ಡಿಸಿಸಿ ಬ್ಯಾಂಕ್ ಸ್ವಾವಲಂಭಿಯಾಗಿಸಲು ಶ್ರಮಿಸಿ…
ಶಿವಮೊಗ್ಗ : ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನವರು ನಬಾರ್ಡ್ ಬಗ್ಗೆ ದೂಷಣೆ ಮಾಡುತ್ತಿರುವುದರಲ್ಲಿ ಅರ್ಥವಿಲ್ಲ ಎಂದು ಸಹಕಾರ ಭಾರತೀಯ ಜಿಲ್ಲಾ ಕಾರ್ಯದರ್ಶಿ ಎ.ಆರ್. ಪ್ರಸನ್ನಕುಮಾರ್ ಅವರು ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್.ಎಂ. ಮಂಜುನಾಥಗೌಡ ಅವರು ನಬಾರ್ಡ್ ಸಂಸ್ಥೆಯೂ ಪುನರ್ಧನ ಸೌಲಭ್ಯವನ್ನು ಕಡಿತಗೊ ಳಿಸಿದೆ ಎಂದು ಹೇಳುತ್ತಾ ನಬಾರ್ಡ್ ಬಗ್ಗೆ ದೂಷಣೆ ಮಾಡಿದ್ದಾರೆ. ಇದು ಸರಿಯಲ್ಲ, ಡಿಸಿಸಿ ಬ್ಯಾಂಕ್ ಯಾರೋ ಸಹಾಯಧನ ನೀಡುತ್ತಾರೆ, ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡುತ್ತಾರೆ ಎಂದು ನಂಬಿ ಕೊಳ್ಳುವುದರಲ್ಲಿ ಅರ್ಥವಿಲ್ಲ, ಡಿಸಿಸಿ ಬ್ಯಾಂಕ್ ಮೊದಲು ಸ್ವಾವಲಂಭಿಯಾ ಗುವುದನ್ನು ಕಲಿಯಬೇಕಾಗಿದೆ ಎಂದರು.
ನಬಾರ್ಡ್ ಸಂಸ್ಥೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಾಲಯೋಜನೆಗೆ ಅನುಗುಣವಾಗಿ ಪುನರ್ಧನ ನೀಡುತ್ತಾ ಬಂದಿದೆ. ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ನೀಡುತ್ತಿರುವುದರಿಂದ ಅವುಗಳ ಶೇಕಡವಾರು ಪ್ರಮಾಣ ಹೆಚ್ಚಿದೆ. ಡಿಸಿಸಿ ಬ್ಯಾಂಕ್ ತನ್ನ ಆರ್ಥಿಕ ನೆಲೆಯನ್ನು ಬಲಪಡಿಸಲು ಶೇರು ಬಂಡವಾಳವನ್ನು ಹೆಚ್ಚಿಸಿಕೊಂಡಿಲ್ಲ. ಎನ್‌ಪಿಎಗಳನ್ನು ಕಡಿಮೆ ಮಾಡಲು ಗಮನಹರಿಸಿಲ್ಲ. ಇದನ್ನು ಬಿಟ್ಟು ನಬಾರ್ಡ್ ಮೇಲೆ ಆರೋಪ ಹೊರಿ ಸುತ್ತಿರುವುದು ಸರಿಯಲ್ಲ ಎಂದರು.
ಅಲ್ಲದೇ ಡಿಸಿಸಿ ಬ್ಯಾಂಕ್‌ನಲ್ಲಿ ಈ ಹಿಂದೆ ನಡೆದ ಅವ್ಯವಹಾರವೂ ಸಹ ಪುನರ್ಧನದ ಸೌಲಭ್ಯದ ಮೇಲೆ ಪರಿಣಾಮ ಬೀರಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಬಾರ್ಡ್‌ನಿಂದ ಪ್ರಸಕ್ತ ಸಾಲಿನಲ್ಲಿ ೩೨ ಸಾವಿರ ಕೋಟಿ ಮಂಜೂರಾಗಿದ್ದರೆ ಅದರಲ್ಲಿ ೨೫ ಸಾವಿರ ಕೋಟಿಗಳನ್ನು ಡಿಸಿಸಿ ಬ್ಯಾಂಕ್‌ಗೆ ಮತ್ತು ೭ ಸಾವಿರ ಕೋಟಿ ರೂ.ಗಳನ್ನು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಗೆ ನೀಡಿದೆ ಎಂದರು.
ಸಹಕಾರ ಭಾರತಿ ಅಧ್ಯಕ್ಷ ಹೆಚ್. ಎಸ್. ಮಹೇಶ್ ಮಾತನಾಡಿ, ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿರುವ ಸುಮಾರು ೧೭೦ ಕ್ಕೂ ಹೆಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಚುನಾವಣೆಯನ್ನು ಸಂಘಟಿಸುವ ದೃಷ್ಟಿಯನ್ನಿಟ್ಟುಕೊಂಡು ಸದರಿ ಸಂಘಗಳಿಗೆ ಹೊಸ ಮತ್ತು ಹೆಚ್ಚುವರಿ ಸಾಲವಾಗಿ ೧ ಕೋಟಿಗೂ ಹೆಚ್ಚು ಹಣವನ್ನು ಒದಗಿಸುವುದಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡರು ಭರವಸೆ ನೀಡಿದ್ದಾರೆ. ಈ ಭರವಸೆ ಕೇವಲ ಚುನಾವಣೆಯ ಹಿನ್ನಲೆಯಲ್ಲಿದೆ. ಸ್ವಂತ ಬಲವಿಲ್ಲದ ಮೇಲೆ ಏಕೆ ಈ ಅಶ್ವಾಸನೆ ನೀಡಬೇಕು. ಹಾಗಾಗಿ ನಬಾರ್ಡ್‌ನ ಮೇಲೆ ಪುನರ್ಧನ ಕಡಿತದ ಆರೋಪದ ಹಿನ್ನಲೆಯಲ್ಲಿ ರಾಜಕೀಯ ಉದ್ದೇಶವಿದೆಯೇ ಹೊರತು ಬೇರೆ ಏನು ಅಲ್ಲ ಎಂದರು.
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಆರ್ಥಿಕ ಸ್ವಾವಲಂಬನೆಯನ್ನು ತಾನೆ ಸಾಧಿಸಬೇಕು. ಸಂಪನ್ಮೂಲ ಕ್ರೂಢೀಕರಣ ಮಾಡಿಕೊಳ್ಳಬೇಕು, ಯಾವುದೇ ರೀತಿಯಲ್ಲಿ ನಬಾರ್ಡ್‌ಗೆ ಅವಲಂಬನೆ ಯಾಗಬಾರದು ಎಂದರು.
ಸಹಕಾರ ಭಾರತೀಯ ಮಾಜಿ ಅಧ್ಯಕ್ಷ ಕೆ.ರತ್ನಾಕರ್, ಪ್ರಮುಖರಾದ ನಂದೀಶ್, ಕೀರ್ತಿರಾಜ್ ಕಾನಳ್ಳಿ, ಭೀಮರಾವ್, ಶಿವನಂಜಪ್ಪ, ಜಿ. ವಿರೂಪಾಕ್ಷಪ್ಪ ಇದ್ದರು.