ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜವಾಬ್ದಾರಿ ಪೋಷಕರದ್ದು…

11-SORAB-01.jpeg

ಸೊರಬ: ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡುವ ಜವಾಬ್ದಾರಿ ಪೋಷಕರ ಮೇಲಿದೆ ಎಂದು ರಾಷ್ಟ್ರಪತಿ ಪದಕ ಪುರಸ್ಕೃತ ಯೋಧ ಜಿ. ಚಂದ್ರಶೇಖರ್ ಹೇಳಿದರು.
ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ ದಸರಾ ಉತ್ಸವ ಸಮಿತಿಯಿಂದ ತಾಲೂಕು ಆಡಳಿತ, ಪುರಸಭೆ ಸಹಯೋಗದಲ್ಲಿ ಹಮ್ಮಿಕೊಂಡ ೧೬ನೇ ವರ್ಷದ ಸಾರ್ವಜನಿಕ ದಸರಾ ಉತ್ಸವದ ೮ನೇ ದಿನದ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.


ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳಲ್ಲಿ ಸಂಸ್ಕಾರದ ಕೊರತೆ ಎದ್ದುಕಾಣುತ್ತಿದೆ. ಮಕ್ಕಳಿಗೆ ಬಾಲ್ಯ ದಲ್ಲಿಯೇ ದೇಶ ಪ್ರೇಮ ಬೆಳೆಸ ಬೇಕು ಎಂದ ಅವರು, ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಬಾಹ್ಯ ಶತ್ರುಗಳ ಜೊತೆ ಹೋರಾಡಿ ಜಯ ಸಾಧಿಸಬಹುದು. ಆದರೆ, ಆಂತರಿಕ ಶತ್ರುಗಳು ದೇಶಕ್ಕೆ ದೊಡ್ಡ ಅಪಾಯವಾಗಿzರೆ. ಅವರಿಂದ ಸದಾ ಜಗರೂಕರಾಗಿರಬೇಕು ಎಂದರು.
ಕರ್ತವ್ಯದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆ ಇzಗ ಗೌರವಾಧಾರಗಳು ಹುಡುಕಿಕೊಂಡು ಬರುತ್ತವೆ. ತಮಗೆ ದೊರೆತ ರಾಷ್ಟ್ರಪತಿ ಪದಕವನ್ನು ಭಾರತಾಂಬೆಯ ಮಡಿಲಿಗೆ ಅರ್ಪಿಸುತ್ತೇನೆ. ತಾಲೂಕಿನಲ್ಲಿ ಅನೇಕ ನಿವತ್ತ ಸೈನಿಕರಿzರೆ. ಅವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪಿಸಲು ತಾಲೂಕು ಆಡಳಿತ ಮುಂದಾಗಬೇಕು ಎಂದು ಮನವಿ ಮಾಡಿದರು.
ಸನ್ಮಾನ ಸ್ವೀಕರಿಸಿದ ಅಂತರಾಷ್ಟ್ರೀಯ ನ್ಯಾಚುರಲ್ ಬಾಡಿ ಬಿಲ್ಡರ್ ರಘು ರಾಮಪ್ಪ ಮಾತನಾಡಿ, ಯುವ ಜನತೆ ದುಶ್ಚಟಗಳಿಗೆ ಮಾರುಹೋಗದೇ, ಉತ್ತಮ ಆರೋಗ್ಯವನ್ನು ಸಂಪಾದಿಸಿಕೊಳ್ಳಬೇಕು. ದೈನಂದಿನ ಚಟುವಟಿಕೆಗಳ ನಡುವೆ ನಿತ್ಯ ವ್ಯಾಯಾಮ ಮಾಡುವುದನ್ನು ಮೈಗೂಡಿಸಿಕೊಳ್ಳಬೇಕು. ಅವಮಾನಗಳನ್ನು ಮೆಟ್ಟಿ ನಿಂತು ಸಾಧನೆ ಮಾಡುವ ಛಲವನ್ನು ಬೆಳೆಸಿಕೊಳ್ಳಬೇಕು. ವತ್ತಿಯೊಂದಿಗೆ ಕಲೆ, ಸಾಹಿತ್ಯ, ಚಿತ್ರಕಲೆ, ಕ್ರೀಡೆಯಂತಹ ಹವ್ಯಾಸಗಳು ಪರಿಪೂರ್ಣ ವ್ಯಕ್ತಿಯನ್ನಾಗಿಸಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಅಮೇರಿಕಾದಲ್ಲಿ ನಡೆಯುವ ಅಂತರಾಷ್ಟ್ರೀಯ ನ್ಯಾಚುರಲ್ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡು ದೇಶಕ್ಕೆ ಕೀರ್ತಿ ತರುವ ಹೆಬ್ಬಯಕೆ ಹೊಂದಿದ್ದೇನೆ ಎಂದರು.
ಕುವೆಂಪು ವಿವಿ ನಿವೃತ್ತ ಹಣಕಾಸು ಅಧಿಕಾರಿ ಬಂಗಾರಪ್ಪ ಜಡೇಕರ್ ಮಾತನಾಡಿ, ಯುವ ಜನತೆಯಲ್ಲಿ ಧರ್ಮ, ಸಂಪ್ರದಾಯ, ಸಂಸ್ಕೃತಿ, ಆಚಾರ-ವಿಚಾರಗಳ ಕುರಿತು ಅರಿವಿಲ್ಲ. ಇದು ಆತಂಕದ ವಿಷಯ. ಗ್ರಾಮೀಣ ಭಾಗದ ಅನೇಕ ಜನಪದ ಕಲೆಗಳು ಮರೆಯಾಗಿ ಹೋಗಿವೆ. ಪ್ರತಿಯೊಬ್ಬರು ಹಬ್ಬ ಹರಿದಿನಗಳ ಮಹತ್ವವನ್ನು ಅರಿಯಬೇಕು. ಧರ್ಮ ಸ್ಥಾಪನೆ ಮಾಡುವ ನೈತಿಕತೆ ಮತ್ತು ಸತ್ಯದ ತಳಹದಿಯ ಮೇಲೆ ಜೀವನ ನಿರ್ಮಾಣ ಮಾಡುವ ಆಶಯ ಅಡಗಿರುವ ಹಬ್ಬ ನವರಾತ್ರಿ ಎಂದರು.
ದಸರಾ ಉತ್ಸವ ಸಮಿತಿ ಅಧ್ಯಕ್ಷ ಜಿ. ಪ್ರಶಾಂತ ಮೇಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿವಿ ನಿವತ್ತ ಹಣಕಾಸು ಅಧಿಕಾರಿ ಬಂಗಾರಪ್ಪ ಜಡೇಕರ್, ಉದ್ಯಮಿ ಹೇಮರಾಜ ಪಾಟೀಲ್, ಶ್ರೀ ದುರ್ಗಾಪರಮೇಶ್ವರಿ ಸ್ಟೋನ್ ಕ್ರಷರ್ ಮಾಲೀಕ ಇಂದೂಧರ ಹೊಳೆಲಿಂಗಪ್ಪ, ಗಂಗಾಮತ ಸಮಾಜದ ಅಧ್ಯಕ್ಷ ನಾಗರಾಜ ಎಲೆ, ಸಮಿತಿಯ ಪ್ರಧಾನ ಕಾರ್ಯದರ್ಶಿ ಪರಶುರಾಮ ಸಣ್ಣಬೈಲ್, ಖಜಂಚಿ ಬಸವರಾಜ ಶೇಟ್, ಮಾಲತೇಶ್ ಮಾಸ್ತರ್, ಸುರೇಶ್ ಭಂಡಾರಿ, ಪ್ರಮುಖರಾದ ಗುರುಮೂರ್ತಿ ಗುಡಿಗಾರ್, ಟೋಕಪ್ಪ ಮಂಚಿ ಇತರರಿದ್ದರು. ಪುಷ್ಪಾ ವಿಶ್ವನಾಥ್ ಮತ್ತು ಉಮಾ ಚಂದ್ರಶೇಖರ್ ಪ್ರಾರ್ಥಿಸಿದರು. ವೀಣಾ ಶ್ರೀಧರ್ ಸ್ವಾಗತಿಸಿ, ಬಸವರಾಜ ಗುರ್ಕಿ ವಂದಿಸಿ, ಜಿ. ಕೆರಿಯಪ್ಪ ನಿರೂಪಿಸಿದರು.