ಎಂತಹ ಕಷ್ಟ ಬಂದರೂ ವಿದ್ಯಾವಂತ ಮಹಿಳೆ ಜಯಿಸಬಲ್ಲಳು..

bdvt

ಭದ್ರಾವತಿ : ನಿರ್ಮಲ ಮಹಿಳಾ ಸೇವಾ ಕೇಂದ್ರ ನಿರ್ಮಲ ಆಸ್ಪತ್ರೆ ಭದ್ರಾವತಿಯಲ್ಲಿ ಅಲ್ಪ ಸಂಖ್ಯಾತರ ನಿಗಮದ ಸೌಲಭ್ಯಗಳ ಬಗ್ಗೆ ಮಹಿಳೆಯರಿಗೆ ಅರಿವು ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಆಸೀಫ್ ಪಾಷ, ಅವರು ಅಲ್ಪಸಂಖ್ಯಾತರಿಗಿರುವ ವಿವಿಧ ಸ್ಕಾಲರ್ಶಿಪ್ , ಸಾಲ ಸೌಲಭ್ಯಗಳು ಮತ್ತು ಅವರ ಆರಾಧನೆಯ ಸ್ಥಳ ಗಳ ಅಭಿವೃದ್ಧಿಗೆ ಇರುವ ಸೌಲಭ್ಯಗಳ ಬಗ್ಗೆ ವಿವರವಾಗಿ ತಿಳಿಸಿದರು.
ಅನ್ವರ್ ಕಾಲೋನಿಯ ಉರ್ದು ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಶ್ರೀಮತಿ ಜೆಮಿಲ ಅವರು, ಮುಸ್ಲಿಂ ಅಲ್ಪ ಸಂಖ್ಯಾತ ರಲ್ಲಿ ಇರುವ ಮೂಢನಂಬಿಕೆ, ಬೇಗನೆ ಮದುವೆ ಮಾಡುವ ಸಂಪ್ರದಾಯ, ಹೆಚ್ಚಿನ ಶಿಕ್ಷಣಕ್ಕೆ ಪ್ರೋತ್ಸಾಹ ನೀಡದಿರುವುದೇ ಮುಸ್ಲಿಂ ಮಹಿಳೆಯರ ಅಭಿವೃದ್ಧಿಗೆ ಮುಳ್ಳಾಗಿದೆ ಎಂದರಲ್ಲದೇ ತಮ್ಮ ಕುಟುಂಬದ ಉದಾಹರಣೆ ನೀಡಿ ವಿದ್ಯೆ ನಮ್ಮ ಸಶಕ್ತಿಕರಣದಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತದೆ ಎಂಬುದನ್ನು ಹಲವು ನಿದರ್ಶನಗಳ ಮೂಲಕ ಮನಮುಟ್ಟುವಂತೆ ತಿಳಿಸಿದರಲ್ಲದೇ, ವಿದ್ಯಾವಂತ ಮಹಿಳೆ ಎಂತಹ ಕಷ್ಟಗಳನ್ನು ಕೂಡ ಗೆಲ್ಲಬಹುದು ಎಂಬ ಸಂದೇಶ ದೊಂದಿಗೆ ಮಹಿಳೆಯರನ್ನು ಹುರಿದುಂಬಿಸಿದರು.
ಸಿಸ್ಟರ್ ತೆರೇಸಾ ಉಪಸ್ಥಿತರಿದ್ದರು. ಶ್ರೀಮತಿ ವಿಜಯ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ರೋಜ್ ಮೇರಿ ಸ್ವಾಗತಿಸಿದರು. ಶ್ರೀಮತಿ ಸಗಾಯ ಮೇರಿಯವರು ವಂದಿಸಿದರು.