ಸಕಲರೂ ವೈeನಿಕ ಧರ್ಮವನ್ನು ಪಾಲಿಸಬೇಕಾದ ಅನಿವಾರ್‍ಯತೆ ಬಂದೊದಗಿದೆ:ಡಾ.ಈಶ್ವರ್‌ನಾಯ್ಕ್

dasaraa7A10p1

ಹೊನ್ನಾಳಿ : ಲಿಂ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಯುವಕರಾಗಿzಗ ಸ್ವಾಮಿ ವಿವೇಕಾನಂದರಂತೆ ಕಾಣುತ್ತಿ ದ್ದುದರ ಜೊತೆಗೆ ಅವರ ವ್ಯಕ್ತಿತ್ವ ವನ್ನೂ ಹೊಂದಿದ್ದರು ಎಂದು ಕೆ.ಪಿ.ಸಿ.ಸಿ. ಸದಸ್ಯರು ಹಾಗೂ ಖ್ಯಾತ ವೈದ್ಯ ಡಾ.ಈಶ್ವರ್ ನಾಯ್ಕ್ ಬಣ್ಣಿಸಿದರು.


ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ೭ನೇ ದಿನದ ದಸರಾ ಮತ್ತು ಶರನ್ನವರಾತ್ರಿ ಮಹೋತ್ಸವದ ಧರ್ಮಸಭೆ ಯನ್ನುದ್ದೇಶಿಸಿ ಅವರು ಮಾತನಾಡಿದರು.
ಹಿಂದಿನ ಶ್ರೀಗಳು ಲಿಂಗೈಕ್ಯರಾದ ಮೇಲೆ ಮಠದ ವ್ಯವಸ್ಥೆಯ ಬಗ್ಗೆ ಎಲ್ಲರೂ ಆತಂಕದಲ್ಲಿದ್ದರು ಆದರೆ ಈಗಿನ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹಿಂದಿನ ಶ್ರೀಗಳವರಂತೆ ಮಠವನ್ನು ಗೌರವಯುತವಾಗಿ ನಡೆಸಿಕೊಂಡು ಹೋಗುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮ ಮತ್ತು ವಿeನದ ಬಗ್ಗೆ ಇಂದಿಗೂ ವಿರೋಧಾಭಾಸವಿದ್ದು, ಇಂದು ನಾವುಗಳು ವೈeನಿಕ ಧರ್ಮವನ್ನು ಪಾಲಿಸಿಕೊಂಡು ಹೋಗಬೇಕಾದ ಅನಿವಾರ್‍ಯತೆ ಬಂದೊದಗಿದೆ ಎಂದು ತಿಳಿಸಿದರು.
ಯಾವುದೇ ವೈದ್ಯಕೀಯ ಉಪಕರಣಗಳನ್ನು ಬಳಸದೇ ರೋಗಿಯ ಖಾಯಿಲೆಯನ್ನು ಗುಣಪಡಿಸುವವನೇ ಉತ್ತಮ ವೈದ್ಯರೆಂದು ಅಭಿಪ್ರಾಯಪಟ್ಟರು.
ತಾಯಂದಿರು ಗಂಡು-ಹೆಣ್ಣು ಎಂಬ ಭೇದ-ಭಾವ ಮಾಡದೇ ಎಲ್ಲರಿಗೂ ಕಡ್ಡಾಯವಾಗಿ ಶಿಕ್ಷಣ ಕೊಡಿಸುವಂತೆ ಮನವಿ ಮಾಡಿದರು. ವೈದ್ಯಕೀಯ ವೃತ್ತಿಯನ್ನು ಹಣಕ್ಕಾಗಿ ಮಾರಿಕೊಳ್ಳಬೇಡಿ ಎಂದು ವಿನಂತಿಸಿದರು.
ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯ ಖ್ಯಾತ ಸ್ತ್ರೀರೋಗ ತe ಡಾ.ವಾಣಿ ಕೋರಿ ಮಾತನಾಡಿ, ಮುಂದಿನ ಪೀಳಿಗೆಗೆ ಲಿಂ. ಶ್ರೀಗಳವರನ್ನು ಜೀವಂತವಾಗಿಡುವ ನಿಟ್ಟಿನಲ್ಲಿ ಈಗಿನ ಶ್ರೀಗಳು ಶ್ರೀಮಠ ದಲ್ಲಿ ವರ್ಷವಿಡೀ ಧಾರ್ಮಿಕ ಕಾರ್ಯಗಳನ್ನು ಚಾಚೂ ತಪ್ಪದೇ ಆಯೋಜನೆ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಾವು ಆಚರಿಸುವ ಪ್ರತೀ ಹಬ್ಬ- ಹರಿದಿನಗಳಲ್ಲೂ, ಸಂಸ್ಕೃತಿ- ಸಂಪ್ರದಾಯ, ಆಚಾರ- ವಿಚಾರಗಳಲ್ಲೂ ವಿeನವಿದೆ ಎಂದು ಮಾಹಿತಿ ನೀಡಿದರಲ್ಲದೇ, ಮುಂದಿನ ಪೀಳಿಗೆಯನ್ನು ಆರೋಗ್ಯಕರವಾಗಿ ಬೆಳೆಸುವುದಕ್ಕೆ ಸಂಸ್ಕೃತಿ-ಸಂಪ್ರದಾಯಗಳು ಅತ್ಯವಶ್ಯಕವಾಗಿವೆ ಎಂದರು.
ನಾವು ಪ್ರತೀ ನಿತ್ಯ ಆಚರಿಸುವ ಪ್ರತಿಯೊಂದು ಆಚರಣೆಗಳಲ್ಲೂ ನಮಗೆ ಆರೋಗ್ಯ-ಭಾಗ್ಯ ಲಭ್ಯವಿದ್ದು ಅವುಗಳ ಆಚರಣೆಗಳ ಹಿನ್ನೆಲೆಯನ್ನು ಸರಿಯಾಗಿ ತಿಳಿದುಕೊಳ್ಳಬೇಕು ಎಂದು ವಿವರಿಸಿದರು.
ಆರ್ಯುವೇದ ವೈದ್ಯರಾದ ಡಾ.ಲಿಂಗರಾಜ್ ಆರ್ಯುವೇದ ಪದ್ಧತಿಯನ್ನು ಅಳವಡಿಸಿಕೊಳ್ಳು ವುದರ ಬಗ್ಗೆ ಮಾಹಿತಿ ನೀಡಿದರು.
ಪುರದ ಕೋಣಂದೂರು ಮಠದ ಶ್ರೀಪತಿ ಪಂಡಿತಾರಾಧ್ಯ ಅಭಿನವ ಸಿದ್ಧವೀರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆರ್ಶೀವಚನ ನೀಡಿದರು.
ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಧರ್ಮಸಭೆಯ ಸಾನಿಧ್ಯವಹಿಸಿದ್ದರು.
ಶ್ರೀ ಮಂಜುನಾಥ ದೇವರು ದೇವಿಯ ಪುರಾಣ ವಾಚಿಸಿದರು.
ಮಠದ ಸೇವಾಕರ್ತರಿಗೆ ಗುರುರಕ್ಷೆ ನೀಡಲಾಯ್ತು. ಅಕ್ಕಮಹಾದೇವಿ ಮತ್ತು ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನಸೂರೆಗೊಂಡವು.
ವೇದಿಕೆಯಲ್ಲಿ ಕಸಬಾ ಸೊಸೈಟಿಯ ಅಧ್ಯಕ್ಷ ಕುಮಾರ ಸ್ವಾಮಿ, ಉಪನ್ಯಾಸಕ ಕೆ.ಎಂ.ಸಿದ್ದಲಿಂಗಸ್ವಾಮಿ, ಉದ್ಯಮಿ ಕೋರಿ ದೀಪುಕುಮಾರ್, ಮುಖ್ಯಶಿಕ್ಷಕ ಶಂಕರಸ್ವಾಮಿ, ಎಚ್.ಎಂ.ಗಂಗಾಧರಯ್ಯ, ಕರಿಬಸಪ್ಪ ಶಿಕ್ಷಕ, ಎಚ್.ಬೆನಕಪ್ಪ, ಗಾರೆ ಮಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.