ಹವ್ಯಕ ಮಹಾಸಭಾದಿಂದ ಹೆಗಡೆಯವರಿಗೆ ಸಾಧಕ ಸನ್ಮಾನ ….

9sp2

ಸಾಗರ : ಬೆಂಗಳೂರಿನ ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ ಇತ್ತೀಚೆಗೆ ಏರ್ಪಡಿಸಿದ್ದ ಹವ್ಯಕ ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳ ಸಮಾವೇಶದಲ್ಲಿ ಇಲ್ಲಿನ ಹೆಗಡೆ ಇಂಡಸ್ಟ್ರೀಸ್‌ನ ಕೆ.ವಿ. ಲಕ್ಷ್ಮೀನಾರಾ ಯಣ ಹೆಗಡೆಯವರಿಗೆ ಸಾಧಕ ಸನ್ಮಾನ ನೀಡಿ ಗೌರವಿಸಲಾಯಿತು.
ಸಮೀಪದ ಖಂಡಿಕ ಗ್ರಾಮದವರಾದ ಹೆಗಡೆಯವರು, ಸಾಗರದ ಭೀಮನಕೋಣೆ ರಸ್ತೆಯ ಪಕ್ಕದ ಜಮೀನನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡು ೧೯೮೧ರಲ್ಲಿ ಹೆಗಡೆ ಇಂಡಸ್ಟ್ರೀಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಅಡಿಕೆ ಹಾಳೆಯ ಕಪ್ ಮತ್ತು ತಟ್ಟೆ ತಯಾರಿಕೆ ಯಂತ್ರ ಮತ್ತು ಕೃಷಿ ಯಂತ್ರೋಪಕರಣಗಳನ್ನು ಉತ್ಪಾದಿ ಸುತ್ತಿzರೆ. ೧೯೯೧ರಲ್ಲಿ ಹೆಗಡೆ ಫಾರ್ಮ್ ಸ್ಥಾಪನೆ ಮಾಡಿ, ಅಡಿಕೆ, ತೆಂಗು, ಕಾಫಿ, ಏಲಕ್ಕಿ ಹಾಗೂ ವಿವಿಧ ಸೌಂದರ್ಯವರ್ಧಕ ಸಸ್ಯಗಳನ್ನು ಬೆಳೆಸುತ್ತಿzರೆ.
೧೯೯೬ರಲ್ಲಿ ಹೆಗಡೆ ಇರಿಗೇಶನ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಮೈಕ್ರೋ ಸ್ಪ್ರಿಂಕ್ಲರ್ ಮತ್ತು ಫಿಟ್ಟಿಂಗ್ಸ್ ಗಳನ್ನು ಉತ್ಪಾದಿಸುತ್ತಿzರೆ. ೨೦೦೭ ರಲ್ಲಿ ಹೆಗಡೆ ಡೈನಾಮಿಕ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಎಂಜಿನ್ ಚಾಲಿತ ವಾಹನ ಗಳು ಮತ್ತು ಹೊಂಡ ತೋಡುವ ಯಂತ್ರಗಳನ್ನು ತಯಾರಿಸುತ್ತಿzರೆ.
ಕೃಷಿ ಯಂತ್ರೀಕರಣದ ಅಗತ್ಯತೆ ಯನ್ನು ರೈತರಿಗೆ ತಿಳಿಸುವ ಉದ್ದೇಶ ದಿಂದ, ಹೆಗಡೆ ಫಾರ್ಮ್ಸ್‌ನಲ್ಲಿ ಕೃಷಿ ಯಂತ್ರಗಳು ಮತ್ತು ಸಾಧನಗಳ ಪ್ರದರ್ಶನವನ್ನು ಆಯೋಜಿಸಿ zರೆ. ಮೈಕ್ರೋ ಸ್ಪ್ರಿಂಕ್ಲರ್‍ಸ್ ಆವಿಷ್ಕಾರಕ್ಕಾಗಿ ಪ್ಲಾಸ್ಟ್ ಇಂಡಿಯಾ ರಾಷ್ಟ್ರೀಯ ಪ್ರಶಸ್ತಿ ಮತ್ತು ಕೃಷಿ ಯಂತ್ರೀಕರಣದ ಸಾಧನೆಗಾಗಿ ಸುಕೃತಾ ಕೃಷಿ ತಂತ್ರeನ ರಾಜ್ಯ ಪ್ರಶಸ್ತಿಗಳು ಲಭಿಸಿವೆ. ಕೈಗಾರಿಕಾ ಕ್ಷೇತ್ರದಲ್ಲಿ ಸಾಧನೆಯನ್ನು ಪರಿಗಣಿಸಿ ಶ್ರೀ ಅಖಿಲ ಹವ್ಯಕ ಮಹಾಸಭಾವು ಸಾಧಕರು ಎಂದು ಸನ್ಮಾನಿಸಿ ಗೌರವಿಸಿದೆ.