ಜನಮನ ಸೆಳೆದ ಭದ್ರಾವತಿ ಮಹಿಳಾ ದಸರಾ…

bdvt2

ಭದ್ರಾವತಿ: ನಾಡ ಹಬ್ಬ ದಸರಾ ಮಹೋತ್ಸವ ಅಂಗವಾಗಿ ನಗರಸಭೆಯ ಆಶ್ರಯದಲ್ಲಿ ಕನಕ ಮಂಟಪದಲ್ಲಿ ನಡೆದ ಮಹಿಳಾ ದಸರಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿವಿಧ ವಿಶಿಷ್ಟ ವೇಷ ಭೂಷಣಗಳ ನೃತ್ಯ ಸ್ಪರ್ಧೆಗಳಲ್ಲಿ ಡಾ. ಅಂಬೇಡ್ಕರ್ ಮಹಿಳಾ ಸಂಘ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ಟ್ರೋಫಿ, ರೂ.೪,೦೦೦ ನಗದು ಹಾಗೂ ಪ್ರಶಸ್ತಿ ಪತ್ರ ಪಡೆದುಕೊಂಡಿತು. ನೃತ್ಯ ನಡೆಸಿದ ಸದಸ್ಯರೊಂದಿಗೆ ನಗರಸಭಾ ಆಯುಕ್ತ ಪ್ರಕಾಶ್ ಚನ್ನಪ್ಪನವರ್, ಕಂದಾಯ ನಿರೀಕ್ಷಕ ಓಂಕಾರಪ್ಪ , ನಿವೃತ್ತ ಪ್ರಾಚಾರ್ಯ ಶಿವಬಸಪ್ಪ, ನಗರಸಭಾ ಸಮುದಾಯ ಅಧಿಕಾರಿ ಸುಹಾಸಿನಿ, ಮಾಜಿ ನಗರ ಸಭಾ ಮಾಜಿ ಅಧ್ಯಕ್ಷರುಗಳಾದ ಲತಾ ಚಂದ್ರಶೇಖರ್ ಮತ್ತು ಗೀತಾ ರಾಜಕುಮಾರ್ ಉಪಸ್ಥಿತರಿದ್ದು ವಿಜೇತರನ್ನು ಸನ್ಮಾನಿಸಿದರು.