಿರದಿಂದ ಬಂಗಾರ ಧಾಮದವರೆಗೆ ಮೆರವಣಿಗೆ ಕೂಡ ಆಯೋಜಿಸಲಾಗಿದೆ ಎಂದರು.
ಸಂಜೆ ೬ಕ್ಕೆ ಬಂಗಾರ ಪ್ರಶಸ್ತಿಗಳ ಪ್ರದಾನ ಸಮಾರಂಭ ನಡೆಯಲಿದೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರಶಸ್ತಿ ಪ್ರದಾನ ಮಾಡಲಿzರೆ. ಬಂಗಾರಪ್ಪ ಜನ್ಮದಿನದ ಅಂಗವಾಗಿ ಜಿಯ ಎ ತಾಲ್ಲೂಕುಗಳ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಚರ್ಚಾ ಮತ್ತು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆ ಯಲ್ಲಿ ವಿಜೇತರಾದವರಿಗೆ ನಟ ಶಿವರಾಜ್‌ಕುಮಾರ್ ಬಹುಮಾನ ವಿತರಣೆ ಮಾಡಲಿzರೆ ಎಂದರು.
ಈ ಕಾರ್ಯಕ್ರಮದಲ್ಲಿ ಸಚಿವ ಮಧುಬಂಗಾರಪ್ಪ ಪ್ರಮುಖರಾದ ಬಸಪ್ಪ ಅಂಕರವಳ್ಳಿ, ಕೆ.ವಿ. ನಾಗರಾಜಮೂರ್ತಿ, ವೇಣುಗೋಪಾಲ್, ಹಳ್ಳಿ ಬ್ಯಾಂಡ್ ಸವಿತಕ್ಕ, ಜನಪದ ಗಾರುಡಿಗ ರಂಗಸ್ವಾಮಿ ಮುಂತಾದವರು ಭಾಗವಹಿಸಲಿದ್ದು ಜನಪದ ತಂಡಗಳಿಂದ ಜತ್ರೆ ಆಯೋಜಿಸಲಾಗಿದೆ ಎಂದರು.
ಪ್ರಮುಖರಾದ ಜಿ.ಡಿ. ಮಂಜುನಾಥ್, ಶಮಂತ್, ಮಧುಚಂದ್ರ ಇದ್ದರು.