ಇತಿಹಾಸದ ಕೃತಿ ರಚನೆಗೆ ಅಧ್ಯಯನ ಅಗತ್ಯ…

VASUDHENDRA

ಶಿವಮೊಗ್ಗ : ಇತಿಹಾಸ ಕುರಿತಾದ ಕೃತಿ ರಚನೆಗೆ ಗರಿಷ್ಟ ಪ್ರಮಾಣದ ಅಧ್ಯಯನ ಮುಖ್ಯ. ಅಧ್ಯಯನದ ಸ್ಪಷ್ಟತೆ ಇಲ್ಲದೇ ರಚನೆಯಾದ ಕೃತಿಗಳಿಂದ ಮುಂದಿನ ಪೀಳಿಗೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ, ಅಲ್ಲದೇ ನೈಜ ಇತಿಹಾಸಕ್ಕೂ ಅಪಚಾರ ಮಾಡಿ ದಂತಾಗುತ್ತದೆ ಎಂದು ಖ್ಯಾತ ಕಥೆಗಾರ ವಸುಧೇಂದ್ರ ಎಚ್ಚರಿಸಿದರು.
ನಗರದ ಪ್ರe ಬುಕ್ ಗ್ಯಾಲರಿ ಯಲ್ಲಿ ತಮ್ಮ ಇತ್ತೀಚಿನ ಕೃತಿ ‘ರೇಷ್ಮೆ ಬಟ್ಟೆ’ ಕುರಿತಾಗಿ ಓದುಗರೊಂದಿಗೆ ಸಂವಾದ ನಡೆಸಿದ ಅವರು, ಪ್ರಸ್ತುತ ರೇಷ್ಮೆ ಬಟ್ಟೆ ಕೃತಿ ರಚನೆಗೆ ಸತತ ನಾಲ್ಕು ವರ್ಷಗಳ ಕಾಲ ಅಧ್ಯಯನ ನಡೆಸ ಲಾಗಿದೆ. ಹತ್ತು ಹಲವು ಪ್ರಕಾರ ಗಳಲ್ಲಿ ವಿಶ್ಲೇಷಣೆ ನಡೆಸಲಾಗಿದೆ. ರೇಷ್ಮೆ ಬಟ್ಟೆ ಹಾಗೂ ತೇಜೋ ತುಂಗಭದ್ರ ಎರಡೂ ಕೃತಿಗಳು ಐತಿಹಾಸಿಕ ಸಂಗತಿಗಳನ್ನೇ ಆಧರಿಸಿದ್ದು. ಇತಿಹಾಸ-ವಿeನ ಎರಡರ ಸಮನ್ವಯತೆ ಇಲ್ಲಿದೆ. ಹೊಸ ಆವರಣದೊಂದಿಗೆ ರೇಷ್ಮೆ ಬಟ್ಟೆಯನ್ನು ಕಟ್ಟಿಕೊಡಲಾಗಿದೆ ಎಂದರು.
ಜನ್ನ, ರಾಘವಾಂಕ, ಬಸವಣ್ಣ ರವರ ಸಾಹಿತ್ಯಗಳು ಬದುಕಿನ ಮಲ್ಯಗಳನ್ನು ಪ್ರತಿಪಾದಿಸುತ್ತದೆ. ಇವುಗಳೇ ನಾನು ಕಥೆಗಾರನಾಗಲು ಪ್ರೇರಣೆ. ಜೊತೆಗೆ ನನ್ನಮ್ಮ ಹೇಳುತ್ತಿದ್ದ ಕಥೆಗಳು ಕೂಡಾ ನನಗೆ ಸ್ಪೂರ್ತಿ ನೀಡಿದ್ದವು ಎಂದ ಅವರು, ನನ್ನ ಅನೇಕ ಕೃತಿಗಳು ಜನಪ್ರಿಯ ವಾಗಿರುವುದರ ಹಿಂದೆ ಈ ಸ್ಪೂರ್ತಿ- ಪ್ರೇರಣೆ ಕೆಲಸ ಮಾಡಿದೆ. ಮಾಹಿತಿ ತಂತ್ರeನ ಕ್ಷೇತ್ರದ ಉದ್ಯೋಗ ನನಗೆ ಒಂದರ್ಥದಲ್ಲಿ ಯಾಂತ್ರಿಕ ವಾಗಿತ್ತು. ಅಂತಿಮವಾಗಿ ದೃಢ ನಿರ್ಧಾರದಿಂದ ಅದನ್ನು ತೊರೆದು ಹೊರ ಬಂದಿದ್ದರಿಂದಲೇ ನಾನೊಬ್ಬ ಕಥೆಗಾರನಾಗಲು ಕಾರಣ ವಾಯಿತು. ತೇಜೋ ತುಂಗಭದ್ರ, ರೇಷ್ಮೆ ಬಟ್ಟೆಯಂತಹ ಐತಿಹಾಸಿಕ ಕೃತಿಗಳನ್ನು ರಚಿಸಲು ಸಾಧ್ಯವಾಯಿತು ಎಂದರು.


ಪರಸ್ಪರ ವೈರುಧ್ಯ, ತಾಕಲಾಟ, ಹೋರಾಟಗಳು ನಡೆಯುತ್ತಿದ್ದರೂ ಸಹ ಚೈನಾ ಮತ್ತು ಮಂಗೋಲಿಯಾ ಗಳು ಒಬ್ಬರ ಮೇಲೊಬ್ಬರು ಅವಲಂಬಿತರಾಗಿದ್ದರು ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಈ ಎರಡೂ ದೇಶಗಳ ಸಾಂಸ್ಕೃತಿಕ-ಸಾಮಾಜಿಕ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದ ಇತಿಹಾಸ ಪಿತಾಮಹ ಸಿಮಾ ಕಿಯ್ಯಾನ್ ತನ್ನ ದೇಶದ ರಾಜನಿಗೆ ಗೊತ್ತಿಲ್ಲದಂತೆ ಆವನ ಇತಿಹಾಸ ರಚಿಸಲು ಮುಂದಾಗಿದ್ದು ಒಂದು ರೋಚಕ ಇತಿಹಾಸ. ಸರಿ ಸುಮಾರು ೧೩೦ ಅಧ್ಯಾಯಗಳ ಈ ಕೃತಿಯನ್ನು ಪ್ರಕಟಿಸಲು ಅವನಿಗೆ ಸಾಧ್ಯವಾಗಲೇ ಇಲ್ಲ. ಅಂತಿಮವಾಗಿ ಇದು ಬೆಳಕಿಗೆ ಬಂದದ್ದು ಭಾರತದ ಕುಮಾರಜೀವ ಎಂಬ ಬೌದ್ಧ ಭಿಕ್ಷುವಿನಿಂದ ಎಂದು ಇತಿಹಾಸವನ್ನು ಮೆಲಕು ಹಾಕಿದ ಅವರು, ರೇಷ್ಮೆ ಬಟ್ಟೆ ಕೃತಿಗೆ ಈ ಬೆಳವಣಿಗೆಗಳೇ ಮೂಲ ಧಾತು ಎಂದರು.
ಈ ರೇಷ್ಮೆ ಬಟ್ಟೆ ಎರಡನೇ ಶತಮಾನದ ಏಷ್ಯಾ ಖಂಡದ ಹಲವು ಚಾರಿತ್ರಿಕ ಸಂಗತಿಗಳನ್ನು ಇಟ್ಟುಕೊಂಡು, ಅಂದಿನ ಯುಗ ಸಂಘರ್ಷವು ಜನಸಾಮಾನ್ಯರಲ್ಲಿ ತಂದಿರಬಹುದಾದ ಸವಾಲುಗಳನ್ನು ಓದುಗರ ಮುಂದಿಡಲು ಪ್ರಯತ್ನಿ ಸುತ್ತದೆ ಎಂದ ಅವರು, ಸತತ ನಾಲ್ಕು ವರ್ಷಗಳ ಕಾಲ ಹಲವು ದೇಶಗಳ ಮತ್ತು ಹಲವು ಧರ್ಮಗಳ ವಿಸ್ತಾರವಾದ ಅಧ್ಯಯನ ಮಾಡಿ ಈ ಕೃತಿಯನ್ನು ರಚಿಸಲಾಗಿದೆ ಎಂದರು.
ತಮ್ಮ ಬಹುಚರ್ಚಿತ ಮೋಹನ ಸ್ವಾಮಿ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಮೋಹನ ಸ್ವಾಮಿ ಬರೆಯುವಾಗ ಅದರ ಫಲಿತಾಂಶ-ಪರಿಣಾಮಗಳ ಬಗ್ಗೆ ಯೋಚಿಸಿರಲಿಲ್ಲ. ಆ ಕೃತಿ ಬಂದ ಹೊಸತರಲ್ಲಿ ಪತ್ರಿಕೆಗಳಲ್ಲಿ ವಿಮರ್ಶೆ ಬರಲೇ ಇಲ್ಲ. ಆದರೆ, ಸಾಮಾಜಿಕ ಜಲತಾಣಗಳಲ್ಲಿ ಅದು ಬಹು ದೊಡ್ಡ ಚರ್ಚೆಯಾಯಿತು. ಯಾವಾಗ ಚರ್ಚೆ ತಾರಕಕ್ಕೆ ಹೋಯಿತೋ, ಆಗ ಪತ್ರಿಕೆಗಳಲ್ಲಿ ವಿಮರ್ಶೆಗಳು ಬರಲು ಪ್ರಾರಂಭಿಸಿದವು ಎಂದರು.
ಮೋಹನ ಸ್ವಾಮಿಯಂಥವರು ಎಲ್ಲ ಕಾಲಕ್ಕೂ ಇರ್ತಾರೆ. ನಮ್ಮ ನಡುವೆಯೇ ಇzರೆ. ಕೆಲವರು ಹೇಳುವುದಿಲ್ಲ. ನಾನು ಹೇಳಿದ್ದೇನೆ. ಈ ಕಾರಣಕ್ಕಾಗಿಯೇ ಆ ಕೃತಿಯನ್ನು ಮುಂದಿನ ಮತ್ತು ಹಿಂದಿನ ಏಳು ತಲೆಮಾರಿಗೆ ಅರ್ಪಿಸಿದ್ದೇನೆ ಎಂದ ಅವರು, ಯಾವುದೇ ಕೃತಿಯಾಗಲೀ ಅದು ಚರ್ಚೆಯನ್ನು ಹುಟ್ಟುಹಾಕ ಬೇಕು. ಆಗ ಮಾತ್ರ ಅದು ಬಹು ಕಾಲ ನಿಲ್ಲುತ್ತದೆ. ಇದಕ್ಕೆ ಮೋಹನ ಸ್ವಾಮಿಯೇ ಸಾಕ್ಷಿ ಎಂದರು.
ಇಂದಿನ ಯುವ ಪೀಳಿಗೆಗೆ ಬೇಕಾದ, ಅವರ eನದ ಹರಿವನ್ನು ವಿಸ್ತರಿಸುವ ಕೃತಿಗಳನ್ನು ನಾವು ನೀಡಬೇಕಿದೆ. ಪ್ರೀತಿ-ಪ್ರೇಮಗಳ ಜಡಿನಿಂದ ಅವರನ್ನು ಹೊರತರ ಬೇಕಿದೆ. ಹಿರಿಯರನ್ನು ಮೆಚ್ಚಿಸುವ ಬದಲು ಕಿರಿಯರನ್ನು ಮೆಚ್ಚಿಸುವ ಕೃತಿಗಳನ್ನು ನೀಡಿ, ಅವರು ಓದಿಯೇ ಓದುತ್ತಾರೆ. ತೇಜಸ್ವಿ ಯಶಸ್ವಿಯಾಗಿ ಲ್ಲವೇ? ನಾವು ಮೊದಲು ದೊಡ್ಡವರನ್ನು ಮೆಚ್ಚಿಸುವ ಚಟದಿಂದ ಹೊರಬರಬೇಕು ಆಷ್ಟೇ ಎಂದ ಅವರು, ನನಗೆ ಪುಸ್ತಕ ಬಿಡುಗಡೆ ಸಮಾರಂಭಗಳಲ್ಲಿ ಆಸಕ್ತಿಯಿಲ್ಲ. ಅದು ಕ್ಲೀಷೆ ಎನಿಸಿದೆ. ಓದಗರೊಂದಿಗೆ ಮುಖಾಮುಖಿ ಯಾಗುವುದರಲ್ಲಿ ಸಿಗುವ ಆನಂದ, ಪುಸ್ತಕ ಬಿಡುಗಡೆ ಸಮಾರಂಭಗಳಲ್ಲಿ ಸಿಗುವುದಿಲ್ಲ ಎಂದರು. ಸಂವಾದದಲ್ಲಿ ನಗರದ ಓದುಗರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.