ಮಹಿಳೆಯರು ಸ್ವಾವಲಂಭಿಗಳಾದರೆ ಮಾತ್ರ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ: ಸಂಸದೆ ಪ್ರಭಾ

IMG_20241010_202926

ಹೊನ್ನಾಳಿ: ಎಲ್ಲಾ ರಂಗಗಳಲ್ಲೂ ಮಹಿಳೆಯರು ಹೆಚ್ಚಿನ ಮುಂದಾಳತ್ವ ವಹಿಸಿಕೊಂಡು ಕೆಲಸ ಮಾಡಿದರೆ ಮಲ್ಯಯುತ ಸಮಾಜವನ್ನು ಕಟ್ಟಲು ಸಾಧ್ಯ ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ನುಡಿದರು.
ಹೊನ್ನಾಳಿ ಹಿರೇಕಲ್ ಮಠದಲ್ಲಿ ಶರನ್ನವರಾತ್ರಿ ಹಾಗೂ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ ಉಪಸ್ಥಿತಿ ಹಾಗೂ ಕಬ್ಬಿಣದ ಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ರಟ್ಟೆಹಳ್ಳಿ ಇವರ ಅಧ್ಯಕ್ಷತೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಪ್ಪತ್ತು ಊಟ ಮಾಡುವುದು ಹಾಗೂ ದೇವಿ ಪುರಾಣ ಹಾಗೂ ರಕ್ತ ಬೀಜಸುವರ ಕಥೆಯನ್ನು ಹೇಳಿದರು.
ಮಹಿಳೆಯರು ವ್ರತ ಮಾಡುವುದು ನಮ್ಮೆಲ್ಲ ಆರೋಗ್ಯ ಭಾಗ್ಯ ವೃದ್ಧಿಸಲಿ ಎಂದು ಮಾಡಬೇಕಾಗಿದೆ. ಹಿರಿಯರು ಅಂದರೆ ನಮ್ಮ ಬೆನ್ನೆಲುಬು ಇದ್ದಹಾಗೆ ಹಿರಿಯರು ಇಲ್ಲದಿದ್ದರೆ ಯಾರ ಮಾರ್ಗದರ್ಶನ ಪಡೆಯುವುದು. ಅವರು ಮಾಡಿದ ಪೂಜ ಸಂಸ್ಕೃತಿ ಎಲ್ಲವನ್ನೂ ನಾವು ಅಳವಡಿಸಿಕೊಂಡು ಬರಬೇಕಿದೆ , ಹಾಗೆ ಮಹಿಳೆಯರ ಬಗ್ಗೆ ಹೇಳಬೇಕಾದರೆ ಹೆಣ್ಣೊಂದು ಕಲಿತರೆ ಶಾಲೆ ಎಂದು ತೆರೆದಂತೆ, ಮನೆಯೊಂದು ಮೊದಲ ಪಾಠಶಾಲೆ ಚರಣಿಕಾರ್ಯ ಮೊದಲ ಗುರು ಮಹಿಳೆಯರು ಕೂಡ ನಿಮ್ಮಲ್ಲಿರುವ ಶಕ್ತಿಯನ್ನು ಗುರುತಿಸಿಕೊಳ್ಳಬೇಕು ೯ ದಿನ ನಾವು ನವದುರ್ಗೆಯರ ಪೂಜೆ ಮಾಡುತ್ತೇವೆ. ಒಂದೊಂದು ದೇವತೆಯಲ್ಲೂ ಒಂದೊಂದು ಶಕ್ತಿ ಇದೆ, ಆ ಶಕ್ತಿಯನ್ನು ನಾವು ಬೇಡಿಕೊಳ್ಳುತ್ತೇವೆ, ನಮ್ಮ ಕೌಟುಂಬಿಕ ಜವಾಬ್ದಾರಿ ಕೂಡ ನಿರ್ವಹಿಸಬೇಕಾಗುತ್ತದೆ. ಒಬ್ಬ ಅಜ್ಜಿಯಾಗಿರಬಹುದು, ಅಮ್ಮ ಆಗಿರಬಹುದು, ಮಡದಿಯಾಗಿರಬಹುದು, ಮಗಳಾಗಿರಬಹುದು, ತಾಯಿ ಆಗಿರಬಹುದು, ನಮ್ಮೆಲ್ಲರ ಜವಾಬ್ದಾರಿಯ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ಕೂಡ ಯಶಸ್ವಿಯಾಗಿ ನೆರವೇರಿಸುತ್ತೇವೆ. ಹೆಣ್ಣಿಗೆ ಆ ಶಕ್ತಿಯನ್ನು ದೇವರೇ ಆ ಪ್ರಕೃತಿಯಲ್ಲಿ ನಮಗೆ ಆಶೀರ್ವಾದ ಮಾಡುವ ಮೂಲಕ ನೀಡಿರುತ್ತಾರೆ. ಹಾಗೆ ಕೆಲಸಕ್ಕೆ ಹೋಗುವ ಮಹಿಳೆ ಮನೆಯ ಜವಾಬ್ದಾರಿಯನ್ನು ಬಿಟ್ಟರೆ ನಡೆಯುವುದಿಲ್ಲ ಎರಡನ್ನು ಕೂಡ ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕಾಗುತ್ತದೆ ಎಂದರು.


ನಮ್ಮ ಸಮಾಜದಲ್ಲಿ ಕೂಡ ಮಹಿಳೆಯರು ಹೆಚ್ಚಿನ ಮುಂದಾಳತ್ವ ವಹಿಸಿಕೊಂಡು ಕೆಲಸ ಮಾಡಿದರೆ ಮಲ್ಯವಿತ ಸಮಾಜವನ್ನು ಕಟ್ಟಲು ಸಾಧ್ಯ. ನಾಡಿನಲ್ಲಿ ಸಮೃದ್ಧಿಯಾಗಿ ಮಳೆಯಾಗಿದೆ. ರೈತರ ಬದುಕು ಹಸನಾಗಿದೆ, ನಾಡಿನ ಜನತೆಗೆ ಆರೋಗ್ಯ ಭಾಗ್ಯ ಐಶ್ವರ್ಯ ಕರುಣಿಸಲಿ ಎಂದು ದುರ್ಗಾ ದೇವಿಯ ಪ್ರಾರ್ಥಿಸುವೆ ಹಾಗೂ ದಸರಾ ಹಬ್ಬ ಹಾಗೂ ಆಯುಧ ಪೂಜೆಯ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮಾಡ್ನೋಡ್ ವಿರುಪಾಕ್ಷಪ್ಪ ಹಾಗು ಜಿಧಿಕಾರಿ ಗಂಗಾಧರಸ್ವಾಮಿ, ಜಿ ಪಂಚಾಯಿತಿ ಅಧ್ಯಕ್ಷ ಹೆಚ್ ಬಿ ಮಂಜಪ್ಪ, ಗಂಗಾಧರ, ದಾನಪ್ಪ, ವೀರಣ್ಣ, ಪ್ರವೀಣ್ ದೊಡ್ಡ ಗೌಡ್ರು, ರವೀಶ್ ಇನ್ನು ಮುಂತಾದವರು ಇದ್ದರು.