ಬ್ರಾಹ್ಮಣರು ಇತರ ಸಮಾಜ ಬಾಂಧವರಿಗೆ ಮಾದರಿಯಾಗಿದ್ದಾರೆ: ಶಾಸಕ ಸಂಗಮೇಶ್ ಶ್ಲಾಘನೆ…

nymathi-1

ಭದ್ರಾವತಿ : ಬ್ರಾಹ್ಮಣ ಸಮಾಜವರು ಇತರ ಸಮಾಜದವರಿಗೆ ಮಾದರಿಯಾಗಿ ಸೇವೆ ಸಲ್ಲಿಸುತ್ತಿzರೆ. ಸಮಾಜ ಬಂಧುಗಳಿಗೆ ಅನುಕೂಲ ಆಗುವ ದೃಷ್ಟಿಯಿಂದ ಗಾಯಿತ್ರಿ ಧರ್ಮ ಶಾಲಾ ಕಟ್ಟಡವನ್ನು ನಿರ್ಮಿಸಿ ಸಮಾಜಕ್ಕೆ ಅರ್ಪಿಸಿzರೆ ಎಂದು ಶಾಸಕ ಬಿ.ಕೆ.ಸಂಗಮೇಶ್ವರ ತಿಳಿಸಿದರು.
ಅವರು ತಾಲ್ಲೂಕು ಬ್ರಾಹ್ಮಣ ಸಮಾಜದಿಂದ ಏರ್ಪಡಿಸಿದ್ದ ಗಾಯಿತ್ರಿ ಧರ್ಮ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಕಟ್ಟದ ಮುಂದುವರೆದ ಭಾಗವಾಗಿ ೨ನೇ ಹಂತದ ಕಾಮಗಾರಿಗೆ ೫ ಲಕ್ಷ ರೂಗಳ ಅನುದಾನವನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.
ನಾಮಫಲಕ ಉದ್ಘಾಟಿಸಿ ಮಾತನಾಡಿದ ನಗರಸಭಾ ಸದಸ್ಯ ಬಿ.ಕೆ. ಮೋಹನ್ ಅವರು, ಬ್ರಾಹಣರು ದೇವರನ್ನು ಪೂಜಿಸಿ ಪೌರೋಹಿತ್ಯ ಮಾಡಿ ಸಮಾಜದ ಎಲ್ಲರ ಒಳಿತನ್ನು ಬಯಸುವ ಎಲ್ಲರಿಗೂ ಆಶೀರ್ವಾದ ಮಾಡುವ ಅವರು ಸದಾ ವೇದಿಕೆಯ ಮೆಲೆ ಆಸಿನರಾಗಿ ರುತ್ತಾರೆ. ಆದರೆ ಇಂದು ನಾವು ಈ ಸಮಾರಂಭದಲ್ಲಿ ವೇದಿಕೆಯ ಮೇಲೆ ಕುಳಿತಿದ್ದೇವೆ. ಆಶೀರ್ವಾದ ಮಾಡುವ ಅವರು ವೇದಿಕೆಯ ಕೆಳ ಭಾಗದ ಸಬಿಕರ ಸಾಲಿನಲ್ಲಿ ಕುಳಿತಿzರೆ. ಇಂತಹ ಮುಜುಗರದ ಸನ್ನಿವೇಶದಲ್ಲಿ ನಾನು ಮಾತ ನಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದರು.
ಜನ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಸಮಾಜದ ಎಲ್ಲರೂ ಸೇರಿ ದೇವಸ್ಥಾನ, ಸಭಾ ಭವನಗಳನ್ನು ನಿರ್ಮಾಣ ಮಾಡಿ ಸಾರ್ವಜನಿಕರ ಸೇವೆ ಅರ್ಪಿಸಿzರೆ. ಆ ಮೂಲಕ ಸಮಾಜದ ಅಸ್ತಿ ಪಾಸ್ತಿಗಳನ್ನು ಸಂರಕ್ಷಿಸಿ ಇತರರಿಗೆ ಮಾದರಿಯಾಗಿ zರೆ. ಇದರ ಜೊತೆಗೆ ಸಮಾಜದ ಪ್ರಮುಖ ಸ್ಥಾನಗಳಲ್ಲಿ ಬ್ರಾಹಣ ಸಮಾಜದವರು ಹೆಚ್ಚಿನ ಸಂಖ್ಯೆ ಯಲ್ಲಿ ಇದ್ದು ಆ ಮೂಲಕ ಸಮಾಜ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿzರೆ ಎಂದರು.


ಎಲ್ಲದಕ್ಕಿಂತ ಬಹು ಮುಖ್ಯ ವಾಗಿ ಇವರು ತಮ್ಮ ಸಮಾಜದ ಎ ಒಳಪಂಗಡಗಳನ್ನು ಮರೆತು ಒಗ್ಗಟ್ಟಾಗಿ ಸಮಾಜವನ್ನು ಬಲಿಷ್ಟವಾಗಿ ಸಂಘಟಿಸುತ್ತಿರುವುದು ಹರ್ಷದಾಯಕ ಬೆಳವಣಿಗೆ. ಇಂತಹ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಹಳೇ ನಗರ ಭಾಗದಲ್ಲಿ ತಮ್ಮ ಕುಟುಂಬದ ಒಡೆತನದ ೬ ಎಕರೆ ಜಗವನ್ನು ೨೫ ಸಮಾಜದವರಿಗೆ ದಾನ ನೀಡಲಾಗಿದೆ, ಇದರಲ್ಲಿ ಸುಮಾರು ೨೦ ಸಾವಿರ ಅಡಿ ಜಗವನ್ನು ಬ್ರಾಹಣ ಸಮಾಜಕ್ಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇದರ ಅಧಿಕೃತ ದಾಖಲೆ ಪತ್ರಗಳನ್ನು ಸಮಾಜದ ಹೆಸರಿಗೆ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.
ನಗರಸಭಾ ಅಧ್ಯಕ್ಷ ಮಣಿ ಮಾತನಾಡಿ ಬೆಳಿಗ್ಗೆಯಿಂದ ಸಂಜೆ ಯವರೆಗೆ ನಿಮ್ಮಗಳ ಮಾರ್ಗz ರ್ಶನದಲ್ಲಿ ನಾವುಗಳು ಇರುತ್ತೇವೆ. ನೀವು ಸಮಾಜದ ಎಲ್ಲರ ಹಿತವನ್ನು ಕಾಪಾಡುವ ಯಾರಿಗೂ ಕೇಡನ್ನು ಬಯಸದ ನಿಮಗೆ ದೇವರ ಆಶೀರ್ವಾದ ನಿಮ್ಮ ಮೇಲಿರಲಿ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದರು.
ಎಸ್.ಸಿ. ನೀಲಕಂಠ ಜೋಯ್ಸ್ ಅಧ್ಯಕ್ಷತೆ ವಹಿಸಿದ್ದರು. ಎಸ್.ದತ್ತಾತ್ರಿ, ಜಿ ಬ್ರಾಹಣ ಸಮಾಜದ ಅಧ್ಯಕ್ಷ ನಟರಾಜ್ ಭಾಗವತ್ ಕಟ್ಟಡವನ್ನು ಉದ್ಘಾಟಿಸಿದರು, ನಗರಸಭಾ ಸದಸ್ಯೆ ಅನುಪಮ ಚನ್ನೇಶ್, ಡಾ.ಹರೀಶ್ ದೇಲಂತ ಬೆಟ್ಟು, ಎಂ.ಎಸ್. ಜನಾರ್ಧನ ಅಯ್ಯಂಗಾರ್, ರಮಾಕಾಂತ, ಜಿ.ರಮೇಶ್ ವೇದಿಕಯಲ್ಲಿ ಉಪಸ್ಥಿತರಿದ್ದರು.
ಇದೇ ಸಂಧರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಸಮಾಜದ ಬಂಧುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಪವನ್ ಉಡುಪ ವೇಧಘೋಷ ಮಾಡಿ ದರು. ರಮಕಾಂತ್ ಪುಟ್ಟಣ್ಣ ಸ್ವಾಗತಿಸಿದರು. ಜನಾರ್ಧನ ಅಯ್ಯಂಗಾರ್ ಪ್ರಸ್ತಾವಿಕ ಭಾಷಣ ಮಾಡಿದರು. ಎಐಆರ್ ಸುಬ್ರ ಮಣ್ಯ ಕಾರ್ಯಕ್ರಮ ನಿರೂಪಿಸಿ ದರು. ಇಂದ್ರಸೇನ ರಾವ್ ವಂದನಾರ್ಪಣೆ ಮಾಡಿದರು.